ರಾಷ್ಟ್ರ ಧ್ವಜದ ಮಾಹಿತಿ ಪ್ರತಿಯೊಬ್ಬರು ಅರಿತುಕೊಳ್ಳಬೇಕು:ನಾಗೇಶ
ತಾಳಿಕೋಟೆ:ಆ.14: ರಾಷ್ಟ್ರಧ್ವಜ ನೀತಿಸಂಹಿತೆ, ನಿಯಮಗಳ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವಿರಬೇಕು. ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ರಾಷ್ಟ್ರಧ್ವಜಾರೋಹಣ ಸಮಯದಲ್ಲಿ ಸಾಕಷ್ಟು ತಪ್ಪುಗಳು ನಡೆಯುತ್ತವೆ, ಆ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಬೇಕು. ಎಲ್ಲರೂ ರಾಷ್ಟ್ರಧ್ವಜದ ಗೌರವವನ್ನು ಕಾಪಾಡಬೇಕು ಎಂದು ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ ಹೇಳಿದರು.
ಭಾರತ ಸೇವಾದಳ ಜಿಲ್ಲಾ ಸಮಿತಿ ವಿಜಯಪುರ, ತಾಲೂಕ ಸಮಿತಿ ಮುದ್ದೇಬಿಹಾಳ, ಶಾಲಾ ಶಿಕ್ಷಣ ಇಲಾಖೆ ವಿಜಯಪುರ ಹಾಗೂ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾ ವಿದ್ಯಾಲಯ ತಾಳಿಕೋಟೆ ಇವರ ಸಹಯೋಗದಲ್ಲಿ ಎನ್. ಎಸ್ ಎಸ್ ಘಟಕದ ಅಡಿಯಲ್ಲಿ ಎಸ್.ಕೆ.ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತಾದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಧ್ವಜ ನೀತಿಸಂಹಿತೆ ಪ್ರಕಾರ ಧ್ವಜಾರೋಹಣವನ್ನು ಎಷ್ಟು ಶಿಸ್ತು ಬದ್ಧವಾಗಿ ಮಾಡುತ್ತೇವೆ ಅಷ್ಟೇ ಶಿಸ್ತು ಬದ್ದವಾಗಿ ಧ್ವಜ ಅವರೋಹಣವನ್ನು ಮಾಡಬೇಕು, ಹಾಗೇ ಧ್ವಜಾರೋಹಣದ ಸಮಯ ಬೆಳಿಗ್ಗೆ 7-05 ನಿಮಿಷದಿಂದ 9-00 ಗಂಟೆವರೆಗೂ ಮಾಡಬಹುದು, ಹರಿದುಹೋದ, ಮಾಸಿಹೋದ ಧ್ವಜಗಳನ್ನು ಬಳಸಬಾರದು ಎಂದು ತಿಳಿಸುತ್ತಾ ಎಲ್ಲರೂ ರಾಷ್ಟ್ರದ, ರಾಷ್ಟ್ರಧ್ವಜದ ಗೌರವವನ್ನು ಕಾಪಾಡಬೇಕು ಎಂದು ಕರೆ ನೀಡಿದರು. ಹಾಗೇ ಧ್ವಜ ಕಟ್ಟುವ ಮಡಚುವ ಹಾರಿಸುವ ವಿಧಾನಗಳನ್ನು ಪ್ರಾತ್ಯಕ್ಷೀಕವಾಗಿ ತರಬೇತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾಯ9ರಾದ ಡಾ. ಆರ್ ಎಮ್ ಬಂಟನೂರ ರವರು ಮಾತನಾಡಿ ರಾಷ್ಟ್ರಧ್ವಜಕ್ಕೆ ಸಲ್ಲಿಸಬೇಕಾದ ಗೌರವವನ್ನು ಪ್ರತಿಯೊಬ್ಬ ಭಾರತೀಯ ಪ್ರಜೆ ನೀಡಲೆಬೇಕು. ಅದಕ್ಕಾಗಿ ಭಾರತ ಸೇವಾದಳದಿಂದ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರಾದ ಸುರೇಶ ಪಿ ಬಡಿಗೇರ, ಮೌನೇಶ ಕೆಲ್ಲೂರ, ಸಿಬ್ಬಂದಿ ವಗ9 ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಪೆÇ್ರ ಯು,ಎನ್,ಮನಗೊಂಡ ಸ್ವಾಗತಿಸಿದರು, ಉಪನ್ಯಾಸಕರಾದ ಎ.ಎ.ಗಂಗನಗೌಡರ ನಿರೂಪಿಸಿದರು, ಉಪನ್ಯಾಸಕರಾದ. ವಾಯ್ ಎಚ್ ಅಂಗಡಗೇರಿ ವಂದಿಸಿದರು.