ಭಕ್ತ ಕುಂಬಾರಗೆ ಇಂಡಿಯನ್ ಬುಕ್ ಆಫ್ ರೇಕಾರ್ಡ ಅವಾರ್ಡ್
ಕಲಬುರಗಿ,ಆ.14-ಸಾವಿರ ಕಾರ್ಯಕ್ರಮಗಳ ಸರದಾರ ಎಂದೆ ಪ್ರಸಿದ್ದಿಯಾದ ಕನ್ನಡದ ಹೆಮ್ಮಯ ನಿರೂಪಕ ಹಾಗೂ ನಮ್ಮ ಕನ್ನಡ ಟಿವಿ ಮಿಡಿಯಾ ಪ್ರಾವೈಟ್ ಲಿಮಿಟೇಡ್ ಮುಖ್ಯಸ್ಥÀ ಡಾ.ಎಸ್.ಎಮ್.ಭಕ್ತ ಕುಂಬಾರÀರವರಿಗೆ ತ್ರಿಶೂಲ ಸಂಸ್ಥೆಯ ವತಿಯಿಂದ 2024ನೇ ಸಾಲಿನ “ಬುಕ್ ಆಫ್ ರೇಕಾರ್ಡ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ನಮಾಮಿ ಶ್ರೀ ರವಿ ಶಂಕರ ಗುರೂಜಿ ದೇವಿ ಆರಾಧಕ ಅಮೃತಪ್ಪ ಸ್ವಾಮಿಜಿ, ಸಮಾಜ ಸೇವಕಿ ಡಾ.ಸ್ಮಿತಾ, ನ್ಯಾಯವಾದಿ ರೇಶ್ಮಾ ಟೊಟದ್ ಹಾಗೂ ತ್ರಿಶೂಲ ಸಂಸ್ಥೆಯ ಮುಖ್ಯಸ್ಥೆ ಶೋಭಾ ರಾಜಶೇಖರವರು ಡಾ.ಎಸ್.ಎಂ.ಭಕ್ತ ಕುಂಬಾರ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದರು.
ಭಕ್ತ ಕುಂಬಾರ ಅವರು ಕಳೆದ ಒಂದು ದಶಕದಿಂದ ಕರ್ನಾಟಕ ಮಾತ್ರವಲ್ಲದೆ ನೇರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ನವ ದೇಹಲಿ ಹೀಗೆ ಅನೇಕ ರಾಜ್ಯಗಳಲ್ಲಿ ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಕಿಣ್ಣಿ( ಸಡಕ) ಗ್ರಾಮದವರಾದ ಭಕ್ತಕುಂಬಾರ ಅವರಿಗೆ ಅನೇಕ ಸಂಘ ಸಂಸ್ಥೆಗಳು 38ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿವೆ.