ಅಪರೂಪದ ಬಸವ ಚೇತನರಿಗೆ ಬಸವ ಕೇಂದ್ರದ ನುಡಿ ನಮನ
ಬೀದರ:ಆ.14:ಮೂಢನಂಬಿಕೆ, ಕಂದಾಚಾರ, ಪ್ರಾಣಿ ಬಲಿ ಎಂಬ ಅವೈಜ್ಞಾನಿಕ ವಿಚಾರದಿಂದ ಸಿಡಿದು ಬಂದು ಪೂಜ್ಯ ಶ್ರೀ ಲಿಂಗಾನಂದ ಮಹಾಸ್ವಾಮಿಗಳಿಂದ ಪ್ರಭಾವಿತರಾಗಿ ರಾಜ್ಯಾದ್ಯಂತ ತಿರುಗಿ ವಚನ ಸಾಹಿತ್ಯವಪ್ರಚಾರ ಮಾಡಿ ಸುಮಾರು ಮೂವತ್ತು ವರ್ಷಗಳ ಕಾಲ ಬಸವ ಕಲ್ಯಾಣ ಅನುಭವ ಮಂಟಪದ ಸಂಚಾಲಕರಾಗಿ ಸೇವೆ ಮಾಡಿದ ಬಸವ ಹೃದಯಿಗಳಾದ ಪೂಜ್ಯ ಶ್ರೀ ವ್ಹಿ ಸಿದ್ಧರಾಮಣ್ಣನವರು ಲಿಂಗೈಕ್ಯರಾಗಿದ್ದು ಬಸವ ಅನುಯಾಯಿಗಳಿಗೆ ಅಘಾತವನ್ನುಂಟು ಮಾಡಿದೆ ಎಂದು ಪ್ರಗತಿಪರ ಚಿಂತಕ ಪ್ರೊ. ಸಿದ್ದು ಯಾಪಲಪರವಿ ಕಂಬನಿ ಮಿಡಿದರು.
ಬಸವ ಕೇಂದ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದೊಂದಿಗೆ ವಿದ್ಯಾನಗರದಲ್ಲಿ ಲಿಂಗೈಕ್ಯ ಪೂಜ್ಯ ಶ್ರೀ ವ್ಹಿ ಸಿದ್ಧರಾಮಣ್ಣನವರ ನುಡಿ ನಮನದಲ್ಲಿ ಪೂಜ್ಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು ಪೂಜ್ಯರು ನೇರ ನಿಷ್ಠೂರ ಸ್ಪಷ್ಟತೆ ಉಳ್ಳ ಘನಮಹೀಮರು, ಹತ್ತಾರು ಪುಸ್ತಕ ಬರೆದು, ಸ್ವತಃ ವಚನಗಳಿಗೆ ರಾಗ ಸಂಯೋಜನೆ ಮಾಡಿ ಹಾಡುವಾಗ ಇಡೀ ಸಾಗರೋಪಾದಿಯ ಜನಸಾಗರ ಬೆಚ್ಚಿ ಬೆರಗಾಗಿತ್ತಿತ್ತು, ಏಕ ನಿμÉ್ಟ, ಧರ್ಮ ಸಹಿಷ್ಣುತೆ ಯಾಗಿ ನಾಟಕ ಸಹ ಆಡುವ ಹವ್ಯಾಸಿ ಕಲಾವಿದರು ಇವರಾಗಿದ್ದರು, ಶರಣ ನನ್ನಯ್ಯ ನಾಟಕ ರಾಜ್ಯದಲ್ಲಿ ಮನೆ ಮಾತಾಗಿತ್ತು ಎಂದು ನುಡಿದರು.
