ಮಕ್ಕಳಿಂದ ಸ್ವತಂತ್ರ ಹೋರಾಟಗಾರರ ಉಡಿಗೆ ಸ್ಪರ್ಧೆ
ಕಲಬುರಗಿ:ಆ.14:ಲಿಟಲ್ ಲ್ಯಾಂಪ್ಸ್ ಪ್ಲೇ ಸ್ಕೂಲ್.ಜೆ.ಆರ್.ನಗರ ಕಲಬುರಗಿಯಲ್ಲಿ ಪುಟಾಣಿ ಮಕ್ಕಳಿಂದ ಸ್ವತಂತ್ರ ಹೋರಾಟಗಾರರ ಅಲಂಕಾರಿಕ ಉಡಿಗೆ ಸ್ಪರ್ಧೆಯನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿದ್ದರು ಕುಮಾರಿ ನೇಹ ಹವಾನಿ. ಸದರಿ ಶಾಲೆಯ ಮಕ್ಕಳು ಸ್ವತಂತ್ರ ಹೋರಾಟಗಾರರ ಉಡುಗೆ ಮತ್ತು ಅವರ ಸಂದೇಶಗಳನ್ನು ಹೇಳುವುದರ ಮೂಲಕ ದೇಶಾಭಿಮಾನವನ್ನು ಕೊಂಡಾಡಿದರು.
ಈ ಸ್ಪರ್ಧೆಯಲ್ಲಿ ಉತ್ತಮವಾದ ಉಡುಗೆ ಮತ್ತು ಸಂದೇಶಗಳನ್ನು ಹೇಳಿದವರಿಗೆ ಬಹುಮಾನಗಳನ್ನು ನೀಡಲಾಯಿತು.
ಈ ಸಂಸ್ಥೆಯ ಅಧ್ಯಕ್ಷಕಿಯರಾದ ರಾಜೇಶ್ವರಿ. ಎನ್. ಮೂಲಗೆ, ಶಿಕ್ಷಕಿಯರು ಮತ್ತು ಪಾಲಕರು ಭಾಗವಹಿಸಿ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಗೊಳಿಸಿದರು.