ಕೊಟ್ಟೂರು ಪಟ್ಟಣದಲ್ಲಿ ಹರ್ ಘರ್ ತಿರಂಗಾ ಅಭಿಯಾನ
ಸಂಜೆ ವಾಣಿ ವಾರ್ತೆ
ಕೊಟ್ಟೂರು : ಅ,14-  ಪಟ್ಟಣದಲ್ಲಿ ಮಂಗಳವಾರ ಪಟ್ಟಣ ಪಂಚಾಯತಿ ಕಾರ್ಯಾಲಯ ಮತ್ತು ತಾಲೂಕು ಕಚೇರಿಯ ಸಹಯೋಗದೊಂದಿಗೆ 78 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ  ಜೂನಿಯರ್ ಕಾಲೇಜ್ ವಿದ್ಯಾರ್ಥಿಗಳೊಂದಿಗೆ ಉಜ್ಜಿನಿ ರಸ್ತೆಯಿಂದ  ಸರ್ಕಾರಿ ಬಸ್ ನಿಲ್ದಾಣ ಮುಖ್ಯ ರಸ್ತೆಯ ಮಾರ್ಗವಾಗಿ ಜಾಥಾ ಕೈಗೊಂಡು  ಹರ್ ಘರ್ ತಿರಂಗಾ ಅಭಿಯಾನವನ್ನು ನಡೆಸಲಾಯಿತು
ಈ ಜಾಥಾವನ್ನು ಉದ್ದೇಶಿಸಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ  ಎ. ನಸರುಲ್ಲಾ ಮಾತಾನಾಡಿ ಆಗಸ್ಟ್ 13ರಿಂದ 15 ರಂದು  78 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪಟ್ಟಣದಲ್ಲಿ  ಪ್ರತಿ ಮನೆ -ಮನೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ರಾರಾಜಿಸುವಂತೆ ಪಟ್ಟಣದ ಎಲ್ಲಾ ಸಾರ್ವಜನಿಕರು   ಮಾಡಬೇಕು ಎಂದು ಮನವಿ ಮಾಡಿದರು.