ಸಾಯಿಪಾರ್ಕ್ ಬಡಾವಣೆಯಲ್ಲಿ ಸ್ವಾತಂತ್ರ‍್ಯೋತ್ಸವ
ಸಂಜೆವಾಣಿ ವಾರ್ತೆ,
ವಿಜಯಪುರ,ಆ. ೧೫:೭೮ನೇ ಸ್ವಾತಂತ್ರ‍್ಯೋತ್ಸವ ಅಂಗವಾಗಿ ನಗರದ ಸಾಯಿಪಾರ್ಕ್ ಬಡಾವಣೆಯ ಎಕ್ಸೋಟಿಕಾ ಲೇಔಟ್ ನಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಯಿತು.
ನಿವೃತ್ತ ಪೊಲೀಸ್ ಇನ್ಸಪೆಕ್ಟರ್ ಎಂ.ಆರ್. ಬಿರಾದಾರ ಧ್ವಜಾರೋಹಣ ಮಾಡಿದರು.
ಹಿರಿಯ ಸಾಹಿತಿ ಡಾ. ಸರಸ್ವತಿ ಚಿಮ್ಮಲಗಿ, ರೈತ ಸಂಘ ಜಿಲ್ಲಾಧ್ಯಕ್ಷ ಶ್ರೀವಿಜಯ ಪೂಜಾರ, ಹನುಮಂತ ಕಾಳಗಿ, ರಾಜೇಶ ಬಡಿಗೇರ, ಸಿದ್ದು ಇಜೇರಿ, ವಿಜಯಲಕ್ಷ್ಮಿ ಮುಂಡಾಸ, ಗೌರಾಬಾಯಿ ಕುಬಕಡ್ಡಿ, ಎಸ್.ಡಿ. ಕೃಷ್ಣಮೂರ್ತಿ, ನಿವೃತ್ತ ಸೈನಿಕ ವಿ. ಎಸ್. ಬೋಸರೆಡ್ಡಿ ಹಾಗೂ ಬಡಾವಣೆಯ ಹಿರಿಯರು ಹಾಗೂ ನಾಗರಿಕರು ಉಪಸ್ಥಿತರಿದ್ದರು.