ರೈತರು ಸಾಲದ ಸದುಪಯೋಗ ಪಡೆದುಕೊಂಡು ಸದೃಢರಾಗಿ: ಡಾ. ಅಡಕಿ
ಇಂಡಿ:ಆ.14:ಕೃಷಿಯೊಂದಿಗೆ ರೈತರು ಕುರಿ ಸಾಗಾಣಿಕೆ ಯಂತಹ ಉಪಕಸುಬಿಗೆ ರಾಷ್ಟ್ರೀಯ ಜಾನುವಾರು ಮಿಷನ್ ದಿಂದ ಶೇ 50 ಸಬ್ಸಿಡಿ ನೀಡುತ್ತಿದ್ದು ಮತ್ತು ಕುರಿ ಮತ್ತು ಉಣ್ಣೆ ನಿಗಮದಿಂದ ಶೇ 50 ಸಹಾಯಧನ ನೀಡಿತ್ತಿದ್ದು ರೈತರು ಪಶು ಇಲಾಖೆ ಮತ್ತು ಬ್ಯಾಂಕ ಸಿಬ್ಬಂದಿ ಜೊತೆ ಸದಾ ಸಂಪರ್ಕದಲ್ಲಿದ್ದು ಸಾಲದ ಉಪಯೋಗ ಪಡೆದುಕೊಂಡು ಸದೃಡರಾಗಲು ಇಂಡಿಯ ಹಿರಿಯ ಪಶು ವೈದ್ಯಾಧಿಕಾರಿ ಡಾ. ರಾಜಕುಮಾರ ಅಡಕಿ ಹೇಳಿದರು.
ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವೈಜ್ಞಾನಿಕವಾಗಿ ಕುರಿ ಮತ್ತು ಆಡು ಸಾಗಾಣಿಕೆ ಮೂರು ದಿನಗಳ ರೈತರಿಗೆ ತರಬೇತಿ ಕಾರ್ಯಕ್ರಮದಲ್ಲಿ ರೈತರಿಗೆ ಸಾಲ ಸೌಲಭ್ಯಗಳು ಮತ್ತು ಸರಕಾರದ ಯೋಜನೆಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತರಿಗೆ ನೂರು ಕುರಿಗಳಿದ್ದರೆ ಅದಕ್ಕೆ 20 ಲಕ್ಷ ಸಾಲ ರಾಷ್ಟ್ರೀಯ ಜಾನುವಾರು ಮಿಷನ್ ನೀಡುತ್ತಿದೆ. ಅದರಲ್ಲಿ 10 ಲಕ್ಷ ಸಬ್ಸಿಡಿ ಹಣ ಇರುತ್ತದೆ. ಅದರಂತೆ ಉಣ್ಣೆ ಮತ್ತು ಕುರಿ ನಿಗಮದಿಂದ ಅರ್ಧ ಹಣ ನಿಗಮದಿಂದ ಶೇ 25 ರೈತರ ವಂತಿಕೆ ಮತ್ತು ಶೇ 25 ಸಬ್ಸಿಡಿ ಹೀಗೆ ಅರ್ದ ಹಣ ಇರುತ್ತದೆ ಎಂದರು.
ಕರ್ನಾಟಕದಲ್ಲಿ ವಿಜಯಪುರ ಜಿಲ್ಲೆ ಕುರಿ ಸಾಗಾಣಿಕೆಗೆ ಭಾರತೀಯ ಜಾನುವಾರು ಮಿಷನ್ ದಿಂದ ಸಾಲ ಪಡೆಯುವಲ್ಲಿ ಪ್ರಥಮ ಸ್ಥಾನದಲ್ಲಿದೆ. ನಮ್ಮಲ್ಲಿ ಸಾಲದ ಪ್ರಕಾರ 10 ಲಕ್ಷ ಕುರಿ ಇರಬೇಕು. ಆದರೆ ಕೇವಲ ಒಂದು ಲಕ್ಷ 67 ಸಾವಿರ ಮಾತ್ರ ಕುರಿಗಳಿವೆ. ಉಣ್ಣೆ ಮತ್ತು ಕುರಿ ನಿಗಮದಿಂದ 3 ಲಕ್ಷ ಕುರಿಗಳಿಗೆ ಸಾಲ ನೀಡಿದ್ದಾರೆ. ಹೀಗೆ ಸಾಲದ ದುರುಪಯೋಗವಾದರೆ ಮುಂದೆ ರೈತರಿಗೆ ತೊಂದರೆಯಾಗುತ್ತದೆ ಎಂದರು.
