ಸರ್ಕಾರಿ ಪ್ರಾಥಮಿಕ ಶಾಲೆಗೆ ಹೈಟೆಕ್ ಸ್ಪರ್ಶ
ಕೆಆರ್ ಪುರ,ಆ.೧೪-ಕ್ಷೇತ್ರದ ರಾಮಮೂರ್ತಿನಗರ ಸಮೀಪದ ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಮಹಿಳಾ ಪದವಿಪೂರ್ವ ಕಾಲೇಜನ್ನು ಖಾಸಗಿಶಾಲೆಯಂತೆ ಅಭಿವೃದ್ಧಿ ಪಡಿಸಿ ಸಿಸಿಟಿವಿ ಅಳವಡಿಸಿರುವ ಶಾಲೆಯ ಅಭಿವೃದ್ಧಿ ಸಮಿತಿ ಮುಖ್ಯಸ್ಥ ಮಂಜುನಾಥ ಅವರ ಕಾರ್ಯಕ್ಕೆ ಡಿಡಿಪಿಐ ನಿಂಗರಾಜಪ್ಪ ,ಇಇಓ ಮುತ್ತಯ್ಯ ಅವರು ಶ್ಲಾಘನೆ ವ್ಯಕ್ತಪಡಿಸಿದರು.
ಎಲ್ಲಾ ತರಗತಿಯ ಸಿ ಸಿ ಟಿವಿ , ಶಾಲಾ , ಕಾಲೇಜಿನ , ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿ ಬಳಿಕ ಮಾತನಾಡಿದ ಡಿಡಿಪಿಐ ನಿಂಗರಾಜಪ್ಪ ಅವರು ಇಲ್ಲಿನ ಸರ್ಕಾರಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಖಾಸಗಿ ಶಿಕ್ಷಣ ಸಂಸ್ಥೆಗಿಂತ ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಕಂಡಿದೆ ಇದರಂತೆ ಸರ್ಕಾರಿ ಶಾಲೆಗಳು ಮಾದರಿ ಶಾಲೆಗಲಾಗಲಿ ಎಂದು ಆಶಯ ವ್ಯಕ್ತಪಡಿಸಿದ್ದರು.
ಶಾಲಾ ಮಕ್ಕಳ ಸುರಕ್ಷತೆ ಸಿಸಿಟಿವಿ ಹಾಗೂ ಶಿಕ್ಷಣಕ್ಕಾಗಿ ಸ್ಮಾರ್ಟ್ ಕ್ಲಾಸ್,ದಾನಿಗಳ ಸಹಾಯದಿಂದ ಹೆಚ್ಚಿನ ಕೊಠಡಿಗಳ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾರ್ಯಗಲಕಿಗೆ ಹೆಚ್ಚು ಒತ್ತು ನೀಡಲಾಗಿದ್ದು, ಶಾಲೆಯ ಅಭಿವೃದ್ಧಿ ಕಾರ್ಯಗಳು ಶ್ಲಾಘನೀಯ ಎಂದು ನುಡಿದರು.
ಮಕ್ಕಳ ಶಿಕ್ಷಣಕ್ಕೆ ಯಾವುದೇ ಕೊರತೆ ಇಲ್ಲದ ರೀತಿಯಲ್ಲಿ ಕಾರ್ಯ ಮಾಡಲಾಗುತ್ತಿದ್ದು,ಸರ್ಕಾರದ ವತಿಯಿಂದ ಮತ್ತಷ್ಟು ಅನುದಾನಕ್ಕೆ ಮನವೆ ಸಲ್ಲಿಸುತ್ತೆವೆ ಎಂದು ನುಡಿದರು.
ಈ ಶಾಲಾ ಕಾಲೇಜಿನ ಅಭಿವೃದ್ಧಿಗೆ ಸದಾ ಆಗಲಿರುಳು ಸುಮಾರು ೨೩ ವರ್ಷ ಗಳಿಂದ ಶ್ರಮಿಸುತ್ತೀರುವ ಸಮಾಜ ಸೇವಕ ,ಶಾಲಾ ಕಾಲೇಜಿನ ಎಸ್.ಡಿ.ಎಂ.ಸಿ ಮುಖ್ಯಸ್ಥ ಹಿಟ್ಟಾಚಿ ಮಂಜುನಾಥ ರವರನ್ನು ಇಲಾಖೆಯ ಪರ ಅಭಿನಂದಿಸಿದರು.
ಈ ಸಂದರ್ಭ ದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ವಿ.ಭಾರತಿರವರು ಮತ್ತು ಪ್ರೌಢ ಶಾಲಾ, ಮತ್ತು ಹಿರಿಯ ಪ್ರಾಥಮಿಕ ಪಾಠಶಾಲೆಯ ಎಲ್ಲಾ ಸಹ ಶಿಕ್ಷಕರು ಭಾಗವಹಿಸಿದ್ದರು.