ಖಾಸಗಿ ಶಾಲೆಗಳ ಸಂಸ್ಥೆಗಳ ವತಿಯಿಂದಸ್ವಾತಂತ್ರ್ಯ ದಿನಾಚರಣೆಯಂದು “ಕರಾಳ ದಿನ ಆಚರಣೆ”
ಸಂಜೆವಾಣಿ ವಾರ್ತೆ
ಸಿರುಗುಪ್ಪ : ಅ,14- ಸಿರುಗುಪ್ಪ ತಾಲ್ಲೂಕು ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದಿಂದ ಆಗಸ್ಟ್ 15 ರಂದು ಸ್ವಾತಂತ್ರ ದಿನಾಚರಣೆಯನ್ನು “ಕರಾಳ ದಿನಾಚರಣೆ”ಯನ್ನಾಗಿ ಆಚರಿಸಲಾಗುವುದು ಎಂದು ತಾಲ್ಲೂಕು ಅಧ್ಯಕ್ಷ ಹಂದ್ಯಾಳ್ ಗೋಪಾಲ್  ಪತ್ರಿಕೆ ಗೋಷ್ಟಿಯಲ್ಲಿ ತಿಳಿಸಿದರು.
ನಗರದ ವಿಕೆಜಿ ಕಾಲೇಜಿನ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೊಸ ಶಿಕ್ಷಣ ಸಂಸ್ಥೆಗಳಿಗೆ ಯಾವ ನಿಯಮ ಪಾಲಿಸಬೇಕು ಅದೇ ನಿಯಮವನ್ನು ಯಥವತ್ತಾಗಿ ಹಳೆ ಶಿಕ್ಷಣ ಸಂಸ್ಥೆಗಳಿಗೆ ಹೇರುವ ಮುಖಾಂತರ ಕಿರುಕುಳ ನೀಡುತ್ತಿರುವುದು ದುರಂತವಾಗಿದೆ.
ಉಚ್ಚನ್ಯಾಯಾಲಯವು ನ.11-2022ರಂದು ದಾವೆ ಸಂಖ್ಯೆ ಬಿ.ಎಲ್.ವೈ.ಎಸ್-366-2015-16 ಹಾಗೂ ಕರ್ನಾಟಕ ರಾಜ್ಯ ಪತ್ರ ಅಧಿಕೃತವಾಗಿ 7-3-2018ರಂದು ಮತ್ತು 13-05.2024 ರಂದು ಪ್ರಕಟಿಸಲಾದ ಪ್ರಕಟಣೆಗಳಿಗೂ ತೀರ್ಪುಗಳನ್ನು ಕಡೆಗಣಿಸಿ,  ಕಳೆದ ಐದು ವರ್ಷಗಳಿಂದ ಶಿಕ್ಷಣ ಇಲಾಖೆ ದಿನಕ್ಕೊಂದು ಆದೇಶ ಹೊರಡಿಸುತ್ತಿದೆ ಎಂದು ಆರೋಪಿಸಿದರು.
ನಮ್ಮ ರಾಜ್ಯ ಖಾಸಗಿ ಶಾಲ ಆಡಳಿತ ಮಂಡಳಿಗಳ ಒಕ್ಕೂಟದ ವತಿಯಿಂದ ಶಾಲಾ ಕಾಲೇಜುಗಳು ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕಪ್ಪು ಬಟ್ಟೆ ಕಟ್ಟಿಕೊಂಡು “ಕರಾಳ ದಿನಾಚರಣೆ”ಯನ್ನಾಗಿ ಆಚರಿಸಲಾಗುತ್ತದೆ.
ಸರ್ಕಾರವು ತಾಲ್ಲೂಕಿನ ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಮತ್ತು ಇನ್ನಿತರೆ ಸಮಸ್ಯೆಗಳನ್ನು ಪರಿಸುವ ತನಕ ಸ್ವಾತಂತ್ರ ದಿನಾಚರಣೆ ಅಥವಾ ಇನ್ನಿತರೆ ಸರಕಾರಿ ಕಾರ್ಯಕ್ರಮಗಳಿಗೆ ಜಿಲ್ಲೆಯ ಖಾಸಗಿ ಅನುದಾನ ರಹಿತ ಶಾಲೆಗಳು ಭಾಗವಹಿಸುವುದಿಲ್ಲ ಎಂದು ಈ ಮೂಲಕ ಎಚ್ಚರಿಸಿದರು.
ಉಪಾಧ್ಯಕ್ಷ ಅವಿನಾಶ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಎನ್.ಲಿಂಗನಗೌಡ, ಸಹ ಕಾರ್ಯದರ್ಶಿ ವೀರೇಂದ್ರ ಸಾಹುಕಾರ, ಖಜಾಂಚಿ ಚಾಗಿ ಸುಬ್ಬಯ್ಯಶೆಟ್ಟಿ, ನಿರ್ದೇಶಕರಾದ ಮಧುಸೂದನ ಶೆಟ್ಟಿ, ರಂಗಮ್ಮ ಬಿ, ವಿವೇಕಾನಂದ ಇದ್ದರು.