ಸಂಚಾರಿ ಮಾಂಸ ಮಾರಾಟಕ್ಕೆ ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡದವರಿಗೆ ವಾಹನಕ್ಕೆ 10 ಲಕ್ಷ ರೂ ನೀಡುತ್ತಿದ್ದು ಅದರಲ್ಲಿ 8 ಲಕ್ಷ ಸಬ್ಸಿಡಿ ಇರುತ್ತದೆ ಎಂದ ಅವರು ಅನುಗ್ರ ಯೋಜನೆ ಅಡು ಕುರಿ ಸತ್ತರೆ ರೂ 2500 ಇನ್ಸುರೆನ್ಸ ನೀಡುತ್ತಾರೆ ಎಂದರು.
ಡಾ. ಪ್ರಸಾದ ಎಂ.ಜಿ ಯವರು ಕುರಿ ಮತ್ತು ಮೇಕೆಗಳಿಗೆ ಸೂಕ್ತ ನಿರ್ವಹಣೆ ವಸತಿನಿರ್ಮಾಣ ಹಾಗೂ ಅವುಗಳ ನಿರ್ವಹಣೆ, ಕುರಿ ಮತ್ತು ಮೇಕೆಗಳಲ್ಲಿ ಮರು ಉತ್ಪಾದನೆ ತಳಿ ಸಂವರ್ಧನೆ, ಮತ್ತು ಡಾ. ಪ್ರಕಾಶರವರು ಕುರಿ ಮತ್ತು ಮೇಕೆಗಳಿಗೆ ಸೂಕ್ತ ಮೇವಿನ ಬೆಳೆಗಳು ಕುರಿ ಮತ್ತು ಮೇಕೆಗಳಿಗೆ ಸಮತೋಲನ ಆಹಾರದ ಪೂರೈಕೆ ರಸ ಮೇವು ಆಜೋಲ್ಲಾ ಮೇವು ಉತ್ಪಾದನೆ ಕುರಿತು ಮಾತನಾಡಿದರು.
ಡಾ. ಹೀನಾ,ಡಾ. ಪ್ರೇಮಚಂದ್ರ,ಡಾ. ಬಾಲಾಜಿ ನಾಯಕ ಮಾತನಾಡಿದರು.
ತರಬೇತಿಯಲ್ಲಿ ಪ್ರಗತಿಪರ ರೈತರಾದ ಮನೋಹರ ಬಡಿಗೇರ, ಅಣ್ಣಾರಾಯ ಇಕ್ಕಳಕಿ,ಸು ರೇಶ ಅಚ್ಚೆಗಾಂವ, ಮಹಮ್ಮದ ದೇವರ, ರಾಯಪ್ಪ ಹರಳಯ್ಯ, ಶರಣು ಗಿಣ್ಣಿ, ಅಂಬವ್ವ ಇಂಗಳೆ, ಅ ನುಸೂಯಾ ಬಿರಾದಾರ, ಪಾರ್ವತಿ ಲಾಳಸಂಗಿ, ಅಕ್ಷತಾ ಜಂಬಗಿ, ಅಂಬುಬಾಯಿ ಇಂಗಳೆ ಮತ್ತಿತರಿದ್ದರು.