ಶರಣಬಸವೇಶ್ವರ ಸಂಸ್ಥಾನದಿಂದ ಉದ್ಯೋಗ ಕ್ರಾಂತಿ
ಕಲಬುರಗಿ:ಆ.14:ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿ ಅದರಲ್ಲಿ ಉದ್ಯಮಶೀಲತೆಯನ್ನು ಹುಟ್ಟು ಹಾಕಿದರು ಎಂದು ಶರಣಬಸವೇಶ್ವರ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ದಯಾನಂದ ಹೋಡೆಲ್ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ 30 ದಿನಗಳ ಸಾಂಸ್ಕøತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಬುಧವಾರ ಶರಣಬಸವೇಶ್ವರ ಸಂಸ್ಥಾನ ಮತ್ತು ಉದ್ಯೋಗವಕಾಶಗಳು ಎಂಬ ವಿಷಯ ಕುರಿತು ಮಾತನಾಡಿದರು.
ಅಜ್ಞಾನ ಅಂಧಕಾರಗಳಿಂದ ಹೊರ ಬರಲು ಶಿಕ್ಷಣ ಅವಶ್ಯಕ ಹಾಗೂ ವೈಚಾರಿಕತೆ ಜಗತ್ತನ್ನು ಆಳುತ್ತದೆ. ಜಗತ್ತಿನ ನಾಯಕತ್ವ ಜ್ಞಾನ ಹಾಗೂ ಗುಣಾತ್ಮಕ ಶಿಕ್ಷಣದಿಂದ ಚಾರಿತ್ರ್ಯ ನಿರ್ಮಾಣವಾಗುತ್ತದೆ ಎಂಬುವುದು ಅನುಭವದಿಂದ ಬಂದ ನಂಬಿಕೆ. ಇಂತಹ ಶಿಕ್ಷಣದ ಮೂಲಕ ಕನ್ನಡನಾಡಿನ ಮಕ್ಕಳಿಗೆ ಸ್ಫರ್ಧಾತ್ಮಕ ಜಗತ್ತಿನ ಮುಂಚೂಣಿಯಲ್ಲಿ ಈ ಭಾಗದ ಯುವ ಪೀಳಿಗೆಯನ್ನು ಕಂಡೊಯ್ಯುವುದು ಪೂಜ್ಯ ಡಾ.ಅಪ್ಪಾಜಿಯ ಹೆಬ್ಬಯಕೆ.
1903 ರಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸುವುದರ ಮೂಲಕ ಪೂಜ್ಯ ದೊಡ್ಡಪ್ಪ ಅಪ್ಪ ಅವರು 1934 ರಲ್ಲಿ ಮಹಾದೇವಿ ಕನ್ಯಾ ಶಾಲೆಯನ್ನು ಆರಂಭಿಸಿದರೆ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು 2017 ರಲ್ಲಿ ಶರಣಬಸವ ವಿಶ್ವವಿದ್ಯಾಲಯ ಸ್ಥಾಪಿಸಿ ಜಾಗತಿಕ ಜ್ಞಾನ ದಾಸೋಹದತ್ತ ನಡೆದು ಬರಲು ಡಾ.