ಹಳೆ ವಿದ್ಯಾರ್ಥಿಗಳಿಂದ ಡ್ರಾಮ್ ಸೆಟ್ ಟೈ ಬೆಲ್ಟ್ ವಿತರಣೆ
ಸೇಡಂ, ಅ,೧೫: ತಾಲೂಕಿನ ಹಯ್ಯಾಳ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ೭೮ ನೇ ಸ್ವಾತಂತ್ರ‍್ಯ ದಿನಾಚರಣೆಯ ಪ್ರಯುಕ್ತ ದ್ವಜಾರೋಹಣ ಸಮಾರಂಭದಲ್ಲಿ ಭಾಗಿಯಾದ ಸ್ವಾಮಿ ವಿವೇಕಾನಂದ ಹಳೆ ವಿದ್ಯಾರ್ಥಿಗಳು ಸ.ಹಿ.ಪ್ರಾ ಶಾಲೆ ಹಯ್ಯಾಳ ಸಂಘದ ಸದಸ್ಯರು ಶಾಲಾ ಮಕ್ಕಳಿಗೆ ವಿಶೇಷವಾಗಿ (ಡ್ರಾಮ್ ಸೆಟ್ ಹಾಗೂ ಟೈ ಬೆಲ್ಟ್) ವಿತರಿಸಿದರು. ಈ ವೇಳೆಯಲ್ಲಿ ಶಾಲೆ ಹಳೇ ವಿದ್ಯಾರ್ಥಿಗಳು ಶಿಕ್ಷಕರು, ಶಾಲಾ ಮಕ್ಕಳು ಇದ್ದರು.