ನಾಡಿಗೆ ರಾಯಣ್ಣನ ಕೊಡುಗೆ ಅಪಾರ
ಸಂಜೆವಾಣಿ ವಾರ್ತೆ
ಹುಮನಾಬಾದ್ : ಆ.೧೫:ಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ಗೊಂಡ ಸಮಾಜದ ವತಿಯಿಂದ ಸ್ವಾತಂತ್ರ‍್ಯ ಸೇನಾನಿ ಕ್ರಾಂತಿ ವೀರ ಸಂಗೊಳ್ಳಿ ರಾಮಣ್ಣನವರ ಜಯಂತಿ ಅದ್ದೂರಿಯಾಗಿ ನಡೆಯಿತು.
ಗೊಂಡ ಸಮಾಜದ ಕೆಲ ಮುಖಂಡರು ಮಾತನಾಡಿ, ಕನ್ನಡ ನಾಡಿಗೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನವರು ನೀಡಿರುವ ಕೊಡುಗೆ ಅಪಾರವಾಗಿದೆ. ಹೀಗಾಗಿ ಇಂದಿನ ಯುವ ಪೀಳಿಗೆಗಳು ರಾಯಣ್ಣನವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ನಿಸ್ವಾರ್ಥ ಬದುಕು ಕಳೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೊಂಡ ಸಮಾಜದ ಮುಖಂಡರಾದ ಸತೀಷ ರಾಂಪೂರೆ, ಶಿವರಾಜ ಚೀನಕೇರಾ, ಅಶೋಕ ಸೊಂಡೆ, ಸಂಜೀವಕುಮಾರ ವಡ್ಡನಕೇರಾ, ವಿನಾಯಕ ಮಣಕೋಜಿ, ಪವನಗೊಂಡ, ಶಿವರಾಜ ಕಲಗೊಂಡ, ರವಿ ಸಿಂಧನಕೇರಾ, ಗಣಪತಿ ಅಷ್ಟೋರೆ, ಅಲಿಯಾರ ಖಾನ್, ಉಮೇಶ ಜಮಾದರ್ ಸೇರಿ ಅನೇಕರಿದ್ದರು.