ಆಧುನಿಕ ಕೃಷಿ ಅಳವಡಿಕೆಗೆ ಕೃಷಿ ಅಧಿಕಾರಿಗಳ  ಸಲಹೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಅ.1: ಆಧುನಿಕ ಕೃಷಿ ಪದ್ಧತಿ ಅಳವಡಿಕೆಯಿಂದ ರೈತರು ಆರ್ಥಿಕವಾಗಿ ಮುಂದೆ ಬರಲು ಸಾಧ್ಯ ಎಂದು ದಾವಣಗೆರೆ ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ಶ್ರೀಧರ ಮೂರ್ತಿ ಹೇಳಿದರು.ತಾಲ್ಲೂಕಿನ ನಾಗನೂರು ಗ್ರಾಮದಲ್ಲಿ ಸ್ಥಳಿಯ ಭೂ ಮಾತಾ ರೈತ ಉತ್ಪಾದಕರ ಕಂಪನಿ ವತಿಯಿಂದ ಹಮ್ಮಿಕೊಂಡಿದ್ದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಕೃಷಿ ಇಲಾಖೆಯಿಂದ ಸಾಕಷ್ಟು ಸುಧಾರಿತ ಯಂತ್ರೋಪಕರಣಗಳು, ರಾಸಾಯನಿಕಗಳು ಲಭ್ಯವಿದ್ದು, ಇಲಾಖೆಯೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.ಭೂಮಾತಾ ಕಂಪನಿ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಅನ್ನದಾತನ ಅಭಿವೃದ್ಧಿಗೆ ಈ ರೀತಿಯ ಕಂಪನಿಗಳ ಸಹಕಾರ ಇನ್ನೂ ಹೆಚ್ಚಾಗಬೇಕಿದೆ ಎಂದು ಹೇಳಿದರುಕಂಪನಿ ಅಧ್ಯಕ್ಷ ಎನ್.ಕೆ.ಅರುಣ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಂಪನಿ ಸ್ಥಾಪನೆ ಉದ್ದೇಶ ಮತ್ತು ಅದರ ಹಿಂದಿರುವ ಶ್ರಮದ ಬಗ್ಗೆ ಮಾಹಿತಿ ನೀಡಿದರು. ಉಪಾಧ್ಯಕ್ಷ ಎನ್.ಜಿ.ಕರಿಸಿದ್ದಪ್ಪ, ನಿರ್ಧೇಶಕರಾದ ಎಸ್.ಎಂ.ಮಂಜುನಾಥ್, ಎನ್.ಎಂ.ಬಸವರಾಜ್, ಎ.ಅಶೋಕ, ಎನ್.ಎಚ್.ಗಣೇಶ್, ಎನ್.ಡಿ.ಮಧು, ಎನ್.ಕೆ.ನಾಗರಾಜಪ್ಪ, ಕೆ.ವಿ.ಸುರೇಶ್, ಡಿ.ಆರ್.ಧನ್ಯಕುಮಾರ್,  ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್.ಕೆ. ಶ್ರೀನಿವಾಸ್,  ಸಹಾಯಕ‌ ಕಾರ್ಯ ನಿರ್ವಹಣಾಧಿಕಾರಿ ಮಹೇಶ್ವರಪ್ಪ, ಸ್ಥಳಿಯ ಸಂಪನ್ಮೂಲ ವ್ಯಕ್ತಿ ಎಸ್.ಎಚ್.ಸಂತೋಷ್ ಹಾಗೂ ಷೇರುದಾರರು, ರೈತರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಕೃಷಿಯಂತ್ರಗಳು, ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮೇಳಆಯೋಜಿಸಲಾಗಿತ್ತು. ಹಲವಾರು ಕಂಪನಿಗಳು ಭಾಗವಹಿಸಿದ್ದವು. ನಾಗನೂರು.ಶಿರಮಗೊಂಡನಹಳ್ಳಿ, ಶಾಮನೂರು, ಬಿಸಲೇರಿ ಸುತ್ತ, ಮುತ್ತಲ ಗ್ರಾಮಸ್ಥರು ಪ್ರಯೋಜನ ಪಡೆದುಕೊಂಡರು.