ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ:ಪ್ರಿಯಾಂಕ್ ಖರ್ಗೆ
ಕಲಬುರಗಿ,ಆ 14: ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಜೊತೆಗೆ ಬಿಪಿಎಲ್ ಕಾರ್ಡುಗಳಿಗೆ ಮಾನದಂಡ ನಿಗದಿಪಡಿಸಿ ಬದಲಾವಣೆಗಳನ್ನೂ ಕೂಡಾ ಮಾಡುವುದಿಲ್ಲ. ಬಡತನ ರೇಖೆಗಿಂತ ಕೆಳಗೆ ಇರುವವರಲ್ಲಿ ತಾರತಮ್ಯ ಇದೆ ಅದನ್ನು ಹೇಗೆ ಸರಿಪಡಿಸಬೇಕು ಎಂದು ಸಿಎಂ ಹಾಗೂ ಡಿಸಿಎಂ ಅವರೊಂದಿಗೆ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು
ನಗರದ ಪಬ್ಲಿಕ್ ಗಾರ್ಡನ್ ನಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು
ಗೌರಿ ಲಂಕೇಶ್ ಹತ್ಯೆಪ್ರಕರಣದ ಆರೋಪಿಯ ಜೊತೆಗೆ ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಫೆÇೀಟೋ ತೆಗೆಸಿಕೊಂಡಿರುವ ವಿಚಾರ ಅದು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದುಪ್ರಿಯಾಂಕ್ ಖರ್ಗೆ ಟೀಕಿಸಿದರು.ಗೌರಿ ಲಂಕೇಶ್ ಹಾಗೂ ಎಂ ಎಂ ಕಲಬುರಗಿ ಹತ್ಯೆಯ ಹಿಂದೆ ಇಂತಹ ಸಂಘ, ಸಂಘಟನೆಗಳು ಆಲೋಚನೆಗಳು ಇವೆ ಎಂದು ಮೊದಲಿನಿಂದಲೂ ಹೇಳುತ್ತಿದ್ದೇವೆ. ಇದಕ್ಕಿಂತ ಮತ್ತೊಂದು ಸಾಕ್ಷಿ ಏನಿದೆ? ಪ್ರತಾಪ್ ಸಿಂಹ ಆರೋಪಿಯ ಜೊತೆಗಿನ ಫೆÇೀಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಪ್ರಚಾರ ನೀಡುತ್ತಿದ್ದಾರೆ ಎಂದರೆ ಅದು ಅವರ ಮನಸ್ಥಿತಿ ತೋರಿಸುತ್ತದೆ ಎಂದರು.
ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ವಿಜಯೇಂದ್ರ ಹಾಗೂ ಅಶೋಕ ಅವರ ವಿರುದ್ದ ಕೆಲವರು ಬಂಡಾಯವೆದ್ದಿದ್ದಾರೆ. ಅದಕ್ಕೆ ಬೆಳಗಾವಿ ಮೀಟಿಂಗ್ ಗಳು ನಡೆಯುತ್ತವೆ. ಈ ಮೊದಲು ವಿಜಯೇಂದ್ರ ಅವರನ್ನು ಬೈದುಕೊಂಡು ಓಡಾಡುತ್ತಿದ್ದ ಸಿ.ಟಿ. ರವಿ ಈಗ ಸುಮ್ಮನಾಗಿದ್ದಾರೆ. ಕೆಲ ದಿನ ಕಳೆದ ಮೇಲೆ ನೋಡಿ ಇದೇ ರವಿ ಬೆಳಗಾವಿ ಗ್ಯಾಂಗ್ ಸೇರುತ್ತಾರೆ ಎಂದರು.
ಮುಡಾ ಹಗರಣ:
ಮುಡಾ ಹಗರಣ ಬಿಜೆಪಿ ಆಡಳಿತದಲ್ಲೇ ನಡೆದಿತ್ತು. ಆಗ ಯಾಕೆ ತನಿಖೆ ನಡೆಸಲಿಲ್ಲ. ಬಿಜೆಪಿ ನಾಯಕರು ಯಾಕೆ ಸುಮ್ಮನಿದ್ದರು. ನಾವು ತನಿಖೆ ನಡೆಸುತ್ತಿದ್ದೇವೆ ಅದಕ್ಕೆ ಒಬ್ಬನ್ಯಾಯಾಧೀಶರನ್ನ ಕೂಡಾ ನೇಮಕ ಮಾಡಲಾಗಿದೆ ಎಂದರು.
ಸಿ.ಪಿ. ಯೋಗೇಶ್ವರ ಅವರನ್ನ ಕಾಂಗ್ರೆಸ್ ಪಕ್ಷದ ವತಿಯಿಂದ ಚನ್ನಪಟ್ಟಣ ಚುನಾವಣೆಯಲ್ಲಿ ಅಭ್ಯರ್ಥಿ ಮಾಡಲಾಗುತ್ತಿದೆಯೇ? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ಆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಪಕ್ಷದ ತತ್ವ ಸಿದ್ದಾಂತ ಒಪ್ಪಿ ಯಾರು ಬಂದರೂ ಸ್ವಾಗತವಿದೆ. ನನಗಿರುವ ಮಾಹಿತಿ ಪ್ರಕಾರ, ದಿಲ್ಲಿಯಲ್ಲಿ ಅವರಿಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಅವರ ಕೆಲ ಆರೋಪಗಳಿಗೆ ಮೋದಿ, ನಡ್ಡಾ, ಹಾಗೂ ಶಾ ಉತ್ತರಿಸಬೇಕು ಎಂದರು.
