ದೇವರಾಜ ಅರಸರ ಹಾಗೂ ಶ್ರೀಕೃಷ್ಣ ಜನ್ಮಾಷ್ಠಮಿ ಪೂರ್ವಭಾವಿ ಸಭೆ
ಸಂಡೂರು :ಅ: 14: ಹಿಂದುಳಿದ ವರ್ಗದ ನಾಯಕರು, ಮಾಜಿ ಮುಖ್ಯಮಂತ್ರಿ ದೇವರಾಜ ಅರಸರ ಜಯಂತಿ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಪೂರ್ವಭಾವಿ ಸಿದ್ದತಾ ಸಭೆ ತಾಲೂಕ ಕಛೇರಿಯಲ್ಲಿ ರಾಷ್ಟ್ರೀಯ ನಾಡಹಬ್ಬ ಆಚರಣಾ ಸಮಿತಿಯ ಅಧ್ಯಕ್ಷರು, ಸಂಡೂರಿನ ತಹಶೀಲ್ದಾರ್ ರಾದ ಜಿ.ಅನಿಲ್ ಕುಮಾರರವರ ಅಧ್ಯಕ್ಷತೆಯಲ್ಲಿ ನಡೆಯಿತು.
ದಿನಾಂಕ: 20 ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ದೇವರಾಜ ಅರಸರ ಜಯಂತೋತ್ಸವ ಹಾಗೂ ದಿ. 26 ಸೋಮುವಾರದಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಕೃಷ್ಣ ಜನಮಾಷ್ಠಮಿ ನಡೆಸಲು ತೀರ್ಮಾನಿಸಲಾಯಿತು. ಈ ಎರಡು ಕಾರ್ಯಕ್ರಮವನ್ನು ಹೊಸಪೇಟೆ ರಸ್ತೆಯಲ್ಲಿರುವ ಸಂಡೂರಿನ ತಹಶೀಲ್ದಾರರ ಕಛೇರಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು. ಈ ಎರಡು ಕಾರ್ಯಕ್ರಮಗಳು ವಿವಿಧ ರೀತಿಯಲ್ಲಿ ಸಂಭ್ರಮದೊಂದಿಗೆ ಆಚರಸಲು ನಿರ್ಧರಿಸಲಾಯಿತು.
ಸಮಾರಂಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು.