ಮನುಷ್ಯನ ನೆಮ್ಮದಿಗೆ ಧರ್ಮ ಕಾರ್ಯ ಅಗತ್ಯ
ಕಲಬುರಗಿ:ಆ.೧೪: ಪ್ರತಿಯೊಬ್ಬರು ಸುಃಖ, ಶಾಂತಿ, ನೆಮ್ಮದಿ ಜೀವನ ಸಾಗಿಸಬೇಕಾದರೆ ಗುರುವಿನ ಮುಕ್ತಿ ಬೇಕೇ ಬೇಕು. ಇನ್ನು ಕಷ್ಟ ಕಾರ್ಪಣ್ಯಗಳು ನಿವಾರಣೆ ಆಗಬೇಕಾದರೆ ಧರ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕೇಸರಿ ಬೆಟ್ಟದ ಸಾಂಬ ಶಿವಯೋಗಿಶ್ವರ ಮಠದ ತಪೋರತ್ನ, ಉಪಾಚಾರ್ಯ ರತ್ನ, ಬಾಲತಪಸ್ವಿ ದ್ವಿತೀಯ ಸಾಂಬ ಶಿವಾಚಾರ್ಯರು ನುಡಿದರು.
ನಗರ ಹೊರವಲಯದ ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯ ಫರಹತಾಬಾದ್ ಸಮೀಪದ ಕೇಸರಿ ಬೆಟ್ಟದಲ್ಲಿ ಸಾಂಬ ಶಿವಯೋಗಿಶ್ವರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ೩೦ನೇ ಶ್ರಾವಣ ಮಾಸದ ತಪೋನುಷ್ಠಾನ ಸಮಾರಂಭದ ಎರಡನೇ ಸೋಮವಾರ ನಡೆದ ಧರ್ಮಸಭೆಯಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಧರ್ಮ ಕಾರ್ಯದಲ್ಲಿ ನಂಬಿಕೆ, ಭಕ್ತಿಯಲ್ಲಿ ಶ್ರದ್ಧೆ ಮತ್ತು ದೇವರಲ್ಲಿ ಪ್ರಾರ್ಥನೆ ಹೊಂದಿದ್ದಾಗ ಮಾತ್ರ ಜೀವನದಲ್ಲಿ ನೆಮ್ಮದಿ, ಮುಕ್ತಿ ಪ್ರಾಪ್ತಿಯಾಗಲಿದೆ. ಈ ದಿಸೆಯಲ್ಲಿ ಶ್ರಾವಣ ಮಾಸ ಅಧ್ಯಾತ್ಮ, ಧಾರ್ಮಿಕ ಕಾರ್ಯ ಮತ್ತು ಪುರಾಣ ಪ್ರವಚನಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಲೂರ ಸಂಸ್ಥಾನ ಹಿರೇಮಠದ ಪೂಜ್ಯ ಕೆಂಚವೃಸಭೇAದ್ರ ಶಿವಾಚಾರ್ಯರು,
ಕಡಕೋಳದ ಪೂಜ್ಯ ರುದ್ರಮುನಿ ಶಿವಾಚಾರ್ಯರು, ನಿಡಗುಂದಾದ ಕರುಣೇಶ್ವರ ಶಿವಾಚಾರ್ಯರು, ಚೌಡಾಪುರಿನ ಚಿನ್ಮಯಗಿರಿಯ ಪೂಜ್ಯ ವೀರಮಹಾಂತ ಶಿವಾಚಾರ್ಯರು, ಚಂದನಕೇರಾದ ಪೂಜ್ಯ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ನಾಲತ್ವಾಡ್ ನ ಗುರುಸ್ವಾಮಿ, ಶಿರಡಿಯ ನಾಗಭೂಷಣ ಬಾಬಾ, ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಲಿಂಗರಾಜಪ್ಪ ಅಪ್ಪ, ಆರ್‌ಎಸ್‌ಎಸ್ ಪ್ರಮುಖ ಕೃಷ್ಣಾ ಜೋಶಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಸುಜಾತಾ ರಾಜವರ್ಧನ ಗುಗಳೆ, ಅನಿತಾ ನಾಗಪ್ಪ ಹಾರಕೂಡೆ, ಇಂದುಬಾಯಿ ಬಾಬುರಾವ ಮಾಲಿಪಾಟೀಲ್, ಪಲ್ಲವಿ ಮಂಜುನಾಥ ಧನಶೆಟ್ಟಿ, ಕಾಶಮ್ಮ ಶಂಭುಲಿAಗ ಧನಶೆಟ್ಟಿ, ಪ್ರಿಯಾಂಕ್ ರಾಜಶೇಖರ ಧನ್ನಶೆಟ್ಟಿ, ಸಂತೋಷಕುಮಾರ, ಆನಂದಕುಮಾರ, ಅನಿಲಕುಮಾರ ಗೌರೆ, ಅನಿಲಕುಮಾರ, ಶಿವಕುಮಾರ ನಿಟ್ಟೂರಮಠ ಸೇರಿದಂತೆ ಅನೇಕ ಭಕ್ತಾದಿಗಳು ಭಾಗವಹಿಸಿದ್ದರು.