ಪಾದಯಾತ್ರೆ:
ತುಂಗಭದ್ರಾ ಜಲಾಶಯದ ಗೇಟ್ ಮುರಿತಕ್ಕೆ ಸಂಬಂಧಿಸಿದಂತೆ ಹಣ ಪಡೆದು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಕ್ಕೆ ಹೀಗೆ ಆಗಿದೆ ಎಂದು ಸಚಿವ ಎಚ್ ಡಿ ಕುಮಾರಸ್ವಾಮಿ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಖರ್ಗೆ ತಾಂತ್ರಿಕ ಸಮಸ್ಯೆ ಎದುರಾಗಿ ಗೇಟ್ ಮುರಿಯೋದಕ್ಕೆ ಮತ್ತು ವರ್ಗಾವಣೆಗೆ ಯಾವ ಸಂಬಂಧವಿದೆ.? ಯಾರಾದರು ಜೆಇ ಗಳು ಹೋಗಿ ಗೇಟ್ ಮುರಿಯುತ್ತಾರ? ಮುಖ್ಯಮಂತ್ರಿ ಯಾಗಿದ್ದವರು ಈಗ ಕೇಂದ್ರ ಸಚಿವರಾಗಿವವರು ಹೀಗೆ ಹೇಳುತ್ತಾರೆ ಎಂದರೆ ಮೈಸೂರು ಪಾದಯಾತ್ರೆ ಅವರ ನಿದ್ದೆಗಡೆಸಿದೆ.
ಕ್ಯಾಬಿನೆಟ್ ವಿಸ್ತರಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ, ಅವೆಲ್ಲ ಮಾಧ್ಯಮಗಳ ಉಹಾಪೆÇೀಹ ಎಂದ ಸಚಿವರು ಕಳೆದು ಚುನಾವಣೆಯ ನಂತರ ಪಕ್ಷದಲ್ಲಿ ಆಂತರಿಕ ಚರ್ಚೆಗಳು ನಡೆದಿವೆ. ಪಕ್ಷದ ವರಿಷ್ಠರಾದ ಕೆ.ಸಿ.ವೇಣುಗೋಪಾಲ್ ಬಂದಿದ್ದರು ಅವರ ಸಮ್ಮುಖದಲ್ಲೇ ಚರ್ಚೆ ನಡೆದಿದೆ. ನಂತರ ಸಚಿವರೊಂದಿಗೆ ಕೂಡ ಚರ್ಚೆ ನಡೆದಿದೆ. ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎನ್ನುವುದನ್ನು ಮೈಸೂರು ಪಾದಯಾತ್ರೆ ಮಾಡಲುವ ಮೂಲಕ ತೋರಿಸಿಕೊಟ್ಟಿದ್ದೇವೆ ಎಂದರು.
ಒಳ ಒಪ್ಪಂದ ಇಲ್ಲ:
ಕಾಂಗ್ರೆಸ್ ಯಾರ ಜೊತೆಗೆ ಒಳ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ ಪ್ರಿಯಾಂಕ್, ಅದೇನಿದ್ದರೂ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಇದೆ. ಕಾಂಗ್ರೆಸ್ ಪಕ್ಷ ಸರಿಯಾದ ಸಮೀಕ್ಷೆ ಮಾಡಿದ್ದರೆ ವಿಜಯೇಂದ್ರ ಸೋಲುತ್ತಿದ್ದರು ಅದನ್ನೇ ಕೂಡಾ ಉಪಮುಖ್ಯಮಂತ್ರಿಗಳು ಹೇಳಿದ್ದಾರೆ ಹೊರತು ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿತ್ತು ಎಂದು ಅವರು ಹೇಳಿಲ್ಲ ಎಂದರು.
ಅದಾನಿ ಗ್ರುಪ್‍ನಲ್ಲಿ ಸೆಬಿ ಮುಖ್ಯಸ್ಥರ ಹೂಡಿಕೆ ವಿಚಾರ ಈ ಹಿಂದೆ ಎರಡು ಸಲ ಆರೋಪ ಬಂದಾಗ ಮಾನ ನಷ್ಟ ಮೊಕದ್ದುಮೆ ದಾಖಲಿಸುವುದಾಗಿ ಅದಾನಿ ಹೇಳಿದ್ದರು, ಯಾಕೆ ಕ್ರಮವಹಿಸಲಿಲ್ಲ ? ಸೆಬಿಯಲ್ಲಿ ಸಾರ್ವಜನಿಕರ ದುಡ್ಡು ಇದೆ. ಈಗ ಸೆಬಿ ಮುಖ್ಯಸ್ಥರ ಮೇಲೆ ಆರೋಪ ಬಂದಿದೆ ಇದನ್ನು ಪ್ರಶ್ನೆ ಮಾಡಬಾರದ? ಮೋದಿ, ನಿರ್ಮಲಾ ಸೀತಾರಾಮನ್, ರವಿಪ್ರಸಾದ್ ಅವರೆಲ್ಲ ಅದಾನಿ ಕಂಪನಿ ಪರ ಯಾಕೆ ವಕಾಲತ್ತು ವಹಿಸುತ್ತಿದ್ದಾರೆ ? ಎಂದು ಪ್ರಶ್ನಿಸಿದರು.