ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧಿ ಕೇಂದ್ರಗಳು ಅನಗತ್ಯ: ಸಚಿವ ಡಾ. ಶರಣಪ್ರಕಾಶ್ ಪಾಟೀಲ್
ಕಲಬುರಗಿ:ಆ.14: ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಯಾವುದೇ ಮೆಡಿಕಲ್ ಶಾಪ್ ಇರಬಾರದು. ಮೆಡಿಕಲ್ ಶಾಪ್ ಇದ್ರೆ ಬಡವರಿಗೆ ತೊಂದ್ರೆ ಆಗುತ್ತೆ. ಅನಾವಶ್ಯಕ ದುಡ್ಡು ಕೊಟ್ಟು ತೆಗೆದುಕೊಳ್ಳಬೇಕಾಗುತ್ತೆ. ನಾವೇ ಉಚಿತವಾಗಿ ಔಷಧಿ ಕೊಡುತ್ತೇವೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ಕೊಡಬೇಕು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃಧ್ಧಿ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡಜನರಿಗೆ ಅನುಕೂಲ ಆಗಲಿ ಅಂತ ಪ್ರಧಾನಮಂತ್ರಿ ಜನೌಷಧಿ ಕೇಂದ್ರಕ್ಕೆ ಅನುಮತಿ ನೀಡುತ್ತಿಲ್ಲ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿ ಕೊಡಬೇಕು. ಸ್ಟಾಕ್ ಇಲ್ಲದಿದ್ದರೂ ತರಿಸಿಕೊಡಬೇಕು. ಹೀಗಾಗಿ ನಾವು ಜನೌಷಧಿ ಕೇಂದ್ರ ಬೇಡ ಎಂದು ಹೇಳುತ್ತಿದ್ದೇವೆ. ಹಳೇ ಪಿಎಂ ಜನೌಷಧಿ ಕೇಂದ್ರಗಳನ್ನು ರಿನಿವಲ್ ಮಾಡುವುದಿಲ್ಲ. ಬಿಜೆಪಿಯವರು ಗಾಳಿಯಲ್ಲಿ ಗುಂಡು ಹೊಡೆಯೋದು ಬಿಡಬೇಕು. ಸುಮ್ಮನೇ ಎಲ್ಲದಕ್ಕೂ ಆರೋಪ ಮಾಡಿದ್ರೆ ಹೇಗೆ ಎಂದು ಕಿಡಿಕಾರಿದರು.
ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಯಾವುದೇ ಮೆಡಿಕಲ್ ಶಾಪ್ ಇರಬಾರದು. ಮೆಡಿಕಲ್ ಶಾಪ್ ಇದ್ರೆ ಬಡವರಿಗೆ ತೊಂದ್ರೆ ಆಗುತ್ತೆ. ಅನಾವಶ್ಯಕ ದುಡ್ಡು ಕೊಟ್ಟು ತೆಗೆದುಕೊಳ್ಳಬೇಕಾಗುತ್ತೆ. ನಾವೇ ಉಚಿತವಾಗಿ ಔಷಧಿ ಕೊಡುತ್ತೇವೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ಕೊಡಬೇಕು. ಸ್ಟಾಕ್ ಇಲ್ಲ ಅಂದ್ರೂ ತರಿಸಿಕೊಡಬೇಕು. ಹೀಗಾಗಿ ನಾವು ಜನ ಔಷಧಿ ಕೇಂದ್ರ ಬೇಡ ಎನ್ನುತ್ತಿದ್ದೇವೆ. ಸಧ್ಯ ಇರೋ ಮೆಡಿಕಲ್ ಶಾಪ್‍ಗಳ ಅವಧಿ ಮುಗಿದ ಮೇಲೆ ರಿನಿವಲ್ ಮಾಡೋದಿಲ್ಲ. ಹಳೇ ಪಿಎಂ ಜನ ಔಷಧಿ ಕೇಂದ್ರಗಳನ್ನ ರಿನಿವಲ್ ಮಾಡೋದಿಲ್ಲ. ಬಿಜೆಪಿಯವರು ಗಾಳಿಯಲ್ಲಿ ಗುಂಡು ಹೊಡೆಯೋದು ಬಿಡಬೇಕು. ನೆಲದ ಮೇಲೆ ಬಂದು ಬಡವರ ಕಷ್ಟ ನೋಡಿ. ಸುಮ್ಮನೇ ಎಲ್ಲದಕ್ಕೂ ಆರೋಪ ಮಾಡಿದ್ರೆ ಹೇಗೆ? ಎಂದು ಅವರು ಪ್ರಶ್ನಿಸಿದರು.