ಬಂಧಿತ ಹಿಂದೂ ಕಾರ್ಯಕರ್ತರ ಭೇಟಿ ಮಾಡಿದ ಬಿಜೆಪಿ ಯುವಮುಖಂಡರು
ಸಂಜೆವಾಣಿ ವಾರ್ತೆ
ದಾವಣಗೆರೆ.ಅ.೧; ಇಲ್ಲಿನ ಬೇತೂರು ರಸ್ತೆಯ ಗಣಪತಿ ವಿಸರ್ಜನಾ ಸಮಯದಲ್ಲಿ ಆದ ಗಲಾಟೆ ಸಂದರ್ಭದಲ್ಲಿ ಬಂಧಿತರಾದ ಕಾರ್ಯಕರ್ತರನ್ನು  ಯುವ ಮುಖಂಡರಾದ ಜಿ ಎಸ್ ಅನಿತ್ ಕುಮಾರ್ ಅವರು ಜಿಲ್ಲಾ ಕಾರಾಗೃಹದಲ್ಲಿ ಭೇಟಿ ಮಾಡಿ ಸಾಂತ್ವಾನ ಹೇಳಿದರು. ನಂತರ ಅವರ ಮನೆಗಳಿಗೆ ಭೇಟಿ ನೀಡಿ ಧನ ಸಹಾಯ ಮಾಡಿ   ಅವರಿಗೆ ಧೈರ್ಯ ತುಂಬಿದರು. ಹಾಗೂ ವಕೀಲರ ಮುಂದಿನ ಕಾನೂನು ಹೋರಾಟಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ  ಶಾಸಕರಾದ ಬಿ.ಪಿ.ಹರೀಶ್ ಮಾಜಿ ದೂಡಾ  ಅಧ್ಯಕ್ಷರಾದ ಯಶವಂತರಾವ್ ಜಾದವ್ ,  ಒಬಿಸಿ ಮೋರ್ಚ ರಾಜ್ಯ ಉಪಾಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್ , ಮಹಾನಗರ ಪಾಲಿಕೆ ಸದಸ್ಯರು ಯುವ ಮೋರ್ಚಾ ಅಧ್ಯಕ್ಷರಾದ ಶಿವಪ್ರಕಾಶ್ , ಶಂಕರಗೌಡ ಬಿರಾದಾರ್ ಗ್ಯಾರಳ್ಳಿ ಶಿವುಕುಮಾರ್ , ಬಿ. ರಮೇಶ್ ನಾಯ್ಕ್,ರಾಜು ನೀಲಗುಂದ, ಸಿದ್ದಲಿಂಗ ಸ್ವಾಮಿ,, ಮಂಜಾನಾಯ್ಕ್, ಟಿಂಕರ್ ಮಂಜಣ್ಣ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.