ಕೋದಂಡರಾಮ ನಾಯ್ಡು ಸರ್ಕಾರಿ ಶಾಲೆಯಲ್ಲಿ ಎಲ್.ಕೆ.ಜಿ ಯು. ಕೆ. ಜಿ. ಉದ್ಘಾಟಿಸಿದ ಶಾಸಕ ಗವಿಯಪ್ಪ.
ಸಂಜೆವಾಣಿ ವಾರ್ತೆ
ಹೊಸಪೇಟೆ ಆ, 14: ನಗರದ 34ನೇ ವಾರ್ಡಿನಲ್ಲಿರುವ ಕೋದಂಡರಾಮ ನಾಯ್ಡು ಸರ್ಕಾರಿ  ಹಿರಿಯ ಪ್ರಾಥಮಿಕ.ಶಾಲೆಯಲ್ಲಿ ಎಲ್‌ಕೆ.ಜಿ ಮತ್ತ ಯು ಕೆ ಜಿ ತರಗತಿಗಳನ್ನು ಶಾಸಕ ಹೆಚ್.ಆರ್. ಗವಿಯಪ್ಪ ಉದ್ಘಾಟಿಸಿದರು.
ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು ನೇರವಾಗಿ ಒಂದನೇ ತರಗತಿಗೆ ಮಕ್ಕಳು ಬರುವುದರಿಂದ ಕಲಿಕೆ ಆರಂಭವಾಗಲು ಸಹಕಾತಿಯಾಗುವ ಪುರಕ ವಾತಾವರ್ಣ ನಿರ್ಮಾಣವಾಗಲು ಎಲ್.ಕೆ.ಜಿ. ಹಾಗೂ ಯು.ಕೆ.ಜಿ.ಸಹಕಾರಿಯಾಗಲಿದ್ದು ಈ ಆಲೋಚನೆಯನ್ನು ಸರ್ಕಾರ ಮಾಡಿ ರಾಜ್ಯ ಕೆಲ ಶಾಲೆಗಳನ್ನು ಆಯ್ಕೆ ಮಾಡಿದ್ದು ಅದರಲ್ಲಿ ಕೆ.ಆರ್.ನಾಯ್ಡು ಸರ್ಕಾರಿ ಶಾಲೆ ಆಯ್ಕೆಯಾಗಿದೆ ಅತ್ಯಂತ ಕಡುಬಡವ ಹಾಗೂ ಶಿಕ್ಷಣ ವಂಚಿತ ಪ್ರದೇಶವಾದ 34ನೇ ವಾರ್ಡ್ ಈ ಶಾಲೆ ಮಕ್ಕಳಿಗೆ ಇಂತಹ ಶಿಕ್ಷಣದ ಪೂರಕ ಮಾತಾವರ್ಣ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.
ಮುಖ್ಯ ಅತಿಥಿಗಳಾಗಿ 34 ನೇ ವಾರ್ಡಿನ ನಗರ ಸಭಾ ಸದಸ್ಯೆ ಲತಾ ಸಂತೋಷ ಬಾಣದ ವಿಜಯನಗರ ಜಿಲ್ಲೆಯ ಉಪನಿರ್ದೇಶಕಿ ಹನುಮಕ್ಕ ಕ್ಷೇತ್ರಶಿಕ್ಷಣಾಧಿಕಾರಿ ಎಂ.ಚನ್ನಬಸಪ್ಪ,  ಕ್ಷೇತ್ರ ಸಮನ್ವಯಾಧಿಕಾರಿ ಶಿವಕುಮಾರ್  ವಿಜಯನಗರ ಜಿಲ್ಲಾ ಅಂಬೇಡ್ಕರ್ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ.ಉಮಾಪತಿ ಪ್ರದೀಪ್ ಗಾರ್ಮೆಂಟ್ಸ್ ನ ಮಾಲೀಕ, ದಾನಿ ಸುನೀತ ಪ್ರವೀಣ ಕವಾಡ್, ಜಿಲ್ಲಾ ಪಂಚಾಯತ್  ನಿವೃತ್ತ ಅಭಿಯಂತರ ಕೆ. ದಿವಾಕರ್ ರವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಅಧ್ಯಕ್ಷ ಗೌಳಿ ಕುಮಾರ ಮತ್ತು ಮುಖ್ಯಗುರುಗಳು ಶಾಸಕವಹೆಚ್.ಆರ್.ಗವಿಯಪ್ಪ ಅವರಿಗೆ   ಸದರಿ ಶಾಲೆಗೆ ತರಗತಿ ಕೊಠಡಿಗಳು ಹಾಗೂ ಶೌಚಾಲಯ ಮತ್ತು ಸ್ಮಾರ್ಟ್ ಕ್ಲಾಸ್ ನೀಡುವಂತೆ  ಮನವಿ ಮಾಡಿದರು.
ಶತಮಾನೋತ್ಸವ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಶಾಕರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಮನವಿ ಮಾಡಿದರು.
ಶಿಕ್ಷರು, ಪಾಲಕ ಪೋಷಕರು ಹಾಗೂ ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.