ಪರಮ ಪೂಜ್ಯ ಶ್ರೀ ಮ.ನಿ.ಪ್ರ. ಡಾ. ಶಿವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತ ನಮಗೂ ಸಿದ್ಧರಾಮಣ್ಣನವರಿಗೂ ನಾಲ್ವತ್ತು ವರ್ಷಗಳ ನಂಟು ಇದೆ. ಅವರು ಈ ನಾಡೀನ ಶ್ರೇಷ್ಠ ಬಸವ ಹೃದಯವಂತರಾಗಿದ್ದರು. ಶರಣ ಕಮ್ಮಟ, ದಿನಾಲೂ ಒಬ್ಬರೇ ಅನುಭವ ಮಂಟಪ ದಲ್ಲಿ ಪ್ರಾರ್ಥನೆ ಮಾಡುವ ಪರಿಪಾಠ ತಮ್ಮದಾಗಿಸಿ ಕೊಂಡವರು. ಯಾವುದೇ ಮುಲಾಜಿಗೆ ಒಳಗಾಗದೇ ತತ್ತ್ವ ವನ್ನು ಬೆಳೆಸಿ ಉಳಿಸಿ ಮಹಾ ಜಂಗಮರು. ಅವರು ಲಿಂಗದಲ್ಲಿ ಲೀನ ವಾಗಿರುವ ಸುದ್ದಿ ಅರಿತು ತುಂಬ ದುಃಖಗೊಂಡಿರುವೆನು. ಬಸವ ಕೇಂದ್ರದ ಬಳಗದವರು ಮತ್ತಿಹಳ್ಳಿಗೆ ಅಂತ್ಯಸಂಸ್ಕಾರಕ್ಕೆ ಹೋಗುತ್ತಿದ್ದು, ನನ್ನ ಆರೋಗ್ಯ ಏರು ಪೇರಾಗಿದ್ದು ಇಲ್ಲಿಯೇ ನುಡಿ ನಮನ ಸಲ್ಲಿಸುತ್ತಿದ್ದೇನೆಂದರು.
ಪ್ರಾಸ್ತಾವಿಕ ಮಾತನಾಡಿದ ಕ.ಸಾ.ಪ ಜಿಲ್ಲಾಧ್ಯಕ್ಷರಾದ ಸುರೇಶ ಚನ್ನಶಟ್ಟಿ ಪೂಜ್ಯ ರು ಬಹು ವ್ಯಕ್ತಿತ್ವ ಉಳ್ಳವರು. ತನ್ನೆಲ್ಲಾ ಸಂಸಾರ ತ್ಯಾಗ ಮಾಡಿ ಬಂದು ಸಮಾಜಕ್ಕಾಗಿ ತನ್ನನ್ನೇ ತಾನೆ ತೊಡಗಿಸಿಕೊಂಡ ಅಪ್ಪಟ ಶರಣರಿವರು ಅವರು ಇಂದು ಲಿಂಗೈಕ್ಯರಾಗಿದ್ದು ಸಾಹಿತ್ಯ ಬಳಗಕ್ಕೆ ನೋವಾಗಿದೆ ಎಂದು ನುಡಿ ನಮನ ಸಲ್ಲಿಸಿದರು.
ನುಡಿ ನಮನ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಬಸವ ಕೇಂದ್ರದ ಅಧ್ಯಕ್ಷರರಾದ ಶರಣಪ್ಪ ಮಿಠಾರೆ ವಹಿಸಿದ್ದರು. ಮೊದಲಿಗೆ ಶಿವದಾಸ ಸ್ವಾಮಿ, ಶಿವಾನಿ ಸ್ವಾಮಿ, ಕವಿತಾ ಸ್ವಾಮಿ ಅವರು ಪೂಜ್ಯರ ಹಲವು ಗೀತೆಗಳನ್ನು ಹಾಡಿದರು. ರಾಜಮ್ಮ ಚಿಕ್ಕಪೇಟೆ, ಪಂಚಯ್ಯ ಸ್ವಾಮಿ ಸಹ ತಮ್ಮ ನುಡಿ ನಮನ ಸಲ್ಲಿಸಿದರು.
ಶಿವಪುತ್ರಪ್ಪ ಪಾಟೀಲ ನಿರೂಪಿಸಿದರೆ ಶಿವಶಂಕರ ಟೋಕರೆ ಸ್ವಾಗತಿಸಿದರೆ ವೀರೂಪಾಕ್ಷ ದೇವರು ವಂದಿಸಿದರು ಬಸವ ಕೇಂದ್ರದ ಎಲ್ಲ ಶರಣ ಶರಣೆಯರು ಎರಡು ನಿಮಿಷಗಳ ಕಾಲ ಮೌನ ಆಚರಿಸಿ ಅವರದೆ ಧಾಟಿಯ ವಚನ ಮಂಗಲ ಗೀತೆ ಹಾಡಿದರು.