ಅವಿರೋಧ ಆಯ್ಕೆ
ಲಕ್ಷ್ಮೇಶ್ವರ,ಆ14: ತಾಲೂಕಿನ ಗೋನಾಳ ಗ್ರಾಮ ಪಂಚಾಯತಿಯ ಬಾಕಿ ಉಳಿದ ಅವಧಿಗಾಗಿ ನೂತನ ಅಧ್ಯಕ್ಷರಾಗಿ ಪಂಚಾಯಿತಿ ವ್ಯಾಪ್ತಿಯ ಗುಲಗಂಜಿ ಕೊಪ್ಪ ಗ್ರಾಮದ ಅಣ್ಣಪ್ಪ ರಾಮಗೇರಿ ನಿನ್ನೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಗ್ರಾಮ ಪಂಚಾಯಿತಿಯ ಕಾರ್ಯಾಲಯದಲ್ಲಿ ಅಧ್ಯಕ್ಷರ ಚುನಾವಣೆಗೆ ಅಣ್ಣಪ್ಪ ರಾಮಗೇರಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿಯು ಆಗಿದ್ದ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಅವರು ನಾಮಪತ್ರ ಪರಿಶೀಲಿಸಿ ಕ್ರಮಬದ್ಧವಾಗಿದ್ದರಿಂದ ಅಣ್ಣಪ್ಪ ರಾಮಗೇರಿ ಅವರನ್ನು ಅಧ್ಯಕ್ಷ ರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಈ ಮುಂಚೆ ಅಧ್ಯಕ್ಷರಾಗಿದ್ದ ಮಂಜನ ಗೌಡ ಕೆಂಚನಗೌಡ ರಾಜೀನಾಮೆಯಿಂದ ಈ ಸ್ಥಾನ ತೆರವಾಗಿತ್ತು ಒಟ್ಟು ಎಂಟು ಸದಸ್ಯರ ಪಂಚಾಯಿತಿಯಲ್ಲಿ ಆರು ಜನ ಸದಸ್ಯರು ಹಾಜರಿದ್ದರು.
ಸಹಾಯಕ ಚುನಾವಣಾ ಅಧಿಕಾರಿಯಾಗಿ ಬಿಬಿ ತಳವಾರ್ ಕಾರ್ಯನಿರ್ವಹಿಸಿದರು ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಗದೀಶ ಕುರುಬರ ಕಾರ್ಯದರ್ಶಿ ಕೊಟ್ರಗೌಡ ಪಾಟೀಲ್ ಶಿವರಾಜಸೊರಟೂರ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಗ್ರಾಮದ ಹಿರಿಯರಾದ ಭರಮಣ್ಣ ರೊಟ್ಟಿಗವಾಡ ನಿಂಗನಗೌಡ ಹೊಸಗೌಡ್ರ ನಿಂಗನಗೌಡ ಮರಿಲಿಂಗನಗೌಡರ ಈರನ ಗೌಡ ನಾಗನಗೌಡ್ರ ಸೋಮನಗೌಡ ಕೊರಡೂರ ನಿಂಗಪ್ಪ ಶಿವ ಬಸವಣ್ಣನವರ ನಾಗರಾಜ್ ದೊಡ್ಡಮನಿ, ಚಂದ್ರು ತಳವಾರ್ ಬಸವರಾಜ್ ಮಲ್ಲೂರ್ ಚಂದ್ರಶೇಖರಯ್ಯ ಗಡ್ಡದೇವರ ಮಠ ನಿಂಗನಗೌಡ ಮಣಕಟ್ಟಿ ಸೇರಿದಂತೆ ಗ್ರಾಮದ ಹಿರಿಯರು ನೂತನ ಅಧ್ಯಕ್ಷರನ್ನು ಸನ್ಮಾನಿಸಿದರು.