ಸ್ವಾತಂತ್ರö್ಯ ದಿನದಂಗವಾಗಿ ಯೋಧರಿಗೆ ಸನ್ಮಾನ
ಕೊಲ್ಹಾರ:ಆ.೧೫: ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಸೊನ್ನದ ಆಗ್ರೋ ಕೇಂದ್ರದಲ್ಲಿ ಜೈ ಕಿಸಾನ್ ಕಂಪೆನಿಯ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಹಾಲಿ ಮತ್ತು ನಿವೃತ್ತ ವೀರಯೋಧರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ವಿಜಾಪುರ ಮಾರ್ಕೆಟಿಂಗ್ ಆಫೀಸರ್ ಭಾಗವತ್ ಪಾಂಚಾಳ, ಮಾಜಿ ತಾಲೂಕ ಪಂಚಾಯತಿ ಅಧ್ಯಕ್ಷ ಕಲ್ಲು ಸೊನ್ನದ ಜೈ ಕಿಸಾನ್ ಕಂಪೆನಿಯ ಕೃಷಿ ಸಲಹೆಗಾರರು ಶಿವನಗೌಡ ಬಿರಾದಾರ ಯೋಧರಾದ ಶಿವಾನಂದ ಚ ತೋಟದ,ಆನಂದ ಗಾಯಕವಾಡ, ಸಯ್ಯದ್ ವಂದಾಲ, ಸದಾಶಿವ ಗಣಿ, ಗಿರಿಮಲ್ಲಪ ಬಗಲಿ, ಕೊಲ್ಹಾರ ತಾಲೂಕಿನ ರೈತರು ಸಹಿತ ಅನೇಕರು ಉಪಸ್ಥಿತರಿದ್ದರು,