ಸರ್ಕಾರಿ ಜಾಗ ಕಬಳಿಸುತ್ತಿರುವರ ವಿರುದ್ಧ ಎಬಿವಿಪಿ ಪ್ರತಿಭಟನೆ
ಬೀದರ್:ಆ.14:ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೀದರ ವತಿಯಿಂದ ಒತ್ತಾಯಿಸುವುದೇನೆಂದರೆ, ಬೀದರ ನಗರದ ಮೈಲೂರಿನ ಸರಕಾರಿ ಪಾಲೀಟೇಕ್ನಿಕ್ ಕಾಲೇಜು ಸೇರಿರುವ ಜಾಗದ ಸುತ್ತುಗೊಡೆ ಒಡೆದು ಖಾಸಗಿ ವ್ಯಕ್ತಿಗಳು ಅನಧೀಕೃತವಾಗಿ ಜಾಗವವನ್ನು ಕಬಳಿಸಿದ್ದಾರೆ.
ಈ ಜಾಗವನು ಕಬಳಿಸಿಕೊಂಡು ಖಾಸಗಿ ವ್ಯಕ್ತಿಗಳು ಮನೆಯನ್ನು ನಿರ್ಮಾಣ ಮಾಡಿಕೊಂಡಿದ್ದಾರೆ ಆದ್ದರಿಂದ ತಾವುಗಳು ಕೂಡಲೇ ಅನಧೀಕೃತವಾಗಿ ಕಬಳಿಸಿಕೊಂಡಿರುವ ಜಾಗವನ್ನು ಕೂಡಲೇ ಖಾಲಿಮಾಡಿಸಿ ಕಾಲೇಜು ವಿದ್ಯಾರ್ಥಿಗಳಿಗೆ ಸುರಕ್ಷತೆಯ ಹಿತದೃಷ್ಟಿಯಿಂದ ಸುತ್ತುಗೊಡೆ ನಿರ್ಮಿಸಿಕೊಡಬೇಕ ತಪ್ಪಿಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೀದರ ಘಟಕದ ವತಿಯಿಂದ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಈ ಹಿಂದೆ ಮನವಿ ಮಾಡಿದರು ಸಹ ಜಿಲ್ಲಾ ಆಡಳಿತ ಹಾಗೂ ನಗರಸಭೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಆದಕಾರಣ ತರಗತಿಗಳನ್ನು ಭಹಿಷ್ಕರಿಸಿ ಉಗ್ರವಾದ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು
ಈ ಆನಂದ್ ನಗರ ಕಾರ್ಯದರ್ಶಿ,ಪವನ್ ಕುಂಬಾರ್ ನಗರ ಸಹ ಕಾರ್ಯದರ್ಶಿ,ಅಭಿಷೇಕ್ ಶಂಬು ಹೋರಾಟ ಪ್ರಮುಖ ಅಭಿಷೇಕ ಶಂಭು,ಪವನ ಕುಂಬಾರ, ವಿಶ್ವಾಸ,ಯಲಾಲಿಂಗ್, ಪ್ರಣವ,ಪೃಥ್ವಿರಾಜ,ವಿಕಾಸ,ಅಂಕಿತ ವಿವೇಕ್ ಕಾಲೇಜ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು