ಕೆಪಿಎಸ್ ಆದರ್ಶ ನಗರ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ
ಕಲಬುರಗಿ;ಆ.14: ನಗರದ ಕರ್ನಾಟಕ ಪಬ್ಲಿಕ್ ಶಾಲೆ ಆದರ್ಶ ನಗರ ಶಾಲೆಯಲ್ಲಿ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನಿವೃತ್ತ ಅಧೀಕ್ಷಕ ಅಭಿಯಂತರರಾದ ದಿ. ಜಿ.ಎಸ್.ದೇವೂರ ಅವರ ಸ್ಮರಣಾರ್ಥ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ವಿವಿಧ ವಿಷಯ ಶಿಕ್ಷಕರು ಅವರ ವಿಷಯದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ವಿವಿಧ ಪ್ರಶಸ್ತಿ ನೀಡುವುದರ ಜೊತೆಗೆ ಬಹುಮಾನಗಳನ್ನು ನೀಡಿ ಗೌರವಿಸುವ ಮೂಲಕ ಇತರೆ ಸರಕಾರಿ ಶಾಲೆಯ ಶಿಕ್ಷಕ ವೃಂದದವರಿಗೆ ಮಾದರಿಯಾಗಿದ್ದಾರೆ.
ಸೇಡಂ ಸರಕಾರಿ ಪದವಿ ಮಹಾವಿದ್ಯಾಲಯದ ಪೆÇ್ರಫೆಸರ್ ಶಶಿಶೇಖರ ರೆಡ್ಡಿ, ಆದರ್ಶ ನಗರ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ವೆಂಕಟರಾವ್ ದೇಶಪಾಂಡೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಪ್ರಾಂಶುಪಾಲರಾದ ಅರುಣ್ ಕುಮಾರ್ ಪಾಟೀಲ್ ಅವರು ಅಧ್ಯಕ್ಷತೆ ವಹಿಸಿದ್ದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರತಿಮಾ ದೇವೂರ, ಸಹ ಶಿಕ್ಷಕರಾದ ಶಿವಲೀಲಾ, ಶಶಿಕಲಾ, ವಿದ್ಯಾವತಿ, ಸುರೇಖಾ, ಲಕ್ಷ್ಮಿ , ವಿಜಯಲಕ್ಷ್ಮಿ, ಅಮೋಘಪ್ಪ, ರಾಮಣ್ಣ, ದತ್ತಾತ್ರೇಯ, ಮಲ್ಲಿಕಾರ್ಜುನ, ಪವನ್ ಕುಮಾರ್ ಸೇರಿದಂತೆ ಶಾಲಾ ವಿದ್ಯಾರ್ಥಿಗಳು
ಹಾಜರಿದ್ದರು.