ಹಿರಿಯೂರು ರಾಜಾ ದುರ್ಗಾಪರಮೇಶ್ವರಿ ನವರಾತ್ರಿ ಆರಂಭ
ಸಂಜೆವಾಣಿ ವಾರ್ತೆ
ಹಿರಿಯೂರು.ಅ.೧; ಹಿರಿಯೂರಿನ ಸುಪ್ರಸಿದ್ಧ ನಗರ ದೇವತೆ ಶ್ರೀ ರಾಜಾ ದುರ್ಗಾಪರಮೇಶ್ವರಿ ಅಮ್ಮನವರ ನವರಾತ್ರಿ ಉತ್ಸವ  ಭಕ್ತಿ ಭಾವ ದಿಂದನಡೆಸಲು ಏರ್ಪಡಿಸಲಾಗಿದೆ. ಅಕ್ಟೋಬರ್ 2ರಂದು ಮಹಾಲಯ ಅಮಾವಾಸ್ಯೆ ಅಂಗವಾಗಿ ದಸರಾ ಜ್ಯೋತಿ ಪೂಜೆ ಸಂಜೆ 7:30ಕ್ಕೆ ನಡೆಯಲಿದೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಪೂಜೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.  11ರ ಶುಕ್ರವಾರ ಮಹಾ ದುರ್ಗಾಷ್ಟಮಿ ಅಂಗವಾಗಿ ಅಮ್ಮನವರ ಸನ್ನಿಧಾನದಲ್ಲಿ ಬೆಳಿಗ್ಗೆ 8:30 ರಿಂದ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ ದುರ್ಗಾ ಸರಸ್ವತಿ ಸೂತ್ರ ಗ್ರಂಥ ಪಾರಾಯಣ,  ಸಂಜೆ 7ರಿಂದ ವಿಶೇಷ ಮಹಾಪೂಜೆ ಇರುತ್ತದೆ. 12ರ ಶನಿವಾರ ಮಹಾನವಮಿ ಆಯುಧ ಪೂಜೆ  ಸಂಜೆ 4:30 ರಿಂದ ದೇವಸ್ಥಾನದಿಂದ ಅಮ್ಮನವರ ಉತ್ಸವ ಪ್ರಾರಂಭವಾಗುತ್ತದೆ. ಸಂಜೆ 5 ಗಂಟೆಗೆ ಬನ್ನಿ ಉತ್ಸವ ನಡೆಯಲಿದೆ. ಪ್ರತೀದಿನ ಸಂಜೆ  ಲಲಿತಾ ಸಹಸ್ರನಾಮ ಕುಂಕುಮಾರ್ಚನೆ ಅಭಿಷೇಕ ಹಾಗೂ ವಿಶೇಷ ಮಹಾಪೂಜೆ ಇರುತ್ತದೆ. ಎಲ್ಲಾ ಪೂಜಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ರಾಜ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪಕರು ಮನವಿ ಮಾಡಿದ್ದಾರೆ