ಸ್ವಾತಂತ್ರ ಹೋರಾಟದ ಯಶೋಗಾಥೆ ಅರಿತು ದೇಶ ಸೇವೆ ಸಲ್ಲಿಸುವುದು ಅಗತ್ಯ
ಕಲಬುರಗಿ:ಆ.14: ನಮ್ಮದೇಶದ ಸ್ವಾತಂತ್ರ ಪಡೆಯಲು ಲಕ್ಷಾಂತರ ಮಹನೀಯರುತಮ್ಮ ಸರ್ವಸ್ವವನ್ನುತ್ಯಾಗ ಮಾಡಿದ್ದಾರೆ. ಅವರೆಲ್ಲರ ಹೋರಾಟದ ಪ್ರತಿಫಲವಾಗಿ ನಾವಿಂದು ಸ್ವತಂತ್ರಯುತವಾದಜೀವನ ಸಾಗಿಸುತ್ತಿದ್ದು, ಇತಿಹಾಸಅರಿತರೆ, ಇತಿಹಾಸ ಸೃಷ್ಟಿಸಲು ಸಾಧ್ಯ. ಈ ಹೋರಾಟದಯಶೋಗಾಥೆಯನ್ನು ಎಲ್ಲರುಅರಿತುಕೊಂಡು ಸ್ವಾತಂತ್ರ್ಯದರಕ್ಷಣೆಗೆ ಶ್ರಮಿಸಬೇಕಾಗಿದೆಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದನ್ಯೂರಾಘವೇಂದ್ರಕಾಲನಿಯಲ್ಲಿರುವ’ಶ್ರೀ ವಿವೇಕಾನಂದಕೋಚಿಂಗ್‍ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದದೇಶದ 78ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಬುಧವಾರ ಏರ್ಪಡಿಸಿದ್ದ ‘ಭಾರತ ಸ್ವಾತಂತ್ರದಯಶೋಗಾಥೆ’ ಎಂಬ ವಿಶೇಷ ಉಪನ್ಯಾಸಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಬಹು ಪ್ರಾಚಿನವಾದ ನಾಗರಿಕತೆ ನಮ್ಮದು.ಬ್ರಿಟಿಷ್ ಆಡಳಿತದಲ್ಲಿ ದೇಶದುಸ್ತರವಾಗಿತ್ತು. ನಿರಂತರ ಹೋರಾಟದಿಂದ ಸ್ವಾತಂತ್ರದೊರೆಯಿತು. ನಂತರ ಹೋರಾಟಗಾರರಿಗೆ ಮನಸಿಲ್ಲದಿದ್ದರೂ ಕೂಡಾದೇಶಇಬ್ಬಾಗವಾಯಿತು. ಸ್ವಾತಂತ್ರ ಉಳಿಸಿಕೊಂಡು ಹೋಗುವದುಅವಶ್ಯಕವೆಂದು ಸ್ವಾತಂತ್ರದಇತಿಹಾಸವನ್ನು ವಿವರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಅಧ್ಯಕ್ಷಎಚ್.ಬಿ.ಪಾಟೀಲ ಅವರು,ಅನೇಕ ಮಹನೀಯರತ್ಯಾಗ, ಬಲಿದಾನದ ಮೂಲಕ ಪಡೆದ ಸ್ವಾತಂತ್ರ್ಯವನ್ನು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸೋಣ.ನಮ್ಮದೇಶ ಸಾಧಿಸಿದ್ದು ಬಹಳ.ಜೊತೆಗೆ ಸಾಧಿಸಬೇಕಾದದ್ದುಕೂಡಾಇನ್ನೂಇದೆ. ಪ್ರತಿಯೊಬ್ಬ ಭಾರತೀಯದೇಶಕ್ಕಾಗಿತನ್ನದೇಆದಕೊಡುಗೆಯನ್ನು ನೀಡುವ ಮೂಲಕ ಸ್ವಾತಂತ್ರ ಹೋರಾಟಗಾರರನ್ನುಗೌರವಿಸೋಣಎಂದರು.
ಸಂಸ್ಥೆಯ ಮುಖ್ಯಸ್ಥ ಬಸವರಾಜ ಮಳ್ಳಿ ಮಾತನಾಡಿ, ಸ್ವಾತಂತ್ರ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಅಂತಃಕಲಹಕ್ಕೆ ಆಸ್ಪದನೀಡಬಾರದು. ವಿದ್ಯಾರ್ಥಿದೆಸೆಯಿಂದಲೇದೇಶಪ್ರೇಮಮೈಗೂಡಿಸಿಕೊಳ್ಳಿಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕರಾದ ಸುನಿಲ ಸೊನ್ನ್, ಅಕ್ಷತಾಬಿರಾದಾರ, ಪ್ರಮುಖರಾದಗಣೇಶ, ಕಾವೇರಿ, ದೇವರಾಜ, ಕಾವ್ಯಶ್ರೀ, ತರುಣಾ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.