ಬಸವತತ್ವ ಪ್ರಸಾರಕ್ಕಾಗಿ ಸಿದ್ದರಾಮಣ್ಣ ಜೀವನ ಮುಡಿಪು
ಭಾಲ್ಕಿ:ಆ.14:ಬಸವತತ್ವ ಪ್ರಚಾರ-ಪ್ರಸಾರಕ್ಕಾಗಿ ಶತಾಯಷಿ ವಿ.ಸಿದ್ದರಾಮಣ್ಣನವರು ಜೀವನ ಮುಡಿಪಾಗಿಟ್ಟಿದ್ದರು ಅವರ ಅಗಲಿಕೆ ನಾಡಿಗೆ ತುಂಬಲರಾದ ನಷ್ಟುವುಂಟು ಮಾಡಿದೆ ಎಂದು ಅರಣ್ಯ ಮತ್ತು ಪರಿಸರ ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಹೇಳಿದರು.
ಬೆಂಗಳೂರಿನ ವಿಕಾಸ ಸೌಧದ ಅರಣ್ಯ ಇಲಾಖೆ ಕೊಠಡಿಯಲ್ಲಿ ಮಂಗಳವಾರ ವಿ.ಸಿದ್ದರಾಮಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಮಧ್ಯ ಕರ್ನಾಟಕ ಭಾಗದ ದಾವಣಗೆರೆ ಜಿಲ್ಲೆಯ ಮೂಲದವರಾಗಿದ್ದರೂ ಕೂಡ ವಿ.ಸಿದ್ದರಾಮಣ್ಣ ಶರಣರು ಬೀದರ್ ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.
ಭಾಲ್ಕಿಯ ಹಿರೇಮಠ ಸಂಸ್ಥಾನದ ಡಾ.ಚನ್ನಬಸವ ಪಟ್ಟದ್ದೇವರ ಶಿಷ್ಯ ಬಳಗದಲ್ಲಿ ಗುರುತಿಸಿಕೊಂಡಿದ್ದ ಇವರು ಗಡಿ ಭಾಗದಲ್ಲಿ ಬಸವತತ್ವ ಪ್ರಚಾರ ಪ್ರಸಾರಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು.
ಬಸವಕಲ್ಯಾಣ ನೂತನ ಅನುಭವ ಮಂಟಪ ನಿರ್ಮಾಣದಲ್ಲಿ ಡಾ.ಚನ್ನಬಸವ ಪಟ್ಟದ್ದೇವರು, ಶತಾಯಷಿ ಡಾ.ಭೀಮಣ್ಣ ಖಂಡ್ರೆ ಜತೆಗೆ ವಿ.ಸಿದ್ದರಾಮಣ್ಣ ಶರಣರು ಕೈಜೋಡಿಸಿದರು. ಅನುಭವ ಮಂಟಪ ಸಂಚಾಲಕರಾಗಿಯು ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಮ್ಮೆಲ್ಲರಿಗೂ ಮರ್ಗದರ್ಶಕರು ಆಗಿದ್ದರು.
ಅವರ ಅಗಲಿಕೆ ವೈಯಕ್ತಿಕವಾಗಿ ತೀವ್ರ ದುಖ ತರಿಸಿದೆ. ಕುಟುಂಬ ಸದಸ್ಯರಿಗೆ ಅವರ ಅಗಲಿಕೆ ದುಖವನ್ನು ತಡೆದು ಕೊಳ್ಳುವ ಶಕ್ತಿ ಬಸವಣ್ಣನವರು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ, ಶೇಖರಗೌಡ ರಾಮತನಾಳ, ಡಾ.ಕೆ.ಟಿ.ತಿಪ್ಪೇಸ್ವಾಮಿ, ಪ್ರಭಾಕರ ಗೌಡ ಸೇರಿದಂತೆ ಹಲವರು ಇದ್ದರು.