” ಕಾಂಗ್ರೆಸ್ ಹಠಾವೋ-ದಲಿತ್ ಬಚಾವೋ ” ಸಮಾವೇಶ
ಕೋಲಾರ,ಆ,೧೫-ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ದಲಿತ ವಿರೋಧ ನೀತಿಯನ್ನು ಖಂಡಿಸಿ “ಕಾಂಗ್ರೇಸ್ ಹಠಾವೋ ದಲಿತ್ ಬಚಾವೋ” ಎಂಬ ಘೋಷಣೆಯಡಿ ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟವು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆ,೨೮ ರಂದು ಬೆಳಿಗ್ಗೆ ೧೧ ಗಂಟೆಗೆ ಬೃಹತ್ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಒಕ್ಕೂಟದ ರಾಜ್ಯ ಸಂಚಾಲಕ ಪೋ. ಹರಿರಾಮ್.ಎ. ತಿಳಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಸಿದ್ದರಾಮಯ್ಯನವರು ಮುಖ್ಯ ಮಂತ್ರಿ ಸ್ಥಾನದ ಅಧಿಕಾರಕ್ಕೆ ಮುನ್ನ ತಾನು ಸಂವಿಧಾನ ಪರ, ಸಂವಿಧಾನ ರಕ್ಷಕ,ದಲಿತರ ಪರ, ಸಮಾಜವಾದಿ ಪಕ್ಷದ ತತ್ವ ಸಿದ್ದಾಂತವನ್ನು ಅಳವಡಿಸಿ ಕೊಂಡು ಸಮಾನತೆಗೆ ಮಾನ್ಯತೆ ನೀಡುವಂತ ಪ್ರಮಾಣಿಕ ವ್ಯಕ್ತಿ ಎಂದು ಬಿಂಬಿಸಿ ಇಂದು ಅಧಿಕಾರ ವಹಿಸಿ ಕೊಂಡ ನಂತರ ಸಂವಿಧಾನದ ಯಾವ ಆಶಯಗಳನ್ನು ಪಾಲಿಸದೆ ದೇಶದ ಕಟ್ಟ ಕಡೆಯ ಸಮುದಾಯವಾದ ದಲಿತ ವರ್ಗದವರ ಸೌಲಭ್ಯ, ಸವಲತ್ತು, ಸಂಪನ್ಮೋಲಗಳನ್ನು ಕಸಿದು ಕೊಂಡಿರುವುದು ಕಳವಳಕಾರಿಯಾಗಿದೆ. ದಲಿತವರ್ಗವನ್ನು ಅಭಿವೃದ್ದಿ ಪಡೆಸುವ ಬದಲಾಗಿ ಶೋಷಣೆಗೆ ಮುಂದಾಗಿ ವಂಚಿಸುತ್ತಿರುವುದು ವಿಶ್ವಾಸ ದ್ರೋಹವಾಗಿದೆ ಎಂದು ಅಕ್ರೋಶ ವ್ಯಕ್ತ ಪಡೆಸಿದರು
ಅಧಿಕಾರ ವಹಿಸಿ ಕೊಂಡು ಒಂದೂವರೆ ವರ್ಷವಾದರೂ ಅಹಿಂದ ವರ್ಗಗಳನ್ನು ಉದ್ದಾರ ಮಾಡುತ್ತೇನೆಂದು ಅಡಳಿತ ಚುಕ್ಕಾಣಿ ಹಿಡಿದ ನಂತರ ದಲಿತರ ಹೊಸ ಯೋಜನೆಗಳನ್ನು ರೂಪಿಸದೆ ಇರುವಂತ ಸೌಲಭ್ಯಗಳನ್ನು ಶಿಕ್ಷಣವನ್ನು ಕಸಿದು ಕೊಂಡಿದ್ದಾರೆ. ದಲಿತ ರಾಮಯ್ಯ ಎಂದು ಹೇಳಿ ಕೊಳ್ಳುತ್ತಿದ್ದವರು ದಲಿತರ ಬೆನ್ನಿಗೆ ಚೂರಿ ಇರಿದಿದ್ದಾರೆ. ಬಜೆಟ್‌ನಲ್ಲಿ ಮೀಸಲಾಗಿರಿಸಿದ್ದ ದಲಿತರ ಅಭಿವೃದ್ದಿ ಹಣ ಎಸ್.ಸಿ..ಎಸ್.ಪಿ./ಟಿ.ಎಸ್.ಪಿ.ಹಣ ಸುಮಾರು ೨೫ ಸಾವಿರ ಕೋಟಿ ಸೇರಿದಂತೆ ಇತರೆ ಎಲ್ಲಾ ಸೌಲಭ್ಯಗಳ ಅನುದಾನ ಸುಮಾರು ೭೫ ರಿಂದ ೮೦ ಸಾವಿರ ಕೋಟಿ ರೂ ದಲಿತರಿಗೆ ವಂಚಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಶೇ ೪೦ ಪರ್ಸ್ಸೆಂಟ್ ಸರ್ಕಾರ ಎಂದು ಟೀಕಿಸುತ್ತಿದ್ದೇವು ಅದರೆ ಸಿದ್ದು ಶೇ ೧೦೦ ಪರ್ಸ್ಸೇಂಟ್ ಸರ್ಕಾರವಾಗಿದೆ. ಬಜೆಟ್‌ನಲ್ಲಿ ಘೋಷಣೆಯಾದ ಅನುದಾನಗಳಿಗೆ ಕನಿಷ್ಟ ಕ್ರಿಯಾ ಯೋಜನೆಯನ್ನು ರೂಪಿಸದೆ ಏಕಾಏಕಿ ದುರ್‍ಬಳಿಸಿಕೊಂಡಿದೆ ಈ ಹಿಂದಿನ ಬಿಜೆಪಿ ಮತ್ತು ಹಾಲಿ ಇರುವ ಕಾಂಗ್ರೇಸ್ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳಾಗಿ ಭ್ರಷ್ಟಚಾರದ ಪರಮಾವಧಿಯನ್ನು ಮೀರಿಸಿವೆ. ಈ ಹಿನ್ನಲೆಯಲ್ಲಿ ಸಿದ್ದು ಹಠಾವ್ ದಲಿತ್ ಬಚಾವ್ ಎಂಬ ಘೋಷಣೆಯಡಿ ರಾಜ್ಯಾದಾದ್ಯಂತ ಎಲ್ಲಾ ಜಿಲ್ಲೆಗಳಿಂದಲೂ ಅಂದು ಪ್ರತಿಭಟನೆಯಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.