168 ರಕ್ತದಾನಿಗಳಿಂದ ರಕ್ತ ಸಂಗ್ರಹ
ಸೇಡಂ: ಅ.14: ಪೂಜ್ಯ ಶ್ರೀ ಮಡಿವಾಳಯ್ಯ ಸ್ವಾಮಿಗಳ 37ನೇ ಪುಣ್ಯ ಸ್ಮರಣೆ , ಶ್ರೀ ಕೊತ್ತಲ ಬಸವೇಶ್ವರ ದೇವಾಲಯ ಪಂಚ ಮಂಡಳಿ, ಶ್ರೀಸಪ್ಪಣ್ಣಾರ್ಯ ದಾಸೋಹ ಸಮಿತಿ ಅಕ್ಕನ ಬಳಗ ಮತ್ತು ಸಮಸ್ತ ಸದ್ಭಕ್ತರು ಆಯೋಜಿತ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣೆ ಹಾಗೂ ಔಷದ ವಿತರಣಾ ಕಾರ್ಯಕ್ರಮವನ್ನು ಪೂಜ್ಯ ಮಡಿವಾಳಯ್ಯ ಸ್ವಾಮಿಗಳ ಸ್ಮಾರಕ ಚಿರಾಯು ಆಸ್ಪತ್ರೆ, ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಸರಕಾರಿ ಆಸ್ಪತ್ರೆ ಕಲಬುರಗಿ, ಶ್ರೀ ಬಸವೇಶ್ವರ ಆಸ್ಪತ್ರೆ ಕಲಬುರ್ಗಿ, ಜೀವನ ಆಧಾರ ಬ್ಲಡ್ ಬ್ಯಾಂಕ್ ಗಳು ಒಟ್ಟು 168 ರಕ್ತದಾನಿಗಳಿಂದ ರಕ್ತ ಸಂಗ್ರಹಿಸಲಾಯಿತು. ತಜ್ಞ ವೈದ್ಯರಾದ ಡಾ. ಅರುಣ್ ಕುಮಾರ್ ಮಹಾಮನಿ, ಡಾ ಪ್ರಶಾಂತ್ ಸಾಗರ್, ಡಾ.ವಂದನಾ ಕಾಮಶೆಟ್ಟಿ, ಡಾ.ಕನಕೇರಿ ಡಾ. ಸೃಷ್ಟಿ ಮಾದೇನೂರ್, ಡಾ ಮಂಜುನಾಥ್ ದೋಶೆಟ್ಟಿ ಡಾ.ಗುರುರಾಜ್ ಪಾಟೀಲ್ ರೇಮಣ್ಣಿ, ಡಾ. ಭರತ್ ಕುಮಾರ್ ಬಾಬುರಾವ್ ಮಿಸ್ಕಿನ್. ಡಾ. ಅಮಿತ್ ಪಾಟೀಲ್ ಡಾ.ಸೂರ್ಯ ತಜ್ಞ ವೈದ್ಯರಿಂದ ಸುಮಾರು 200 ಕ್ಕಿಂತಲೂ ಹೆಚ್ಚು ರೋಗಿಗಳಿಗೆ* ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು ಮತ್ತು ಚಿರಾಯು ಆಸ್ಪತ್ರೆ ಇವರಿಂದ ಉಚಿತ ಔಷಧಿ ವಿತರಿಸಲಾಯಿತು.
ಪೂಜ್ಯ ಶ್ರೀ ಸದಾಶಿವ ಶ್ರೀಗಳ ನೇತೃತ್ವದಲ್ಲಿ ಚಿರಾಯು ಆಸ್ಪತ್ರೆ, ಲೈನ್ ಕ್ಲಬ್ ಸೇಡಂ, ಲೈನ್ಸ್ ಕ್ಲಬ್ ಕಾಗಿಣಾ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಮಾರ್ವಾಡಿ ಯುವ ಮಂಚ, ಮಾರವಾಡಿ ಮಹಿಳಾ ಸಂಘ, ಸೇಡಂ ಪರಿವಾರ ಮತ್ತು ನಾಗರಿಕ ಸಮಿತಿ, ಎಚ್ ಡಿ ಎಫ್ ಸಿ ಬ್ಯಾಂಕ್, ಶ್ರೀ ಕೊತ್ತಲ ಬಸವೇಶ್ವರ ದೇವಾಲಯ ಪಂಚ ಮಂಡಳಿ ಸಹಯೋಗದೊಂದಿಗೆ ರಕ್ತದಾನ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಪೂಜ್ಯಶ್ರೀ ಸಪ್ಪಣ್ಣಾರ್ಯ ಶಿವಯೋಗಿಗಳ ದಾಸೋಹ ಸಮಿತಿಯ ವತಿಯಿಂದ ಪ್ರಸಾದ ವಿತರಿಸಲಾಯಿತು.ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡ ಸರ್ವರನ್ನು, ಸಹಕರಿಸಿದ ವಿವಿಧ ಸಂಘ-ಸಂಸ್ಥೆಗಳಿಗೆ ಶ್ರೀ ಕೊತ್ತಲ ಬಸವೇಶ್ವರ ದೇವಾಲಯ ಸಮಿತಿಯ ವತಿಯಿಂದ ಧನ್ಯವಾದಗಳು ತಿಳಿಸಿದ್ದಾರೆ.