ದೇಶಾಭಿಮಾನ, ಹುತಾತ್ಮರ ಸ್ಮರಣೆ ಪ್ರತಿಯೊಬ್ಬರಲ್ಲಿ ಮೂಡಲಿ – ಎಂ. ರೇ
ಣುಕಾ.
ಸಂಜೆವಾಣಿ ವಾರ್ತೆ
 ಕೂಡ್ಲಿಗಿ. ಆ. 14 :- ಸ್ವಾತಂತ್ರ್ಯ ಉತ್ಸವದ ಅಮೃತ ಮಹೋತ್ಸವದ ಹಿನ್ನೆಲೆ ಹರ್ ಘರ್ ತಿರಂಗಾ ಕಾರ್ಯಕ್ರಮ ನಡೆಯುತ್ತಿದ್ದು,ಪ್ರತಿಯೊಬ್ಬರಲ್ಲಿ ದೇಶ, ದೇಶಾಭಿಮಾನ ದೇಶಕ್ಕಾಗಿ ಪ್ರಾಣತೆತ್ತ ಅನೇಕ ಹುತಾತ್ಮರ  ಸ್ಮರಣೆ ಅಗತ್ಯ  ಎಂದು ತಹಸೀಲ್ದಾರ್ ಎಂ.ರೇಣುಕಾ ತಿಳಿಸಿದರು.
ಪಟ್ಟಣದಲ್ಲಿ 78ನೇ ಸ್ವಾತಂತ್ರ್ಯಯೋತ್ಸವದ ಹಿನ್ನೆಲೆಯಲ್ಲಿ  ಪಪಂ ಕಚೇರಿಯಿಂದ ಸೋಮವಾರ ಆಯೋಜಿಸಿದ್ದ ಹರ್ ಘರ್ ತಿರಂಗಾ ಜಾಥಾಕ್ಕೆ ಚಾಲನೆ ನೀಡಿ ಮಾತನಾಡುತ್ತಾ ದೇಶಕ್ಕೆ ಸ್ವಾತಂತ್ರ್ಯ  ಪಡೆಯಲು ಹೋರಾಡಿದ ಹುತಾತ್ಮರನ್ನು  ಸದಾ ಸ್ಮರಿಸುವುದರ ಜತೆಗೆ ತಾಯಿ ಭಾರತಾಂಬೆಯ ಮಕ್ಕಳಂತೆ ಎಲ್ಲರೂ ಶಾಂತಿ, ಸೌಹಾರ್ದತೆ ಕಾಪಾಡುವುದರ ಜತೆಗೆ ಸಹಬಾಳ್ವೆ ಮತ್ತು ಸಹೋದರತ್ವದಿಂದ ಬಾಳಬೇಕಿದೆ ಎಂದು ತಿಳಿಸಿದರು.
ಪಪಂ ಮುಖ್ಯಾಧಿಕಾರಿ ಎಂ.ಕೆ.ಮುಗಳಿ ಮಾತನಾಡಿ, 78ನೇ ಸ್ವಾತಂತ್ರ್ಯಯೋತ್ಸವದ  ಅಮೃತ ಮಹೋತ್ಸವ ಅಂಗವಾಗಿ ಪಪಂಯಿಂದ ಹರ್ ಘರ್ ತಿರಂಗಾ ಜಾಥಾ ನಡೆಸಿದ್ದು, ಆ.15ರಂದು ನಡೆಯುವ ಸ್ವಾತಂತ್ರ್ಯ  ದಿನಾಚರಣೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವ ಮೂಲಕ ದೇಶಾಭಿಮಾನ ಮೆರೆಯುವುದರ ಜತೆಗೆ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಹೋರಾಟಗಾರರ ಸ್ಮರಣೆ ಮಾಡೋಣ ಎಂದರಲ್ಲದೆ, ಈ ಜಾಥಾದಲ್ಲಿ ಕಂದಾಯ ಸೇರಿ ನಾನಾ ಇಲಾಖೆ ಅಧಿಕಾರಿಗಳು, ಸರಕಾರಿ ನೌಕರರ ಸಂಘ ಸೇರಿ ಸಂಘ, ಸಂಸ್ಥೆಯವರು ಹೆಚ್ಚಿನ ಸಹಕಾರ ನೀಡುವ ಮೂಲಕ ಜಾಥಾ ಯಶಸ್ವಿಯಾಗಲು ಕಾರಣವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ, ಪಪಂ ಸದಸ್ಯರಾದ ಕೆ.ಈಶಪ್ಪ, ಸಿರಿಬಿ ಮಂಜುನಾಥ, ಮುಖಂಡರಾದ ಎಸ್.ದುರುಗೇಶ್, ಎಚ್.ವೀರಣ್ಣ, ಗ್ರೇಡ್ 2 ತಹಸೀಲ್ದಾರ್ ವಿ.ಕೆ.ನೇತ್ರಾವತಿ, ತಾಲೂಕು ಕಚೇರಿ ಶಿರಸ್ತೇದಾರ್ ಚಂದ್ರಶೇಖರ್, ತಾಪಂ ಅಧಿಕಾರಿ ವೆಂಕಟೇಶ್, ಪಪಂ ಸಿಬ್ಬಂದಿಯಾದ ರಾಘವೇಂದ್ರ ಪ್ರಸಾದ್, ರಮೇಶ್, ರಾಜಾಬಕ್ಷಿ, ಗೀತಾ ವಿಜೇತ್, ಗುರುಮೂರ್ತಿ, ವಿಕಾಸ್, ಕೆ.ರಾಧಾ, ಯೂನುಸ್, ಉಪ ತಹಸೀಲ್ದಾರ್ ಎಚ್.ಎಂ.ಕೊಟ್ರಮ್ಮ, ಕಂದಾಯ ನಿರೀಕ್ಷಕ ಕುಮಾರಸ್ವಾಮಿ, ಸಿಬ್ಬಂದಿ ಶಿವಕುಮಾರ್‌ಗೌಡ, ಮಂಜುನಾಥ, ಟಿ.ಪ್ರಭು, ಸೇರಿ ಇತರರಿದ್ದರು.
ಪಟ್ಟಣ ಪಂಚಾಯಿತಿ ಕಚೇರಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ರಾಜವೀರ ಮದಕರಿನಾಯಕ ವೃತ್ತದ ಮೂಲಕ ಪ್ರಮುಖ ರಸ್ತೆಯಲ್ಲಿ ಜಾಥಾ ನಡೆಯಿತು.