ಸೈಬರ್ ವಂಚಕರ ಕುರಿತು ಜಾಗೃತಿ ಅತ್ಯಗತ್ಯ
ಕಲಬುರಗಿ:ಆ.14:ಇಂದಿನ ಪ್ರಸ್ತುತ ತಂತ್ರಜ್ಞಾನ ಯುಗದಲ್ಲಿ ತಂತ್ರಜ್ಞಾನ ಮುಂದುವರೆದಂತೆ ಕೈಚಳಕನ್ನು ಸೈಬರ್ ವಂಚನೆ ಮೂಲಕ ತೋರಿಸುತಿದ್ದಾರೆ.
ಖಾತೆಗಳಿಂದ ಹಣವನ್ನು ಲಪಟಾಯಿಸುತ್ತದ್ದಾರೆ, ಎಲ್ಲರೂ ಜಾಗರೂಕತೆಯಿಂದ ಇರಬೇಕು ಎಂದು ಮಹಾಗಾಂವ ಕ್ರಾಸ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಮ್ಯಾನೆಜರ್ ರಾಜೇಶ್ ಪ್ರಸಾದ ಹೇಳಿದರು.
ಮಂಗಳವಾರ ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ನಲ್ಲಿರುವ ಸರಕಾರಿ ಹೈನು ಮಹಾವಿದ್ಯಾಲಯದಲ್ಲಿ ಆರ್ ಬಿ ಐ ಹಾಗೂ ನವ ಪ್ರೀತಿ ನವ ನಿರ್ವಹಿತ ಸಂಪನ್ಮೂಲ ಕೇಂದ್ರ ಮತ್ತು ಮೈರಡ ಕೇಂದ ಕಮಲಾಪುರ ವತಿಯಿಂದ ಹಮ್ಮಿಕೊಂಡ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಪರಿಚಯ ಇಲ್ಲದಿರುವರು ಮೊಬೈಲ್ ಗೆ ಕರೆ ಮಾಡಿ ವಿವಿಧ ಆಮಿಷಗಳನ್ನು ಒಡ್ಡಿ ಓಟಿಪಿ ಕೇಳುತ್ತಾರೆ,
ಅಂಥವರಿಗೆ ಓಟಿಪಿ ನೀಡಿದರೆ ನಿಮ್ಮ ಖಾತೆಗಳಲ್ಲಿನ ಹಣ ಲಪಟಾಯಿಸುತ್ತಾರೆ, ಅಂಥವರೊಂದಿಗೆ ವ್ಯವಹರಿಸಬೇಡಿ ,ಕಳೆದ ಹತ್ತು ವರ್ಷಗಳಿಗೆ ಹೋಲಿಸಿದಲ್ಲಿ ಪ್ರಸ್ತುತವಾಗಿ ಬಹುತೇಕ ಎಲ್ಲರೂ ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದಾರೆ, ಹಲವಾರು ಬಗೆಯ ಸಾಲ ಸೌಲಭ್ಯಗಳನ್ನು ಒದಗಿಸುತಿದ್ದು ಅವುಗಳ ಲಾಭ ಪಡೆಯಿರಿ, ಈ ಹಿಂದೆ ಕೇವಲ ಶ್ರೀಮಂತರು ಮತ್ತು ದೊಡ್ಡ ಹುದ್ದೆಗಳಲ್ಲಿರುವವರು ಮಾತ್ರ ವಿಮೆ ಮಾಡಿಸುತಿದ್ದರು,
ಆದರೆ ಈಗ ಎಸ್ ಬಿ ಐ ಬ್ಯಾಂಕ್ ಬಡವರಿಗಾಗಿ ವಾರ್ಷಿಕ 20 ರೂಪಾಯಿ ಮತ್ತು 410 ರೂಪಾಯಿಗಳ ವಿಮೆ ಜಾರಿಗೊಳಿಸಿದ್ದು ಲಕ್ಷಾಂತರ ರೂಪಾಯಿಯ ವಿಮೆ ಪಡೆಯಬಹುದಾಗಿದೆ, ಇತ್ತೀಚೆಗೆ ನಮ್ಮ ಬ್ಯಾಂಕ್ ನಿಂದ 20 ರೂಪಾಯಿ ವಿಮೆ ಮಾಡಿಸಿದ್ದ ಫಲಾನುಭವಿ ಮೃತರಾದ ಬಳಿಕ ವಿಮೆಯ ಪರಿಹಾರ ಹಣ ಕುಟುಂಬಸ್ಥರಿಗೆ ಒದಗಿಸಿದ್ದೆವೆ, ಸರಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಹೈನು ವಿಜ್ಞಾನ ಮಹಾವಿದ್ಯಾಲಯದ ಡೀನ್ ಎಚ್.ಮಂಜುನಾಥ ಮಾತನಾಡಿ ಗ್ರಾಮೀಣ ಬಡ ಜನರ ಮಕ್ಕಳಿಗಾಗಿ ಮಹಾವಿದ್ಯಾಲಯನ್ನು ಸ್ಥಾಪಿಸಲಾಗಿದೆ, ಅದರಲ್ಲಿ ಕ ಕ ಭಾಗದ ವಿದ್ಯಾರ್ಥಿಗಳಿಗೆ ಶೇ.75/ ರಷ್ಟು ಮೀಸಲಾತಿ ನೀಡಲಾಗಿದೆ, ಡೈರಿ ಅಧ್ಯಯನ ಮಾಡಿದವರೆ ನೂರರಷ್ಟು ಉದ್ಯೋಗ ಅವಕಾಶ ಲಭ್ಯವಿದೆ ಎಂದರು.
ಈ ಸಂದರ್ಭದಲ್ಲಿ ನವ ಪ್ರೀತಿ ನಿರ್ವಹಿತ ಸಂಪನ್ಮೂಲ ಕೇಂದ್ರದ ರಿಜನಲ್ ಮ್ಯಾನೇಜರ್ ರವಿಕುಮಾರ್,
ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ, ಹೈನು ವಿಜ್ಞಾನ ಮಹಾವಿದ್ಯಾಲಯದ ಉಪನ್ಯಾಸಕರಾಗಿದ ಶಶಿಕುಮಾರ್, ದೇವರಾಜ,
ಸಿರಾಜ್, ರಫಿಕ್, ಇತರರು ಇದ್ದರು.