ವಿವಿಧೆಡೆ ಜಿ.ಪಂ ಸಿಇಓ ಭೇಟಿ ಪರಿಶೀಲನೆ
ಬಾಗಲಕೋಟೆ,ಆ14: ಬೀಳಗಿ ತಾಲೂಕಿನ ನಾಗರಾಳ ಸರಕಾರಿ ಪ್ರೌಢಶಾಲೆಯ ಮಕ್ಕಳೊಂದಿಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಧ್ಯಾಹ್ನದ ಬಿಸಿ ಊಟವನ್ನು ಸವಿದರು.
ನಾಗರಾಳ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕೊಠಡಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿ ಶಿಕ್ಷಕರೊಂದಿಗೆ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳ ತಲುಪಿಸುತ್ತಿರುವ ಬಗ್ಗೆ ಚರ್ಚಿಸಿದರು. ನಂತರ ಮಧ್ಯಾಹ್ನದ ಬಿಸಿ ಊಟವನ್ನು ಮಕ್ಕಳೊಂದಿಗೆ ಕುಳಿತುಕೊಂಡು ಸವಿದರು. ನಂತರ ನಾಗರಾಳ ಗ್ರಾಮ ಪಂಚಾಯತ ಗೋದಾಮಗೆ ಭೇಟಿ ನೀಡಿ ಗೋದಾಮಿನ ಸುರಕ್ಷತೆ ಮತ್ತು ಶುಚಿತ್ವದ ಬಗ್ಗೆ ಕಾಳಜಿ ವಹಿಸಲು ಸೂಚನೆ ನೀಡಿದರು.
ಚರಂಡಿ, ಸ್ಕೂಲ್ ಆಟದ ಆವರಣ, ಅಕ್ಕಿಮರಡಿ ಸ್ಕೂಲ್ ಕಂಪೌಡ್ ಅಕ್ಕಿಮರಡಿ ಕುಸ್ತಿ ಕಣಪರಿಶೀಲಿಸಿದರು. ಮುಧೋಳ ತಾಲೂಕಿನ ಲಕ್ಷನಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಾಗನಾಪುರ ಗ್ರಾಮದ ನರೇಗಾ ಯೋಜನೆಯಡಿಯಲ್ಲಿ ಅರಣ್ಯ ಬ್ಲಾಕ್ ಪ್ಲಾಂಟೇಷನ್ ಕಾಮಗಾರಿಯನ್ನು ಪರಿಶೀಲಿಸಿದರು. ನಂತರ ಎಲ್.ಡಬ್ಲೂ.ಎಂ ಕಾಮಗಾರಿ ಪರಿಶೀಲಿಸಿದರು. ಇಂಗಳಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಅಮೃತ ಸರೋವರ ವೀಕ್ಷಿಸಿ, ಅಲ್ಲಿನ ಕೂಲಿ ಕಾರ್ಮಿಕರೊಂದಿಗೆ ಕೆಲಸದ ಕಾರ್ಯವೈಖರಿ ತಿಳಿದುಕೊಂಡರು. ಪಿಡಿಓ ಅವರೊಂದಿಗೆ ನೀರಿನ ಗುಣಮಟ್ಟವನ್ನು, ಶುಚಿತ್ವದ ಬಗ್ಗೆ ಕ್ರಮ ವಹಿಸಲು ಸೂಚಿಸಿದರು.
ಇಂಗಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹೊರಟ್ಟಿ ಶಾಲೆಗೆ ಭೇಟಿ ನೀಡಿ, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳೊಂದಿಗೆ ಸಂಭಾಷಣೆ ನಡೆಸಿದರು. ತದನಂತರ ಬರಗಿ ಗ್ರಾಮ ಪಂಚಾಯತ ಕಟ್ಟಡ ಪರಿಶೀಲಿಸಿ, ವಜ್ಜರಮಟ್ಟಿ ಗ್ರಾಮ ಪಂಚಾಯತ ಅಂಗನವಾಡಿ, ಎಸ್.ಡಬ್ಲೂ.ಎಂ ಕಾಮಗಾರಿ ಪರಿಶೀಲನೆ ಮಾಡಿದರು. ನಂತರ ಸೋರಗಾಂವ ಸರಕಾರಿ ಶಾಲೆಗೆ ಭೇಟಿ ನೀಡಿ ಅಲ್ಲಿನ ನರೇಗಾ ಯೋಜನೆಯಲ್ಲಿ ಸ್ಕೂಲ್ ಕಂಪೌಡ್ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.
ಮಿರ್ಜಿ ಗ್ರಾಮದ ಶಾಲೆಯ ಅಡುಗೆ ಕೋಣೆ ಮತ್ತು ಶೌಚಾಲಯ, ಮಲ್ಲಾಪುರ ಪಿ.ಜೆ ಶೌಚಾಲಯ ವೀಕ್ಷಣೆ ಮಾಡಿದರು. ಉತ್ತೂರ ಗ್ರಾಮ ಪಂಚಾಯತ ಪ್ರೌಢಶಾಲೆ ಸ್ಥಳ ಪರಿಶೀಲನೆಯನ್ನು ಮಾಡಿದರು, ತದನಂತರ ಮಾದರಿಶಾಲೆ ಸ್ಥಳ ವೀಕ್ಷಣೆ ಮಾಡಿದರು.
ಭೇಟಿ ಸಮಯದಲ್ಲಿ ಮುಧೋಳ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ ಹಿಪ್ಪರಗಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಪಂಚಾಯತ ರಾಜ್ ಇಂಜಿನೀಯರಿಂಗ್ ವಿಭಾಗದ ನಿಂಗಪ್ಪ ಮಿಸಿ, ಸಾಮಾಜಿಕ ಅರಣ್ಯ ಇಲಖೆಯ ಕಿರಣ ದಾಸರೆಡ್ಡಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದೊಡ್ಡಮನಿ, ತಾ.ಪಂ ಸಹಾಯಕ ನಿರ್ದೇಶಕ ರಾಜು ವಾರದ ಸೇರಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆ ಸಿಬ್ಬಂದಿ ವರ್ಗ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಇದ್ದರು.