ವ್ಯಕ್ತಿತ್ವ ವಿಕಸನವು ಮನುಷ್ಯನಜೀವನ ಮೌಲ್ಯಗಳನ್ನು ಹೆಚ್ಚಿಸುತ್ತದೆ: ದಾನೇಶ್ವರೀಜೀ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಅ.01-ಮೌಲ್ಯಗಳು ಮನುಷ್ಯನಅಂತರಂಗದ ಶೃಂಗಾರವಾಗಿದೆ. ವ್ಯಕ್ತಿತ್ವ ವಿಕಸನವು ಮಾನವನಜೀವನ ಮೌಲ್ಯಗಳಿಗೆ ಆಧಾರವಾಗಿದೆಎಂದು ಪ್ರಜಾಪಿತ ಬ್ರಹ್ಮಾಕುಮಾರಿಈಶ್ವರೀಯ ವಿಶ್ವ ವಿದ್ಯಾಲಯದ ಮುಖ್ಯ ಸಂಚಾಲಕಿ, ಮನೋಬಲ ತರಬೇತುದಾರರಾದರಾಜಯೋಗಿನಿ ಬ್ರಹ್ಮಾಕುಮಾರಿದಾನೇಶ್ವರೀಜೀಅಭಿಪ್ರಾಯಪಟ್ಟರು.
ಅವರು ಪ್ರಕಾಶ ಭವನದಲ್ಲಿ ಏರ್ಪಡಿಸಿದ್ದ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸಮಯವುಒಂದು ಪ್ರಬಲಶಕ್ತಿಯಾಗಿದೆ. ಸಮಯಕ್ಕೆ ಮಹತ್ವವನ್ನುಕೊಡುವ ವ್ಯಕ್ತಿಯುಜೀವನದ ಪ್ರತಿಯೊಂದುಕ್ಷೇತ್ರದಲ್ಲಿ ಸಫಲತೆಯನ್ನು ಸಹಜವಾಗಿ ಪ್ರಾಪ್ತಿ ಮಾಡಿಕೊಳ್ಳುತ್ತಾನೆ ಎಂದರು.
ಇದೇ ಸಂದರ್ಭದಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ 11 ರಾಜಯೋಗ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂಸ್ ಸರ್ವಿಸ್‍ನ ಬಿಕೆ ಆರಾಧ್ಯ, ಪುಟ್ಟಶೇಖರಮೂರ್ತಿ ನಾಗರಾಜು,ಗೀತಾ, ಶಶಿ, ಶ್ರೀನಿವಾಸ್, ನಿರ್ಮಲ ಹಾಜರಿದ್ದರು