ಹರ್ ಘರ್ ತಿರಂಗಾ ಅಭಿಯಾನದಡಿ ವಿವಿಧ ಕಾರ್ಯಕ್ರಮಗಳಿಗೆ ಡಿ.ಸಿ ಚಾಲನೆ
ಬೀದರ್: ಆ.14: ಹರ್ ಘರ್ ತಿರಂಗಾ ಅಭಿಯಾನ ನಿಮಿತ್ತ ಆ. ಇಂದು ಬೆಳಿಗ್ಗೆ 7 ಗಂಟೆಗೆ ಬೀದರ್ ಕೋಟೆಯಲ್ಲಿ ಜಿಲ್ಲಾಧಿಕಾರಿ ಶ್ರೀಮತಿ ಶಿಲ್ಪಾ ಶರ್ಮ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಬದೋಲೆ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪ್ರದೀಪ ಕುಂಟೆ,, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶಿಲವಂತ ಸೇರಿದಂತೆ ಜಿಲ್ಲೆಯ ಇತರೆ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬೀದರ ಕೋಟೆಯಿಂದ ಈ ರ್ಯಾಲಿ ಮಹ್ಮದ ಗವಾನ ಚೌಕ್, ಡಾ|| ಬಿ.ಆರ್ ಅಂಬೇಡ್ಕರ ವೃತ್ತ, ಶಿವಾಜಿ ವೃತ, ಹರಳಯ್ಯ ವೃತಗಳ ಮಾರ್ಗವಾಗಿ ನೆಹರು ಕ್ರೀಡಾಂಗಣದ ವರೆಗೆ ಹರ್ ಘರ್ ತಿರಂಗಾ-2024 ಕುರಿತು ಪ್ರತಿಜ್ಞಾ ವಿಧಿ ಭೋದನೆಯೊಂದಿಗೆ ತಿರಂಗಾ ಯಾತ್ರೆ ಕಾರ್ಯಕ್ರಮ ನಡೆಯಿತು.
ನಂತರ ಇಂದು ಶ್ರೀ ಸಿದ್ಧಾರೂಢ ಮಠದಿಂದ ಮೈಲೂರು ಕ್ರಾಸ್, ಕನಕದಾಸ ವೃತ, ರೈಲ್ವೆ ಆಂಡರ್ ಬ್ರೀಡ್ಜ, ಭಗತ್ ಸಿಗ್ ವೃತ, ಡಾ|| ಬಿ.ಆರ್ ಅಂಬೇಡ್ಕರ ವೃತ್ತ, ಜನರಲ್ ಕರಿಯಪ್ಪಾ ವೃತಗಳ ಮಾರ್ಗವಾಗಿ ನೆಹರು ಕ್ರೀಡಾಂಗಣದ ವರೆಗೆ ಹರ್ ಘರ್ ತಿರಂಗಾ-2024 ಕುರಿತು ಪ್ರತಿಜ್ಞಾ ವಿಧಿ ಭೋದನೆಯೊಂದಿಗೆ ಬೈಕ್ ರ್ಯಾಲಿ ಜರುಗಿತು.
ತದನಂತರ ಬರೀದ್ ಶಾಹಿ ಉದ್ಯಾನ ವನದಿಂದ ಕೇಂದ್ರ ಬಸ್ ನಿಲ್ದಾಣ, ಮಡಿವಾಳ ವೃತ್ತ, ಕನ್ನಡಾಂಬೆ ವೃತದ ಮಾರ್ಗವಾಗಿ ನೆಹರು ಕ್ರೀಡಾಂಗಣದ ವರೆಗೆ ಹರ್ ಘರ್ ತಿರಂಗಾ-2024 ಕುರಿತು ಪ್ರತಿಜ್ಞಾ ವಿಧಿ ಭೋದನೆಯೊಂದಿಗೆ ತಿರಂಗಾ ಓಟ ಆಯೋಜಿಸಲಾಗಿತ್ತು.
ಹರ್ ಘರ್ ತಿರಂಗಾ ಅಭಿಯಾನ ಕುರಿತು ಕ್ಯಾನ್ವಾಸ್‍ನಲ್ಲಿ ಹರ್ ಘರ್ ತಿರಂಗಾ ಮತ್ತು ಜೈ ಹಿಂದ್ ಅನ್ನು ಯಾವುದೇ ಭಾರತೀಯ ಭಾಷೆಯಲ್ಲಿ ಬರೆಯಲಾಯಿತು. ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗವಹಿಸಿದ ಸಾರ್ವಜನಿಕರು ಜಿಲ್ಲಾ ನೆಹರು ಕ್ರೀಡಾಂಗಣದ ಸೆಲ್ಫಿ ಪಾಯಿಂಟ್‍ನಲ್ಲಿ ಸೆಲ್ಫಿ ತೆಗೆದುಕೊಂಡರು.
ಬೆಳಿಗ್ಗೆ 10ಗಂಟೆಗೆ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ತಿರಂಗಾ ಮೇಳಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.