ಬೀದಿವ್ಯಾಪಾರಿಗಳಿಂದ ಸ್ವಾತಂತ್ರೋತ್ಸವ ದಿನಾಚರಣೆ
ಕಲಬುರಗಿ, ಆ.೧೫- ತ್ಯಾಗ ಬಲಿದಾನದ ಮೂಲಕ ಸಿಕ್ಕಿರುವ ಸ್ವಾತಂತ್ರೋತ್ಸವ ದಿನಾಚರಣೆ ಆಚರಿಸುವ ನಾವು ನಮ್ಮ ಪೂರ್ವಿಕರ ಬಲಿದಾನ ಮತ್ತು ದೇಶ ಪ್ರೇಮ ಸ್ಮರಿಸುವ ಈ ಶುಬ ದಿನವನ್ನು ಎಲ್ಲರು ಹಬ್ಬಗಳಂತೆ ಆಚರಿಸಬೇಕು ಎಂದು ಮಾಜಿ ಉಪ ಸಭಾಪತಿ ಡೇವಿಡ್ ಸಿಮಿಯೊನ್ ಅವರು ಕರೆ ನೀಡಿದರು.
ಸುಪರ ಮಾರುಕಟ್ಟೆ ಸಿಟಿ ಬಸ್ ನಿಲ್ದಾಣದ ಹತ್ತಿರದ ಕರ್ನಾಟಕ ಬೀದಿ ವ್ಯಾಪಾರಿಗಳ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ೭೮ನೇ ಸ್ವಾತಂತ್ರೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶ ಮತ್ತು ಸಂವಿಧಾನ ನಮ್ಮ ಉಸಿರಾಗಿದೆ ಎಂದರು.
ಕರ್ನಾಟಕ ಬೀದಿವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಅವರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾಜಿಕ ಕಾರ್ಯಕರ್ತ ಮಂಜುನಾಥ ನಾಲ್ವರಕರ್, ದತ್ತು ಭಾಸಗಿ, ಅಮೃತ ಸಿ.ಪಾಟೀಲ ಸಿರನೂರ, ರವಿ ಒಂಟಿ, ಚಂದ್ರಹಾಸ ಚಿದ್ರಿ, ಬ್ಯಾಂಕ ವ್ಯವಸ್ಥಾಪಕರಾದ ಸುರೇಶ ಶೇರಿಕಾರ, ಶ್ರೀಮತಿ ಸುಮನ್ ಸೇರಿದಂತೆ ಹಲವರಿದ್ದರು.