ಹಕ್ಕು ಪತ್ರ ಫಲಾನುಭವಿಗಳಿಗೆ ಇ-ಸ್ವತ್ತು ಸೌಲಭ್ಯಕ್ಕೆ ಕ್ರಮ
ಕೋಲಾರ,ಆ.೧೪- ೯೪ ಸಿ.ಸಿ ಅಕ್ರಮ ಸಕ್ರಮ ಅಡಿಯಲ್ಲಿ ಹಕ್ಕು ಪತ್ರ ನೀಡಿರುವಂತಹ ಫಲಾನುಭವಿಗಳಿಗೆ ಇ-ಸ್ವತ್ತು ಮಾಡಿಸಿಕೊಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಸಾರಥ್ಯದಲ್ಲಿ ವತಿಯಿಂದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಶ್ರೀನಿವಾಸಪುರ ತಾಲ್ಲೂಕು, ಮಂಜಲನಗರ ಗ್ರಾಮದಲ್ಲಿ ಕೆಲವು ಬಡ ಕುಟುಂಬಗಳು ಸರ್ಕಾರಿ ಜಮೀನಲ್ಲಿ ಮನೆ ನಿರ್ಮಿಸಿಕೊಂಡು ಸುಮಾರು ವರ್ಷಗಳಿಂದ ವಾಸವಾಗಿದ್ದು, ಸರ್ಕಾರದ ಆದೇಶದಂತೆ ೯೪ ಸಿ.ಸಿ ಅಕ್ರಮ ಸಕ್ರಮದಡಿಯಲ್ಲಿ ಮನಗಳ ಸಕ್ರಮಾತಿ ಪತ್ರಗಳನ್ನು ವಿತರಣೆ ಮಾಡಿದ್ದು, ಈಗಾಗಲೇ ೯೪ ಸಿ.ಸಿ ಹಕ್ಕು ಪತ್ರ (ಸಕ್ರಮಾತಿ ಮಾಲ್ಲಿ ಗಳನ್ನು ವಿತರಣೆ ಮಾಡಿರುವಂತಹ ಫಲಾನುಭವಿಗಳಿಗೆ ಇ-ಸ್ವತ್ತು ಮಾಡಿಕೊಡಲು ಸರ್ಕರದ ಆದೇಶವಿದ್ದರೂ ಸಹ ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇ-ಸ್ವತ್ತು ಮಾಡಲು ವಿಳಂಭ ಮಾಡತ್ತಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ಕಾರ್ಯನಿರ್ವಹಣಾಧಿಕಾರಿ ಗಳು ಶ್ರೀನಿವಾಸಪುರ ಇವರಿಗೆ ಮಂಜಲ ನಗರದ ಗ್ರಾಮಸ್ಥರು ಮತ್ತು ಕರವೇ ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ಸುರೇಶ್‌ರವರಿಂದ ಮನವಿ ಸಲ್ಲಿಸಿದ್ದರೂ ಸಹ ಕಾರ್ಯನಿರ್ವಹಣಾಧಿಕಾರಿಗಳು ಶ್ರೀನಿವಾಸಪುರ ಇವರು ೫ ದಿನಗಳಲ್ಲಿ ಮಂಜಲ ನಗರ ಗ್ರಾಮದ ಬಡಕುಟುಂಬಗಳಿಗೆ ಇ-ಸ್ವತ್ತು ಮಾಡಿಕೊಡಲು ಸೂಚನೆ ನೀಡಿದ್ದರೂ ಸಹ ಯಾವುದೇ ಕ್ರಮವಿಲ್ಲದೆ ಇ-ಸ್ವತ್ತು ಮಾಡಿಕೊಡಲು ಮುಂದಾಗುತ್ತಿಲ್ಲವಾದ್ದರಿಂದ ಇವರು ಹಣದ ಅಮಿಷಗೆ ಬಿದ್ದು ಭ್ರಷ್ಟಾಚಾರಕ್ಕೆ ಒತ್ತು ನೀಡುತ್ತಿರುವ ಶಂಕೆ ವ್ಯಕ್ತವಾಗಿದೆ
ಈ ಕೂಡಲೇ ಪಿ.ಡಿ.ಸಿ. ಇವರ ವಿರುದ್ಧ ಕ್ರಮಕೈಗೊಳ್ಳಬೇಕು ಮತ್ತು ಫಲಾನುಭವಿಗಳಿಗೆ ತ್ವರಿತಗತಿಯಲ್ಲಿ ಇ-ಸ್ವತ್ತು ಮಾಡಿಕೊಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟವನ್ನು ರಾಜ್ಯಾಧ್ಯಕ್ಷ ಚೆಲುವಳಿ ಚಲಪತಿಗೌಡ ಮತ್ತು ಜಿಲ್ಲಾಧ್ಯಕ್ಷ ಶೇಷಾದ್ರಿ ಶಾಸ್ತ್ರಿ ರವರ ನೇತೃತ್ವದಲ್ಲಿ ಉಗ್ರವಾದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಿಯೋಗದಲ್ಲಿ ಕರವೇ ಜಿಲ್ಲಾಧ್ಯಕ್ಷ ಶೇಷಾದ್ರಿ, ಶ್ರೀನಿವಾಸಪುರ ತಾಲೂಕು ಅಧ್ಯಕ್ಷ ಮಂಜಲನಗರ ಸುರೇಶ್, ಕಾರ್ಯಾಧ್ಯಕ್ಷ ಚನ್ನ ಕೃಷ್ಣ, ನಾಗರಾಜ್, ಪ್ರಕಾಶ್, ಮಂಜಲನಗರ ಗ್ರಾಮಸ್ಥರು ಮತ್ತು ಕಾರ್ಯಕರ್ತರು ಇದ್ದರು.