ಜ್ಞಾನವನ್ನು ಸಮಾಜದ ಒಳಿತಿಗೆ ಬಳಸಿ.
(ಸಂಜೆವಾಣಿ ವಾರ್ತೆ)
ಬಳ್ಳಾರಿ .ಆ 12- ವಿದ್ಯಾರ್ಥಿಗಳು ಪಡೆದುಕೊಂಡ ಜ್ಞಾನವನ್ನು ಸಮಾಜದ ಒಳಿತಿಗೆ ಬಳಸಿಕೊಂಡು ಮಾದರಿಯಾಗಬೇಕೆಂದು ನಗರದ ಸರಳಾದೇವಿ  ಕಾಲೇಜಿನ ಪ್ರಾಧ್ಯಾಪಕ  ಡಾ.ಸೋಮನಾಥ  ಹೇಳಿದರು.
    ಅವರು ನಿನ್ನೆ   ಕಾಲೇಜಿನಲ್ಲಿ ಕನ್ನಡ ವಿಭಾಗದ ಅಂತಿಮ  ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಬೀಳ್ಕೊಡುಗೆ  ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಸ್ತು, ಸಮಯಪ್ರಜ್ಞೆ ಮತ್ತು ಆತ್ಮವಿಶ್ವಾಸದಿಂದ ಬದುಕನ್ನು ರೂಪಿಸಿಕೊಳ್ಳಬೇಕು. ಮಾನವೀಯ ಮೌಲ್ಯಗಳನ್ನು ಎಂದೂ ಮರೆಯಬಾರದು ಎಂದರು.
        ಕನ್ನಡ ವಿಭಾಗದ ಮುಖ್ಯಸ್ಥ ಡಾ.ದಸ್ತಗೀರಸಾಬ್  ದಿನ್ನಿ,
ನವ ಮಾಧ್ಯಮಗಳು ನಮ್ಮ ಆಲೋಚನಾ ಕ್ರಮ ಮತ್ತು ಬದುಕನ್ನು ತೀವ್ರವಾಗಿ ಪಲ್ಲಟಗೊಳಿಸುತ್ತಿವೆ.  ಎಚ್ಚರಿಕೆಯ ನಡೆಯಿಂದ ಕೌಟುಂಬಿಕ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಸಾಗಬೇಕೆಂದರು.
ಹೊಸಪೇಟೆ ಆನಂದ ಸಿಂಗ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ದೇವಣ್ಣ ಮಾತನಾಡಿ ವಿದ್ಯಾರ್ಥಿಗಳು ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಮಾಜ ಮತ್ತು ರಾಷ್ಟ್ರಕ್ಕೆ ಉತ್ತಮ ಕೊಡುಗೆ ನೀಡಬೇಕೆಂದರು.
     ವೇದಿಕೆಯ ಮೇಲೆ ಪ್ರಾಧ್ಯಾಪಕರಾದ ಡಾ.ತಿಪ್ಪೇರುದ್ರ ಸಂಡೂರು,ಡಾ.ಚೂಡಾಮಣಿ, ರಾಮಸ್ವಾಮಿ , ಪ್ರವೀಣ್ ಕುಮಾರ್, ಲಿಂಗಪ್ಪ ಇದ್ದರು.