ಸೂರ್ಯಘರ್ ಯೋಜನೆ: ಜೆಸ್ಕಾಂ ವ್ಯಾಪ್ತಿಯಲ್ಲಿ 2025 ನೋಂದಣಿ 1 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವ ಯೋಜನೆ
ಕಲಬುರಗಿ, ಆ.14: ಜೆಸ್ಕಾಂನ 7 ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆಗೆ ಸಲ್ಲಿಕೆಯಾಗಿರುವ ಒಟ್ಟು 2025 ಅರ್ಜಿಗಳಲ್ಲಿ ಒಟ್ಟು 1951 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ.
ದೇಶಾದ್ಯಂತ ಒಂದು ಕೋಟಿ ಮನೆಗಳ ಛಾವಣಿಗೆ ಸೋಲಾರ್ ಫಲಕ ಅಳವಡಿಸುವ ಮೂಲಕ ಉಚಿತ ವಿದ್ಯುತ್ ಒದಗಿಸುವುದು ಪಿ.ಎಂ ಸೂರ್ಯ ಘರ್ ಮಫ್ತಿ ಬಿಜಲಿ ಯೋಜನೆಯ ಮುಖ್ಯಗುರಿಯಾಗಿದೆ. ಕೇಂದ್ರ ಸರಕಾರದ pmsuryaghar.gov.in ವೆಬ್‍ಸೈಟ್‍ನಲ್ಲಿ ರೂಫ್ ಟಾಪ್ ಸೋಲಾರ್ ವ್ಯವಸ್ಥೆಗೆ ಗೃಹ ಬಳಕೆದಾರರು ಅರ್ಜಿ ಸಲ್ಲಿಸಬಹುದು.
ಈ ಯೋಜನೆಗೆ ಫೆಬ್ರವರಿ 15, 2024 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು, ಯೋಜನೆ ಅಡಿಯಲ್ಲಿ ಛಾವಣಿಯ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಲು 2 ಕಿ.ವ್ಯಾಟ್‍ಗೆ ಶೇ. 60 ರಷ್ಟು, 3 ಕಿ.ವ್ಯಾಟ್‍ಗೆ ಶೇ. 30 ರಷ್ಟು ಸರ್ಕಾರದಿಂದ ಸಬ್ಸಿಡಿ ದೊರೆಯಲಿದೆ. ಯೋಜನೆಯಿಂದ ಸರ್ಕಾರಕ್ಕೆ ವಿದ್ಯುತ್ ವೆಚ್ಚದಲ್ಲಿ ವರ್ಷಕ್ಕೆ 75,000 ಕೋಟಿ ರೂ. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
ಸಬ್ಸಿಡಿ:
1 ಕಿ.ಲೋ. ವ್ಯಾಟ್ ಸಾಮಥ್ರ್ಯದ ವ್ಯವಸ್ಥೆಗೆ 30,000 ರೂ. ಸಬ್ಸಿಡಿ ದೊರೆಯುತ್ತಿದ್ದು, 2 ಕಿಲೋ ವ್ಯಾಟ್ ಸಾಮಥ್ರ್ಯದ ವ್ಯವಸ್ಥೆಗೆ 60,000 ರೂ. ಸಬ್ಸಿಡಿ ನಿಗದಿಪಡಿಸಲಾಗಿದೆ. 3 ಕಿಲೋ ವ್ಯಾಟ್ ಮೇಲ್ಪಟ್ಟ ವ್ಯವಸ್ಥೆಗೆ ಗರಿಷ್ಠ ಸಬ್ಸಿಡಿ ಮಿತಿ 78,000 ರೂ. ದೊರೆಯಲಿದೆ. ಜೊತೆಗೆ ಬ್ಯಾಂಕ್‍ನಿಂದ ಜನಸಮರ್ಥನಲ್ಲಿ 3 ಕಿ.ವ್ಯಾಟ್‍ಗೆ 2 ಲಕ್ಷದವರೆಗೆ ಮತ್ತು 10 ಕಿ.ವ್ಯಾಟ್‍ಗೆ 6 ಲಕ್ಷದ ವರೆಗೆ ಸಾಲ ಸೌಲಭ್ಯ ಸಿಗಲಿದೆ.
ಗ್ರಿಡ್ ಸಂಪರ್ಕದ ಲಾಭವೇನು?
ಕೇಂದ್ರ ಸರ್ಕಾರದ ಈ ಯೋಜನೆಯಿಂದ ವಿದ್ಯುತ್ ಉಳಿತಾಯವಾಗಲಿದ್ದು ಜೆಸ್ಕಾಂ ವ್ಯಾಪ್ತಿಯಲ್ಲಿ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರಕಿರುವುದ ನಿಜಕ್ಕೂ ಶ್ಲಾಘನಿಯ. ರಾಜ್ಯದ ಜನರು ಸೂರ್ಯಘರ್ ಯೋಜನೆಯ ಲಾಭ ಪಡೆದು ವಿದ್ಯುತ್ ಉಳಿಸಿ.
ಕೆ.ಜೆ.ಜಾರ್ಜ್, ಇಂಧನ ಸಚಿವರು
ಸೂರ್ಯಘರ್ ಯೋಜನೆ ಅಡಿ ಮನೆಗಳ ಛಾವಣಿ ಮೇಲೆ ಸೋಲಾರ ಅಳಡಿಸಲಾಗುತ್ತಿದ್ದು, ಇದರಿಂದ ವಿದ್ಯುತ್ ಉಳಿತಾಯವಾಗಲಿದೆ. ಫಲಾನುಭವಿಗಳಿಗೆ ಯೋಜನೆ ಅಡಿ ಸಬ್ಸಿಡಿ ಸಿಗಲಿದ್ದು ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಿ. ಹಸಿರು ಇಂಧನ ಬಳಕೆಗೆ ಒತ್ತು ನೀಡಿ.
ರವಿಂದ್ರ ಕರಲಿಂಗಣ್ಣವರ್, ವ್ಯವಸ್ಥಾಪಕ ನಿರ್ದೇಶಕರು, ಜೆಸ್ಕಾಂ ಕಲಬುರಗಿ
ಜಿಲ್ಲೆ ನೋಂದಣಿಯಾದ ಅರ್ಜಿಗಳು ಫಲಾನುಭವಿಗಳು ಒಟ್ಟು ಸಾಮಥ್ರ್ಯ ಕಿ. ವ್ಯಾ. ಗಳಲ್ಲಿ
ಬಳ್ಳಾರಿ 361 353 1155.92
ಕಲಬುರಗಿ 370 357 1079.6
ಬೀದರ್ 199 196 522.57
ಕೊಪ್ಪಳ 304 296 742
ರಾಯಚೂರ 473 464 1541.41
ಯಾದಗಿರಿ 164 123 329.16
ವಿಜಯನಗರ 181 162 593.09
ಒಟ್ಟು 2025 1951 5964.05