ಉತ್ತಮ ಸಾಧನೆಗೆ ಗುರಿ ಹಾಗೂ ಪರಿಶ್ರಮ ಅತಿಮುಖ್ಯ
ಸೈದಾಪುರ:ಆ.14:ಉತ್ತಮ ಸಾಧನೆಗೆ ಗುರಿ ಹಾಗೂ ಪರಿಶ್ರಮ ಅತಿ ಮುಖ್ಯವಾಗಿದೆ. ಈ ದಿಸೆಯಲ್ಲಿ ಪ್ರಯತ್ನ ಮಾಡಿದರೆ ಯಶಸ್ಸು ನಮ್ಮದಾಗುತ್ತದೆ ಎಂದು ಬಾಚಮಟ್ಟಿ ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ (ಕೃಷಿ ವಿಜ್ಞಾನಿ) ಡಾ.ಮಲ್ಲರೆಡ್ಡಿ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿನ ತಾವು ಕಲಿತ ಶಾಲೆಯಾದ ವಿದ್ಯಾ ವರ್ಧಕ ಪ್ರೌಢ ಶಾಲಾ ವತಿಯಿಂದ ಸನ್ಮಾನಿತರಾಗಿ ಮಾತನಾಡಿದರು. ಕಲಿತ ಶಾಲೆ ಹಾಗೂ ಗುರುಗಳನ್ನು ಗೌರವದಿಂದ ಕಾಣಬೇಕು. ಅವರ ಸಲಹೆ ಹಾಗೂ ಮಾರ್ಗದರ್ಶನವೇ ನನ್ನ ಅಭಿವೃದ್ಧಿಗೆ ಕಾರಣವಾಗಿದೆ. ನಾನು ಸಮಸ್ಯೆಯಲ್ಲಿ ಬೆಳದು ಬಂದವನು ಸಾಧನೆಗೆ ಬಡತನ ಶ್ರೀಮಂತಿಕಗೆ ಕಾರಣಾವಾಗುವುದಿಲ್ಲ. ನಮ್ಮ ಸಾಮಾಥ್ರ್ಯ ಹಾಗೂ ಕೌಶಲ್ಯ ಕೆಲಸ ಮಾಡುತ್ತದೆ ಎಂದು ಕಿವಿ ಮಾತುಗಳನ್ನು ಹೇಳಿದರು.
ಮುಖ್ಯಗುರು ಲಿಂಗಾರೆಡ್ಡಿ ನಾಯಕ ಸನ್ಮಾನಿಸಿ ಮಾತನಾಡಿ, ಡಾ.ಮಲ್ಲರೆಡ್ಡಿ ಅವರ ಸಾಧನೆ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಾಗಿದೆ. ಸತತ ಪರಿಶ್ರಮದಿಂದ ತಾ ಕಂಡ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಗ್ರಾಮೀಣ ಭಾಗದ ರೈತರ ಮಕ್ಕಳೇ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ನಮ್ಮ ಸಂಸ್ಥೆಯಲ್ಲಿ ನಮ್ಮ ಸಂಸ್ಥೆಯ ಹಳೆ ವಿದ್ಯಾರ್ಥಿ ಕೃಷಿ ಇಲಾಖೆಯ ವಿಜ್ಞಾನಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ಸಂಸ್ಥೆಯ ಮಹತ್ವ ಹೆಚ್ಚಾಗುವಂತೆ ಮಾಡಿದೆ. ಇನ್ನೂ ಹೆಚ್ಚಿನ ಸಾಧನೆ ಇವರದಾಗಲಿ ಎಂದು ಹಾರೈಸಿದರು.