ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು: ಪ್ರೊ.ಬಿ.ಎಸ್.ಬಿರಾದಾರ
ಬೀದರ: ಆ.೧೫:ವಿದ್ಯಾರ್ಥಿ ಜೀವನ ಒಂದು ವರದಾನ ಹೀಗಾಗಿ ಸುಂದರ ಸಮೃದ್ಧ ದೇಶ ಕಟ್ಟುವಲ್ಲಿ ಯುವಕರ ಪಾತ್ರ ತುಂಬಾ ಮಹತ್ವದ್ದಾಗಿದೆ. ಆ ದಿಶೆಯಲ್ಲಿ ವಿದ್ಯಾರ್ಥಿಗಳು ಕಾರ್ಯ ನಿರ್ವಹಿಸಬೇಕು ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರ ಅವರು ನುಡಿದರು. ಅವರು ಬೀದರ ವಿಶ್ವವಿದ್ಯಾಲಯದ ರಾಷ್ಟಿçÃಯ ಸೇವಾ ಯೋಜನೆ ಘಟಕದ ವತಿಯಿಂದ ಆಣದೂರವಾಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಷ್ಟಿçÃಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ದೇಶಿಸಿ ಮಾತಾಡಿದರು. ಮಹಾತ್ಮಾ ಗಾಂಧೀಜಿಯವರ ಕನಸಿನ ಸೇವಾ ಮನೋಭಾವ ಎಲ್ಲರಲ್ಲಿ ಮೂಡಬೇಕಾದ ಅವಶ್ಯಕತೆ ಇದೆ. ಹಾಗಾದಾಗ ಮಾತ್ರ ಸಮಾಜದಲ್ಲಿ ಸಮೃದ್ಧಿ, ಶಾಂತಿ, ನೆಮ್ಮದಿ ಮೂಡಲು ಸಾಧ್ಯವೆಂದರು.
ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀನಾಗಭೂಷಣ ಕಮಠಾಣೆಯವರು ಮಾತನಾಡುತ್ತಾ ದೇಶದಲ್ಲಿ ಸಾಧನೆ ಮಾಡಿದ ಬಹತೇಕ ಮಹನೀಯರು ಸಾಧಕರೆಲ್ಲಾ ಸರ್ಕಾರಿ ಶಾಲೆಯಲ್ಲಿಯೇ ಓದಿದವರು. ಹೀಗಾಗಿ ಸರ್ಕಾರಿ ಶಾಲೆ ಎಂದು ನಿರ್ಲಕ್ಷ ಮಾಡಕೂಡದು. ಶಿಬಿರಾರ್ಥಿಗಳು ಸರ್ಕಾರದ ಯೋಜನೆಗಳ ಮಾಹಿತಿಯನ್ನು ಗ್ರಾಮದ ಜನರಿಗೆ ನೀಡಬೇಕಾದ ಅವಶ್ಯಕತೆಯಿದೆ. ಆ ದಿಶೆಯಲ್ಲಿ ಇಂತಹ ಸಣ್ಣ ಗ್ರಾಮದಲ್ಲಿ ರಾಷ್ಟಿçÃಯ ಸೇವಾ ಯೋಜನೆಯ ವಿಶೇಷ ಶಿಬಿರವನ್ನು ಆಯೋಜಿಸಿದ ಬೀದರ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯವೆಂದರು.
ಇನ್ನೋರ್ವ ಅತಿಥಿಗಳು ಸಿಂಡಿಕೇಟ್ ಸದಸ್ಯರಾದ ಶ್ರೀಶಾಂತಲಿAಗ ಸಾವಳಗಿಯವರು ಮಾತನಾಡುತ್ತಾ ಯುವಕರು ಪುಸ್ತಕವನ್ನು ಪ್ರೀತಿಸಬೇಕು. ವೃಥಾ ಕಾಲಹರಣ ಮಾಡಬಾರದು. ಎಲ್ಲರಲ್ಲಿ ಸಮನ್ವಯಭಾವ, ಸಾಮರಸ್ಯದ ಮನೋಭಾವ ಬೆಳೆಯಬೇಕಾದ ಅವಶ್ಯಕತೆಯಿದೆ. ಸುಂದರ ಸಮಾಜದ ನಿರ್ಮಾಣದ ಗುರಿ ಸರ್ವರದಾಗಲಿ ಎಂದರು.
