ರಾಜ್ಯಮಟ್ಟದ ಅಂತರಜಾಲ ಭಾಷಣ ಸ್ಪರ್ದೆ
ತಾಳಿಕೋಟೆ:ಆ.14: ಪಟ್ಟಣದ ವೀ.ವಿ.ಸಂಘದ, ಶ್ರೀ ಖಾಸ್ಗತೇಶ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಂಗಳವಾರ ರಾಜ್ಯಶಾಸ್ತ್ರ ಮತ್ತು ಕನ್ನಡ ವಿಭಾಗದ ಸಹಯೋಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳು ಹಾಗೂ ಸ್ಪರ್ಧೆಯ ನಿರ್ಣಾಯಕರು ಆಗಿರುವ ಗಂಗಾವತಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಜಾಜಿ ದೇವಿಂದ್ರಪ್ಪ ಮಾತನಾಡಿ ಈ ಕಾರ್ಯಕ್ರÀಮವು ವಿದ್ಯಾರ್ಥಿಗಳ ಕ್ರಿಯಾತ್ಮಕ ಮಾದರಿಯ ಕಾರ್ಯಕ್ರಮವೆಂದು ತೋರಿಸಿದೆ “ವಿಜಯಪುರ ಜಿಲ್ಲೆ ಹೋರಾಟದ ನೆಲೆ” ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕನ್ನಡಿಗರ ಪಾತ್ರ ಬಹು ದೊಡ್ಡದಾಗಿದೆ ಎಂದರು.
ಇನ್ನೋರ್ವ ಅತಿಥಿ ಸ್ಪರ್ಧೆಯ ನಿರ್ಣಾಯಕರು ಆಗಿದ್ದ ಬಾಗಲಕೋಟ ಶ್ರೀ ಬಸವೇಶ್ವರ ಕಲಾ ಮಹಾ ವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅಪ್ಪು ಯು.ರಾಠೋಡ ಅವರು ಮಾತನಾಡಿ ಭಾರತ ಸ್ವಾತಂತ್ರ್ಯ ಚಳುವಳಿಯಲ್ಲಿ ಕರ್ನಾಟಕದ ಅನೇಕರು ಎಲೆ ಮರೆಯ ಕಾಯಿಯಂತೆ ಬಹಳಷ್ಟು ಜನ ಹೆಣ್ಣುಮಕ್ಕಳು ಇತಿಹಾಸ ಪುಟದಿಂದ ಕಣ್ಮರೆಯಾಗಿದ್ದಾರೆ, ಅವರನ್ನು ಅನ್ವೇಷಣೆಯ ಮೂಲಕ ಹೊರ ತಂದು ಗುರುತಿಸುವ ಕಾರ್ಯ ನಡೆದಿರುವದು ಸಂತಸದ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಎಸ್.ಕೆ.ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ. ದಯಾನಂದ ಮೂಗಡ್ಲಿಮಠ ಅವರು ಮಾತನಾಡಿ ನಮ್ಮ ಮಹಾವಿದ್ಯಾಲಯದಲ್ಲಿ ಪ್ರಪ್ರಥಮ ಬಾರಿಗೆ ಅಂತರ್ಜಾಲದ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಆ ಕಾರ್ಯಕ್ರಮವು ಇಂದು ಯಶಸ್ವಿಯಾಗಿ ಜರುಗಿರುವದು ಸಂತಸ ತಂದಿದೆ ಎಂದು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾಥಿಗಳಿಗೆ ಶುಭ ಕೋರಿದರು.
ಕಾರ್ಯಕಮವನ್ನು ಸುಷ್ಮಾ ಬಡಿಗೇರ ಹಾಗೂ ಅನುಷಾ ಲಿಂಗದಳ್ಳಿ ಪ್ರಾರ್ಥಿಸಿದರು.
ಆಯ್.ವಿ.ರೋಡಗಿ ಮತ್ತು ಶ್ರೀ ಕೆ.ಬಿ.ದೇಸಾಯಿ ತಾಂತ್ರಿಕ ಸಲಹೆ ನೀಡಿದರು, ಹಾಗೂ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ/ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಒಟ್ಟು 44 ವಿದ್ಯಾರ್ಥಿಗಳು ರಾಜ್ಯದ ವಿವಿಧ ಜಿಲ್ಲೆಗಳಿಂದ ಅಂತರ್ಜಾಲದ ಮೂಲಕ ನೊಂದಾವಣೆ ಮಾಡಿಕೊಂಡು ಭಾಗವಹಿಸಿದ್ದರು.
ಡಾ.ಅಜೇಯ ಅಬ್ಬಾರ ಸ್ವಾಗತಿಸಿದರು, ಡಾ.ಸುಜಾತಾ ಚಲವಾದಿ ಪರಿಚಯಿಸಿದರು, ಶ್ರೀಮತಿ ಸುವರ್ಣಾ ಪಾಟೀಲ ಭಾಷಣ ಸ್ಪರ್ಧೆ ನಡೆಸಿಕೊಟ್ಟರು, ಶ್ರೀಮತಿ ಸಂಗೀತಾ ಕೊಡೇಕಲ್ಲ ನಿರೂಪಿಸಿದರು, ಶ್ರೀಮತಿ ಲಲಿತಾ ಗೌಡರ ವಂದಿಸಿದರು.