3.19 ರೂ ಕೋಟಿ ವೆಚ್ಚದಲ್ಲಿ 12 ಪೋಲಿಸ್ ವಸತಿ ನಿಲಯ ಅಡಿಗಲ್ಲು ಹಾಗೂ ಅಮರ್ಜಾ ಆಣೆಕಟ್ಟು ಅಂದಾಜು ಮೊತ್ತ ರೂ.85.86 ಕೋಟಿ ಅಡಿಗಲ್ಲು
ಕಲಬುರಗಿ:ಆ.14: ಕರ್ನಾಟಕ ರಾಜ್ಯ ಪೆÇಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ದಿ ನಿಗಮ ನಿಯಮಿತ ಅಡಿಯಲ್ಲಿ ರೂ 3.19 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 12 ಪೆÇಲೀಸ್ ವಸತಿ ನಿಲಯಗಳಿಗೆ ಅಡಿಗಲ್ಲು ಹಾಗೂ ಆಳಂದ್ ಪಟ್ಟಣಕ್ಕೆ ಅಮರ್ಜಾ ಆಣೆಕಟ್ಟು ಮೂಲದಿಂದ ನೀರು ಸರಬರಾಜು ಅಭಿವೃದ್ದಿ ಯೋಜನೆ ಅಂದಾಜು ಮೊತ್ತ ರೂ 85.86 ಕೋಟಿ ಅಡಿಗಲ್ಲು ನೆರವೇರಿಸಿದರು.
ಬುಧುವಾರದಂದು ಕಲಬುಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಪೊಲೀಸ್ ಕ್ವಾಟರ್ಸದಲ್ಲಿಯ ಕಲಬುರ್ಗಿ ಜಿಲ್ಲಾ ಹಾಗೂ ಕರ್ನಾಟಕ ರಾಜ್ಯ ಪೆÇಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಇವರ ಸಂಯುಕ್ತಾಶ್ರದಲ್ಲಿ ನೂತನವಾಗಿ ನಿರ್ಮಿಸುತ್ತಿರುವ 12 ಪೆÇಲೀಸ್ ವಸತಿ ಗೃಹಗಳ ಕಟ್ಟಡದ ಅಡಿಗಲ್ಲು ಸಮಾರಂಭ ಕಾರ್ಯಕ್ರಮವನ್ನು ಗ್ರಾಮೀಣ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರು ಹಾಗೂ ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವರು ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಮುಖ್ಯ ಮಂತ್ರಿಗಳ ವಿಶೇಷ ಸಲಹೆಗಾರರು ಮತ್ತು ಆಳಂದ ಶಾಸಕ ಬಿ ಆರ್ ಪಾಟೀಲ್ ಬಹಳಷ್ಟು ಪೆÇಲೀಸ್ ಸಿಬ್ಬದಿಂಗಳ ಕೊರತೆ ಇದೆ ನೇಮಕಾತಿಗಳನ್ನು ಮಾಡಿಕೊಳ್ಳಬೇಕು ಹಾಗೂ ಆಳಂದ ಪಟ್ಟಣದಲ್ಲಿ ಎರಡು ಪೆÇಲೀಸ್ ಠಾಣೆಗಳು ಸ್ಥಾಪಿಸಬೇಕೆಂದರು. ಮತ್ತು ಆಳಂದ ಬಸ್ ನಿಲ್ದಾಣದ ಹತ್ತಿರ ಬಹಳಷ್ಟು ಟ್ರಾಫಿಕ್ ಸಮಸ್ಯೆಯಿದೆ ಅದನ್ನು ನಿಗಾವಹಿಸಬೇಕು ನಮ್ಮಲ್ಲಿ ವಿಶಾಲವಾದ ಜಾಗವಿರುವದರಿಂದ ಇಲ್ಲಿ ಒಂದು ಪರೈಡ್ ಮೈದಾನವಾಗಬೇಕು ಪೊಲೀಸರು ನಮ್ಮ ಹಾಗೆ ಮನುಷ್ಯರು ಸಾರ್ವಜನಿಕರ ಹತ್ತಿರ ಒರಟಾಗಿ ವರ್ತಿಸದೆ ಒಳ್ಳೆಯ ಸದ್ಭವನೆಯಿಂದ ವರ್ತಿಸಬೇಕು ಎಂದು ಕಿವಿ ಮಾತು ಹೇಳಿದರು.
ಈ ಒಂದು ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ನಿಯಮಿತ ಅಧ್ಯಕ್ಷರು ಹಾಗೂ ಅಫಜಲಪೂರ ಶಾಸಕರು,ವಿಧಾನ ಪರಿಷತ್ತಿನ ಶಾಸಕರು ಜಗದೇವ ಗುತ್ತೇದಾರ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗ ನಿಯಮಿತಿ ದೇವೆಂದ್ರಪ್ಪ ಮರತೂರು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್,ಉಪ ಪೊಲೀಸ್ ಮಹಾನಿರೀಕ್ಷಕರು ಈಶಾನ್ಯ ವಲಯ ಪ್ರಭಾರಿ ಐಜಿ. ಅಜಯ ಹಿಲೋರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್. ಶ್ರೀನಿಧಿ, ರಾಜ್ಯ ಪೊಲೀಸ್ ಗೃಹ ನಿರ್ಮಾಣ ಮತ್ತು ಅಭಿವೃದ್ಧಿ ನಿಗಮ ನಿಯಮಿತ ಕಾರ್ಯಪಾಲಕ ಅಭಿಯಂತರರು ಶ್ರೀದೇವಿ ಪಾಟೀಲ್. ಉಪಸ್ಥಿರಿದ್ದರು.