ಅಪ್ಪ ಅವರು ಸವೆಸಿದ ದಾರಿ ಅದೊಂದು ಯೋಧನ ವಿಜಯದ ದಾರಿಯೇ ಸರಿ. ಆ ವಿಜಯದ ಪ್ರತೀಕವೇ ಶರಣಬಸವ ವಿಶ್ವವಿದ್ಯಾಲಯ. ಸ್ವತಂತ್ರವಾಗಿ ವಿಚಾರ ಮಾಡುವುದು, ಸ್ವತಂತ್ರವಾಗಿ ಬರೆಯುವುದು, ಸ್ವತಂತ್ರವಾಗಿ ಮಾತನಾಡುವುದು ಈ ತತ್ವಗಳ ಅಡಿಯಲ್ಲಿ ಶಿಕ್ಷಣವನ್ನು ಅನುμÁ್ಠನಗೊಳಿಸಿ ಸಮಾಜಕ್ಕೂ, ರಾಷ್ಟ್ರಕ್ಕೂ ಕೀರ್ತಿ ತರುವಂತಹ ವಿದ್ಯಾರ್ಥಿಗಳನ್ನು ರೂಪಿಸುತ್ತಿದೆ. ಕಲಬುರಗಿ, ಬೀದರ್, ಬಸವಕಲ್ಯಾಣ ಮತ್ತು ಸುರಪೂರದಲ್ಲಿ ಸುಮಾರು 85 ಕ್ಕೂ ಅಧಿಕ ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಅವುಗಳಲ್ಲಿ 35 ಸಾವಿರ ವಿದ್ಯಾರ್ಥಿಗಳಿಗೆ ಓದುವ ಅವಕಾಶವನ್ನು ಪೂಜ್ಯ ಡಾ.ಅಪ್ಪಾಜಿಯವರು ಕಲ್ಪಿಸಿದ್ದಾರೆ. ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯೇ ಮಾಡಿದ್ದಾರೆ. 4 ಸಾವಿರಕ್ಕಿಂತ ಅಧಿಕ ಜನರಿಗೆ ಉದ್ಯೋಗವಕಾಶಗಳನ್ನು ನೀಡಿದ್ದಾರೆ. ಎಸ್‍ಬಿಆರ್ ಶಾಲೆಯಲ್ಲಿ ಪ್ರತಿವರ್ಷ 500 ಕ್ಕಿಂತ ಅಧಿಕ ವಿದ್ಯಾರ್ಥಿಗಳು ಮೇಡಿಕಲ್, ಇಂಜಿನೀಯರಿಂಗ್ ಓದುತ್ತಾರೆ.
ಪೂಜ್ಯ ಡಾ.ಅಪ್ಪ ಅವರು ಕಿಂಡರಗಾರ್ಡನ ನಿಂದ ಹಿಡಿದು ನರ್ಸರಿ, ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ, ಸ್ನಾತ್ತಕೋತ್ತರ, ಸಂಶೋಧನಾ ಕ್ಷೇತ್ರಳಷ್ಟೇ ಅಲ್ಲದೆ ವಿಜ್ಞಾನ, ಕಲಾ, ವಾಣಿಜ್ಯ , ತಂತ್ರಜ್ಞಾನ, ವ್ಯವಹಾರ ಅಧ್ಯಯನ, ಕೃತಕ ಬುದ್ಧಿಮತ್ತೆಯಂತಹ ಶಿಕ್ಷಣ ಕೊಡುವುದರ ಮೂಲಕ ವಿದ್ಯಾಭಂಡಾರಿಯಾಗಿದ್ದಾರೆ.
ಲಕ್ಷಾಂತರ ಜನರಿಗೆ ಅನ್ನದಾಸೋಹ, ಜ್ಞಾನಧಸೋಹದ ಜೊತೆಗೆ ಉದ್ಯೋಗವಕಾಶವನ್ನು ಮಾಡುತ್ತಿದ್ದಾರೆ. ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪ ಅವರು ಅವರ ಮಾರ್ಗದರ್ಶನದಲ್ಲಿ ಕಲ್ಯಾಣ ಕರ್ನಾಟಕದ ಕಲಬುರಗಿ ಒಂದು ಉದ್ಯೋಗಪರ್ವ ಭಾಗವಾಗಿ ನಿರ್ಮಾಣ ಮಾಡುತ್ತಿದ್ದಾರೆ. ಅನೇಕ ಜನರಿಗೆ ಉದ್ಯೋಗ ಕೊಡುವುದರ ಮೂಲಕ ಅನೇಕ ಕುಟುಂಬಗಳ ಆರ್ಥಿಕ ಸಬಲತೆಗೆ ಕಾರಣರಾಗಿದ್ದಾರೆ ಎಂದು ಹೇಳಿದರು.