ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗೆ ಶಿಕ್ಷಕರು ವಿಶೇಷ ಕಾಳಜಿ ವಹಿಸಿ : ಜಿಲ್ಲಾಧಿಕಾರಿ ಡಾ.ಸುಶೀಲ.ಬಿ
ಯಾದಗಿರಿ : ಆ.14 : ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗೆ ಶಿಕ್ಷಕರ ಪಾತ್ರ ಬಹಳ ಪ್ರಮುಖವಾಗಿದ್ದು, ಶಿಕ್ಷಕರು ವಿಶೇಷ ಕಾಳಜಿ ವಹಿಸಿ ವಿದ್ಯಾರ್ಥಿಗಳಿಗೆ ಅತ್ಯಂತ ಆಕರ್ಷಕವಾಗಿ ಅವರ ಮನಮುಟ್ಟುವಂತೆ ಪಾಠ ಮಾಡಿ, ಮಕ್ಕಳ ಗೈರು ಹಾಜರು ತಪ್ಪಿಸಲು ಮನೆಮನೆಗೆ ಭೇಟಿ ನೀಡಿ ಎಂದು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ನಿರ್ದೇಶಿಸಿದರು.
ಡಯಟ್ ಪ್ರಾಂಶುಪಾಲರಾದ ವೃಷಬೇಂದ್ರಯ್ಯ ಅವರು ಮಾತನಾಡಿ, ಮಕ್ಕಳ ನಿರಂತರ ಹಾಜರಾತಿಗಾಗಿ ಶಿಕ್ಷಕರು ಸಮವಹಿಸಬೇಕು. ನಿರಂತರ ಕಲಿಕೆ, ಮೌಲ್ಯ ಮಾಪನ ನಡೆಸಬೇಕು. ಫಲಿತಾಂಶಕ್ಕಾಗಿ ಕ್ರಿಯಾಯೋಜನೆಗಳು ಅನುಷ್ಠಾನಕ್ಕೆ ತರಬೇಕು ಎಂದು ನುಡಿದರು.