ಎಸ್‌ಎನ್‌ಆರ್ ಆಸ್ಪತ್ರೆ ಸಿಬ್ಬಂದಿಗಳ ಗೂಂಡಾ ವರ್ತನೆ: ಎಎಪಿ ಖಂಡನೆ
ಕೋಲಾರ, ಆ,೨೫- ಜಿಲ್ಲಾ ಆಸ್ಪತ್ರೆ ಎಸ್‌ಎನ್‌ಆರ್ ನಲ್ಲಿ ರೋಗಿಗಳು ಹಾಗೂ ಅವರ ಸಹಾಯಕರ ಮೇಲೆ ಅಲ್ಲಿನ ಸಿಬ್ಬಂದಿಗಳು ಗುಂಡಾಗಳಂತೆ ವರ್ತಿಸುವುದನ್ನು ಆಮ್ ಆದ್ಮಿ ಪಕ್ಷ ಸಹಿಸುವುದಿಲ್ಲ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ ರಮೇಶ್ ಆಕ್ರೋಶ ವ್ಯಕ್ತಪಡ
?ಸಿದರುಪತ್ರಿಕಾ ಹೇಳಿಕೆಯಲ್ಲಿ ಅವರು ಮಾತನಾಡಿ ಸರ್ಕಾರಿ ಜಿಲ್ಲಾ ಕೇಂದ್ರ ಆಸ್ಪತ್ರೆ ಆಗಿರುವ ಎಸ್‌ಎನ್‌ಆರ್ ದೂರದ ಊರುಗಳಿಂದ ದುಬಾರಿ ವೆಚ್ಚದ ಖಾಸಗಿ ಆಸ್ಪತ್ರೆಗಲ್ಲಿ ಚಿಕಿತ್ಸೆ ಪಡೆಯಲಾಗದ ಕಡು ಬಡವರು, ನಿರ್ಗತಿಕರು,ನಿರಾಶ್ರಿತರು, ಕೂಲಿ ಕಾರ್ಮಿಕರಾದ ರೋಗಿಗಳು ಚಿಕಿತ್ಸೆಗೆಂದು ಬಂದರೆ, ಅಲ್ಲಿನ ಸಿಬ್ಬಂದಿಗಳು ತುಂಬಾ ಕ್ರೂರವಾಗಿ ವರ್ತಿಸುವುದು, ರೋಗಿಗಳನ್ನು ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ಎಂಬಂತೆ ಸರಿಯಾದ ಮಾಹಿತಿ ನೀಡದೆ ತಿರುಗಾಡಿಸುವುದು, ಏಕವಚನದಲ್ಲಿ ಸಂಭೋದಿಸುವುದು, ಗದರಿಸುವುದು, ಎದರಿಸುವುದು ಇತ್ಯಾದಿ ಚಟುವಟಿಕೆಗಳನ್ನು ಮಾಡುವುದು,ಔಷಧಿಗಳು ಇಲ್ಲ, ಸಿಬ್ಬಂದಿ ಇಲ್ಲ, ಬೇರೆ ಕಡೆ ನೋಡಿಸಿಕೊ, ಸಮಯ ಮುಗಿದಿದೆ, ನಾಳೆ ಬಾ ಎಂದು ಹೇಳುವುದು ಇತ್ಯಾದಿ.
ವಿಶೇಷವಾಗಿ ರಕ್ತ ಪರೀಕ್ಷಾ ಪ್ರಯೋಗಾಲಯದಲ್ಲಿ ಸಿಬ್ಬಂದಿಗಳ ದೌರ್ಜನ್ಯ, ದಬ್ಬಾಳಿಕೆ, ಗುಂಡಾ ವರ್ತನೆ ಹೆಚ್ಚಾಗಿದ್ದು, ಅದರಲ್ಲೂ ರಾಘವೇಂದ್ರ ಮತ್ತು ಅವರ ಗುಂಪು ಹೆಚ್ಚಾಗಿ ನಡೆದುಕೊಳ್ಳುವುದು ಕಂಡುಬರುತ್ತಿದೆ. ಮುಂದಿನ ದಿನಗಳಲ್ಲಿ ಈ ತರಹದ ನಡುವಳಿಕೆಗಳನ್ನು ಆಸ್ಪತ್ರೆಯಲ್ಲಿ ಸರಿಪಡಿಸದಿದ್ದರೆ ಆಮ್ ಆದ್ಮಿ ಪಕ್ಷವು ಆಸ್ಪತ್ರೆ ಮುಂದೆ ಸಂಬಂಧಿಸಿದವರಿಗೆ ಘೇರಾವ್ ಹಾಕುವ ಮೂಲಕ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇನ್ನಾದರೂ ಮಾನ್ಯ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಸಚಿವರು ಆಗರಗಳ ಕೂಪವಾಗಿರುವ ಜಿಲ್ಲಾ ಕೇಂದ್ರ ಆಸ್ಪತ್ರೆ ಎಸ್‌ಎನ್‌ಆರ್ ನ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡುವ ಮೂಲಕ ರೋಗಿಗಳ ಜೊತೆ ಸಭ್ಯವಾಗಿ ವರ್ತಿಸಿ, ಸರಿಯಾದ ಚಿಕಿತ್ಸೆ ನೀಡುವಂತೆ ಎಚ್ಚರಿಸಿ, ಆಗಿರುವ ಅನಾಹುತಗಳನ್ನು ಸರಿಪಡಿಸುವಲ್ಲಿ ಗಮನ ಹರಿಸಬೇಕೆಂದು ಆಗ್ರಹಿಸಿದರು.