ಅತಿಥಿಗಳಾದ ಬೀದರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಪರಮೇಶ್ವರ ನಾಯಕರವರು ಮಾತನಾಡುತ್ತಾ ಯುವಕರು ನಿಸ್ವಾರ್ಥ ಸೇವೆಯಲ್ಲಿ ತಲ್ಲೀನರಾಗಬೇಕಾದ ಅವಶ್ಯಕತೆ ಇದೆ. ಎಲ್ಲರೂ ಧನಾತ್ಮಕ ಚಿಂತನೆಯಲ್ಲಿ ನಿರತರಾಗಬೇಕು ಆಗ ಮಾತ್ರ ದೇಶದ ಭವಿಷ್ಯ ಉಜ್ವಲವಾಗಲು ಸಾಧವ್ಯವೆಂದರು. ಆಣದರೂ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾ ಶ್ರೀ ಮಲ್ಲಿಕಾರ್ಜುನ ಡೋಣೆಯವರು ಮಾತನಾಡುತ್ತಾ ಶಿಬಿರಾರ್ಥಿಗಳು ತಮ್ಮ ಸೇವೆಯಿಂದ ಖಂಡಿತವಾಗಿಯೂ ಊರಿನ ಜನರ ಪ್ರೀತಿಗಳಿಸುತ್ತಾರೆ, ಸ್ವಚ್ಛತೆಯ ಕುರಿತಾಗಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದರು. ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಶ್ರೀ ಸಂತೋಷ ಲಾಡೆಯವರು ಮಾತಾನಾಡುತ್ತಾ ಆಣದೂರವಾಡಿಯಲ್ಲಿ ಈ ವಿಶೇಷ ಶಿಬಿರ ಆಯೋಜಸಿರುವುದಕ್ಕೆ ವಿಶ್ವವಿದ್ಯಾಲಯಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಸಮಾರಂಭದ ಅಧ್ಯಕ್ಷತೆತಯನ್ನು ವಹಿಸಿದ್ದ ಬೀದರ ವಿಶ್ವವಿದ್ಯಾಲಯದ ರಾಷ್ಟಿçÃಯ ಸೇವಾ ಯೋಜನೆಯ ಸಂಯೋಜಕರಾದ ಡಾ.ರವೀಂದ್ರನಾಥ ಗಬಾಡಿಯವರು ಮಾತನಾಡುತ್ತಾ ಇದು ಬೀದರ ವಿಶ್ವವಿದ್ಯಾಲಯದ ಪ್ರಥಮ ವಿಶೇಷ ಶಿಬಿರವಾಗಿದೆ. ವಿದ್ಯಾರ್ಥಿಗಳ ವ್ಯಕ್ತತ್ವ ವಿಕಸನಕ್ಕಾಗಿ ಈ ಶಿಬಿರ ಮಹತ್ವದ ಪಾತ್ರ ವಹಿಸುತ್ತದೆ. ರೈತರು ಹೆಚ್ಚಾಗಿರುವ ಈ ಊರಲ್ಲಿ ಹಮ್ಮಿಕೊಂಡ ಶಿಬಿರ ಸಾರ್ಥಕವಾಗಿದೆ ಎಂದರು. ಸಮಾರಂಭದಲ್ಲಿ ಆಣದೂರ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಮಹಾದೇವ, ಉಪಾಧ್ಯಕ್ಷರಾದ ಶ್ರೀಮತಿ ಶ್ರೀದೇವಿ ಅಂಬಾದಾಸ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಮತಿ ಮೀನಾ ಸುನೀಲ್, ಆಣದೂರ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಡಾ.ಸಂಜೀವಕುಮಾರ ಅತಿವಾಳೆ, ಬೀದರ ವಿಶ್ವವಿದ್ಯಾಲಯದ ರಾಷ್ಟಿçÃಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ ಡಾ.ರಾಮಚಂದ್ರ ಗಣಾಪೂರರವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಬಿರದ ನಿರ್ದೇಶಕರಾದ ಡಾ.ಕೃಷ್ಣ ಕೂಡಿ, ಶಾಲೆಯ ಶಿಕ್ಷಕರಾದ ಶ್ರೀ ಸಂಜುಕುಮಾರ, ಶ್ರೀಮತಿ ಶುಭಾ, ಶ್ರೀಮತಿ ವಿಮಲಾ ಹಾಗೂ ಊರಿನ ಗಣ್ಯರು, ನಾಗರೀಕರು ಹಾಗೂ ಶಿಬಿರಾರ್ಥಿಗಳು, ಶಾಲೆಯ ಮಕ್ಕಳು, ಪಾಲ್ಗೊಂಡಿದ್ದರು. ಪ್ರಾರ್ಥನಾಗೀತೆಯನ್ನು ಕು.ಜಯಶ್ರೀ ಹಾಡಿದರು. ಪೂಜಾ ಹಾಗೂ ಸಂಗಡಿಗರು ನಾಡಗೀತೆಯನ್ನು ಹಾಡಿದರು. ಕನ್ನಡ ವಿಭಾಗದ ವಿದ್ಯಾರ್ಥಿ ಕು.ನಾಗರಾಜ ಪಿ.ಬುಳ್ಳಾ ಕಂಗನಕೋಟರವರು ಕಾರ್ಯಕ್ರಮವನ್ನು ನಿರೂಪಿಸಿದರು ಅರ್ಥಶಾಸ್ತç ವಿಭಾಗದ ವಿದ್ಯಾರ್ಥಿ ಬಸವರಾಜ ವಂದಿಸಿದರು.