ಅಭಿಮತದಲ್ಲಿ ವರ್ಗಾವಣೆಗೊಂಡ ಶಿಕ್ಷಕ ಮತ್ತು ಶಿಕ್ಷಕಿಗೆ ಬೀಳ್ಕೊಡುಗೆ
ಸಂಜೆವಾಣಿ ವಾರ್ತೆ
ಸಿರುಗುಪ್ಪ:ಅ,14- ತಾಲೂಕಿನ ಹೆರಕಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25ನೇ ಸಾಲಿನ ಅಭಿಮತದಲ್ಲಿ ವರ್ಗಾವಣೆಗೊಂಡ ಶಿಕ್ಷಕರ ಬೀಳ್ಕೊಡುಗೆ ಕಾರ್ಯಕ್ರಮವನ್ನು ನಡೆಯಿತು.
ಸರ್ಕಾರಿ ವೃತ್ತಿಯು ವರ್ಗಾವಣೆ ಮತ್ತು ನಿವೃತ್ತಿಗೆ ಅನಿವಾರ್ಯವಾಗಿದೆ. ಶಿಕ್ಷಕರ ಕಾರ್ಯ ಪವಿತ್ರವಾದದ್ದು. ಗ್ರಾಮದ ಎಲ್ಲರೂ ಹಾಗೂ ಹಳೆಯ ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ಉತ್ಸಾಹವನ್ನು ನೋಡಿದರೆ ದಿವಾಕರ ನಾರಾಯಣ ಹಾಗೂ ಅನುರಾಧ ಅವರು ಯಶಸ್ವಿಯಾಗಿ ನಿರ್ವ ನಿರ್ವಹಿಸಿದ್ದಾರೆಂದು ಹೇಳಬಹುದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗುರಪ್ಪ ತಿಳಿಸಿದರು.
ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳ ಸಹಕಾರ ಅಗತ್ಯವಾಗಿದ್ದು ಮುಂದಿನ ದಿನಗಳಲ್ಲೂ ಇದೇ ರೀತಿ ಸಹಕಾರ ನೀಡಬೇಕೆಂದು ಕ್ಷೇತ್ರ ಸಮನ್ವಯಾಧಿಕಾರಿ ತಮ್ಮನಗೌಡ ಪಾಟೀಲ್ ತಿಳಿಸಿದರು.
ಶಾಲೆಯ ಪ್ರಭಾರಿ ಮುಖ್ಯಗುರು ದಿವಾಕರ ನಾರಾಯಣ ಹಾಗೂ ಅವರ ಪತ್ನಿ ಅನುರಾಧ ಅವರು ಹೊಸಪೇಟೆ ತಾಲೂಕಿಗೆ ವರ್ಗಾವಣೆಯಾಗಿದ್ದರಿಂದ ಶಿಕ್ಷಣ ಇಲಾಖೆ, ಗ್ರಾಮ ಪಂಚಾಯಿತಿ, ಶಿಕ್ಷಕ ವೃಂದ, ಹಳೆಯ ವಿದ್ಯಾರ್ಥಿಗಳ ಬಳಗ ಹಾಗೂ ಗ್ರಾಮಸ್ಥರಿಂದ ಅಭಿನಂದಿಸಲಾಯಿತು.
ಎಸ್.ಸಿ. ಎಸ್.ಟಿ. ನೌಕರರ ಸಂಘದ ಅಧ್ಯಕ್ಷ ನಾಡಂಗ ವೆಂಕಟೇಶ, ಬಿ.ಆರ್.ಪಿ ವೀರೇಶ, ಸಿ.ಆ‌ರ್.ಪಿ. ಶಕುಂತಲಾ, ಪ್ರೌಢಶಾಲಾ ಮುಖ್ಯೋಪಾದ್ಯಾಯಿನಿ ಶರಣಮ್ಮ, ಗ್ರೇಡ್-2 ದೈಹಿಕ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಬಿ.ಈರಣ್ಣ, ವಕೀಲರಾದ ವೆಂಕಟೇಶ್ ನಾಯ್ಕ, ಮುಖಂಡ ಧರಪ್ಪ ನಾಯಕ, ಗ್ರಾಮಸ್ಥರಾದ ಅಂಬಣ್ಣ, ಮೂಕಣ್ಣ, ರಾಮಚಂದ್ರ, ಗಾದಿಲಿಂಗನಗೌಡ, ಬಸಯ್ಯ ಸ್ವಾಮಿ, ಜಡಿಸ್ವಾಮಿ, ಶಿವಶರಣಯ್ಯ ಸ್ವಾಮಿ ಇದ್ದರು.