ಧನಮಟ್ನಹಳ್ಳಿ ಗ್ರಾಮದಲ್ಲಿ ಉಚಿತ ಗಿಡಮೂಲಿಕೆ ಸಸಿ ವಿತರಣೆ
ಕೋಲಾರ, ಆ.೧೪- ತಾಲ್ಲೂಕಿನ ಧನಮಟ್ನಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ಕನ್ನಡಿಗರ ಯುವಕರ ಸಂಘದ ವತಿಯಿಂದ ಪಾರಂಪರಿಕ ವೈದ್ಯರಾದ ದಿವಂಗತ ಶ್ರೀ ಡಾ|| ಟಿ.ರಾಮಕೃಷ್ಣಪ್ಪನವರ ಜ್ಞಾಪಕಾರ್ತವಾಗಿ ಉಚಿತ ಗಿಡಮೂಲಿಕೆಗಳ ಸಸಿ ವಿತರಣೆ ಕಾರ್ಯಕ್ರಮಕ್ಕೆ ಮಾಜಿ ಸಚಿವ ಆರ್.ವರ್ತೂರು ಪ್ರಕಾಶ್ ರವರು ಚಾಲನೆ ನೀಡಿದರು.
ಪಾರಂಪರಿಕ ವೈದ್ಯರಾದ ಧನಮಟ್ನಹಳ್ಳಿ ಡಾ|| ಆರ್.ವೆಂಕಟೇಶ್ ಮೂರ್ತಿರವರು ಗಿಡಮೂಲಿಕೆಗಳ ಉಪಯೋಗ ಮತ್ತು ಮನೆ ಮದ್ದು, ಆರ್ಯುವೇದ ಚಿಕಿತ್ಸೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಗಿಡಮೂಲಿಕೆಗಳ ಸಸಿಗಳನ್ನು ತಮ್ಮ ಮನೆಯ ಅಂಗಳದಲ್ಲಿ ಬೆಳಸಿ ಅದರ ಪ್ರಯೋಜನಪಡೆದು ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದರಖಾಸ್ತು ಸಮಿತಿ ಮಾಜಿ ಅಧ್ಯಕ್ಷ ಬೆಗ್ಲಿ ಪ್ರಕಾಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಮಾಜಿ ಸದಸ್ಯರಾದ ಸಿ.ಎನ್.ಅರುಣ್ ಪ್ರಸಾದ್, ಬಂಕ್ ಮಂಜು, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ, ಕನಕಭವನ ಹಾಗೂ ವಿಧ್ಯಾರ್ಥಿ ನಿಲಯದ ಅಧ್ಯಕ್ಷ ಡಿ.ಮುನಿಯಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.