ವರಮಹಾಲಕ್ಷ್ಮೀವೃತ ಮತ್ತು ಬ್ರಹ್ಮರಥೋತ್ಸವ
ಕೋಲಾರ,ಆ.೧೪: ಮುಳಬಾಗಿಲು ತಾಲೂಕಿನ ಕುರುಬರಹಳ್ಳಿ ಬಸ್ ನಿಲ್ದಾಣದಲ್ಲಿರುವ ಶ್ರೀ ಶ್ರೀ ಶ್ರೀ ಲಕ್ಷ್ಮೀ ಗಾಯತ್ರಿ ದೇವಿ ದೇವಾಲಯದಲ್ಲಿ ಶ್ರೀ ಲಕ್ಷ್ಮೀ ಗಾಯತ್ರಿ ದೇವಿ ಸೇವಾ ಸಮಿತಿ ಟ್ರಸ್ಟ್ (ರಿ.) ವತಿಯಿಂದ ಆ ೧೫ ಗುರುವಾರ ೨೦ ನೇ ವರ್ಷದ ಶ್ರೀ ವರಮಹಾಲಕ್ಷ್ಮೀವ್ರತ ಮತ್ತು ಬ್ರಹೋತ್ಸವ ಹಾಗೂ ಕುಂಭಾಭಿಷೇಕವನ್ನು ಶ್ರೀ ವರಮಹಾಲಕ್ಷ್ಮಿ ಅಮ್ಮನವರ ಪುಷ್ಪಪಲ್ಲಕ್ಕಿ ಮೆರವಣಿಗೆ ಹಾಗೂ ೧೬ ರಂದು ಅಮ್ಮನವರಿಗೆ ಕುಂಭಾಭಿಷೇಕ ಮತ್ತು ಶ್ರೀ ವರಮಹಾಲಕ್ಷ್ಮೀ ವ್ರತವನ್ನು ಹಮ್ಮಿಕೊಳ್ಳಲಾಗಿದೆ ಎಂದು ಚಂದ್ರಶೇಖರ ಸ್ವಾಮಿ ಅವರು ತಿಳಿಸಿದ್ದಾರೆ.
ಶ್ರೀ ವರಮಹಾಲಕ್ಷ್ಮಿ ಅಮ್ಮನವರ ಪುಷ್ಪಪಲ್ಲಕ್ಕಿ ಮೆರವಣಿಗೆಯನ್ನು ಕುರುಬರಹಳ್ಳಿಯಿಂದ ಅಂದು ಬೆಳಗ್ಗೆ ೯ ಗಂಟೆಗೆ, ಮಲ್ಲನಾಯಕನಹಳ್ಳಿ ೧೧ ಗಂಟೆಗೆ, ಮೋಪುರಹಳ್ಳಿ ಮಧ್ಯಾಹ್ನ ೧೨ ಗಂಟೆಗೆ, ಅಗ್ರಹಾರ ಮಧ್ಯಾಹ್ನ ೨ ಗಂಟೆಗೆ, ಬೆಳಗಾನಹಳ್ಳಿ ಮಧ್ಯಾಹ್ನ ೩ ಗಂಟೆಗೆ, ದೊಮ್ಮಸಂದ್ರ ಸಂಜೆ ೫ ಗಂಟೆಗೆ, ತಿಮ್ಮನಾಯಕನಹಳ್ಳಿ ರಾತ್ರಿ ೭ ಗಂಟೆಗೆ ನಡೆಯಲಿದೆ.
ಆ೧೬ರ ಶುಕ್ರವಾರ ಬೆಳಿಗ್ಗೆ ೬ ಗಂಟೆಗೆ ಅಮ್ಮನವರಿಗೆ ಕುಂಭಾಭಿಷೇಕ ಮತ್ತು ಶ್ರೀ ವರಮಹಾಲಕ್ಷ್ಮೀ ವ್ರತ ಮಧ್ಯಾಹ್ನ ೧೨-೩೦ ಗಂಟೆಗೆ ಆದಿತ್ಯಾದಿ ನವಗ್ರಹ ಮತ್ತು ಸರ್ವದೇವಾಧಿಗಳ ಹೋಮ ಪ್ರಾರಂಭ, ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥಪ್ರಸಾದವನ್ನು ಏರ್ಪಡಿಸಲಾಗಿದೆ.
ವಿಶೇಷ ಸೂಚನೆ: ಪ್ರತಿದಿನ ಬೆಳಿಗ್ಗೆ ೪ ರಿಂದ ೬ ಗಂಟೆಯವರೆಗೆ ಅಭಿಷೇಕ, ಮತ್ತು ನವಗ್ರಹ ಪೂಜೆ ನಲ್ಲಿಸಲಿರುವ ಭಕ್ತಾಧಿಗಳಿಗೆ, ಶ್ರೀ ಅಯ್ಯಪ್ಪಸ್ವಾಮಿ ಭಕ್ತಾಧಿಗಳಿಗೆ ಪೂಜೆ, ಆಗ್ನಿಕುಂಡ, ದೇವರಕ್ಕೆಸೆಯಿಂದ ತುಪ್ಪದಲ್ಲಿ ಕಜ್ಜಾಯ ಎತ್ತುವ ಕಾರ್ಯಕ್ರಮವನ್ನು ಮಾಡಿ ಕೊಡಲಾಗುವುದು.