ಉಡುಪಿ ಸೈಬರ್ ಕ್ರೈಮ್: ಕಸ್ಟಮ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ೧.೩೩ ಕೋಟಿ ವಂಚನೆ | ಇನ್ನೊಂದು ಪ್ರಕರಣದಲ್ಲಿ ೩೩ ಲಕ್ಷ ವಂಚನೆ!

ಉಡುಪಿ: ಜಿಲ್ಲೆಯಲ್ಲಿ ಆನ್ಲೈನ್ ಖದೀಮರ ಜಾಲಾಕ್ಕೆ ಮೋಸ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಾಗರಿಕರು ಆನ್ಲೈನ್ ಲಿಂಕ್ ಅಥವಾ ಸುಳ್ಳು ಬೆದರಿಕೆಗಳನ್ನು ನಂಬಿ ಲಕ್ಷದಿಂದ ಕೋಟ್ಯಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣದಲ್ಲಿ ಒರ್ವರು ೧.೩೩ ಕೋಟಿ ಮತ್ತು ಇನ್ನೋರ್ವ ವ್ಯಕ್ತಿ ೩೩ ಲಕ್ಷ ರೂಪಾಯಿಯನ್ನು ಆನ್ಲೈನ್ ಜಾಲಾಕ್ಕೆ ಸಿಲುಕಿ ಕಳೆದುಕೊಂಡಿದ್ದಾರೆ.
ಅರುಣ್ ಕುಮಾರ್ (೫೩) , ಉಡುಪಿ ಇವರಿಗೆ ದಿನಾಂಕ:೨೯.೦೭.೨೦೨೪ ರಂದು ಮೊಬೈಲ್ ನಂಬ್ರ +೯೧೯೨೩೨೦೩೭೫೮೪ ನೇ ನಂಬ್ರದಿಂದ  ಅಪರಿಚಿತರು ಕರೆಮಾಡಿ  ಕಸ್ಟಮ್ಸ್ ನಿಂದ ಕರೆಮಾಡುವುದಾಗಿ ತಿಳಿಸಿ ನಿಮ್ಮ ಆಧಾರ್ ನಂಬ್ರ ಬಳಸಿ ಬುಕ್ ಆಗಿರುವ ಈeಜಇx  ಕೊರಿಯರ್ ನಲ್ಲಿ ೫ ಪಾಸ್‌ಪೋರ್ಟ್, ೫ ಎ.ಟಿ.ಎಮ್ ಕಾರ್ಡ್, ೨೦೦ ಗ್ರಾಂ ಎಂ.ಡಿ.ಎಮ್.ಎ ಹಾಗೂ ೫೦೦೦ USಆ ಇದ್ದು ಸದ್ರಿ ಕೋರಿಯರ್ ಪ್ರಸ್ತುತ ಮುಂಬಯಿ ಕಸ್ಟಮ್ಸ್ ರವರ ವಶದಲ್ಲಿ ಇರುವುದಾಗಿ ತಿಳಿಸಿರುತ್ತಾರೆ.   ಸದ್ರಿ ಕೋರಿಯರ್ ತಾನು ಮಾಡಿಲ್ಲವಾಗಿ ತಿಳಿಸಿದಾಗ ಅಪರಿಚಿತ ವ್ಯಕ್ತಿ ಆತನ ಮೇಲಾಧಿಕಾರಿಯವರಿಗೆ ಹಾಟ್‌ಲೈನ್ ಮುಖೇನಾ ಸಂಪರ್ಕ ಕಲ್ಪಿಸಿಕೊಟ್ಟಿದ್ದು, ಸದ್ರಿ  ಹಾಟ್‌ಲೈನ್ ನಲ್ಲಿ ಪೊಲೀಸ್ ಅಧಿಕಾರಿ ಎಂದು ನಂಬಿಸಿ ನಿಮ್ಮ  ಆಧಾರ್ ಕಾರ್ಡ್ ನ ದುರ್ಬಳಕೆಯ ಬಗ್ಗೆ ದೂರನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿ ನಮ್ಮ ಕೇಂದ್ರ ಕಚೇರಿಗೆ ಕರೆಯನ್ನು ಫಾರ್ವಡ್ ಮಾಡುವುದಾಗಿ ತಿಳಿಸಿ ನಂತರದಲ್ಲಿ ಕರೆ ಸ್ವೀಕರಿಸಿದ ವ್ಯಕ್ತಿ ನಿಮ್ಮ ಆಧಾರ್ ಕಾರ್ಡ್ ವಿವಿಧ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿದ್ದು ಹಾಗೂ ಭಯೋತ್ಪಾದಕರು ಸಿಮ್ ಖರೀದಿಸಲು ಬಳಸಿರುವುದಾಗಿ ತಿಳಿಸಿರುತ್ತಾರೆ.
ಈ ದೂರಿಗೆ ಸಂಬಂಧಿಸಿ ನಿಮ್ಮನ್ನು ವರ್ಚುವಲ್ ಆರೆಸ್ಟ್ ಮಾಡುವುದಾಗಿ ತಿಳಿಸಿದ್ದು Sಞಥಿಠಿe ಂಠಿಠಿ ಮೂಲಕ ವಿಡಿಯೋ ಮಾನಿಟರಿಂಗ್ ಮಾಡುವುದಾಗಿ ತಿಳಿಸಿದ್ದು ಅದರಂತೆ ಸಂತ್ರಸ್ಥರು ದಿನಾಂಕ:೨೯/೦೭/೨೦೨೪ ರಿಂದ ದಿನಾಂಕ:೦೯/೦೮/೨೦೨೪ ರ ತನಕ ಅವರ ಮನೆಯ ರೂಮ್ ಒಂದರಲ್ಲಿ ಇರುವಂತೆ ಹಾಗೂ ಬೇರೆಯವರೊಂದಿಗೆ ಸಂಪರ್ಕಿಸದಂತೆ  ಸೂಚಿಸಿರುತ್ತಾರೆ.
ನಂತರದಲ್ಲಿ ಸದ್ರಿ ಪ್ರಕರಣವನ್ನು ಸರಿಪಡಿಸಲು ಅಪರಿಚಿತರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸುವಂತೆ ತಿಳಿಸಿದ್ದು ಅದರಂತೆ  ತನ್ನ ಹೆಚ್.ಡಿ.ಎಫ್ .ಸಿ ಬ್ಯಾಂಕ್ ಖಾತೆ ಯಿಂದ ದಿನಾಂಕ:೦೬/೦೮/೨೦೨೪ ರಿಂದ ದಿನಾಂಕ:೦೯/೦೮/೨೦೨೪ರ ತನಕ ಹಂತ ಹಂತವಾಗಿ ಒಟ್ಟು ರೂ.೧,೩೩,೮೧,೦೦೦/- ಹಣವನ್ನು ವರ್ಗಾಯಿಸಿರುತ್ತಾರೆ.
ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: ೬೧/೨೦೨೪ಕಲಂ: ೬೬ (ಸಿ), ೬೬ (ಡಿ)   ಐ.ಟಿ. ಆಕ್ಟ್. ನಂತೆ ಪ್ರಕರಣ ದಾಖಲಾಗಿರುತ್ತದೆ.
ಎರಡನೇ ಪ್ರಕರಣ:
ದಿನಾಂಕ ೨೪/೦೬/೨೦೨೪ ರಂದು  ಪ್ರಕರಣದ ಸಂತ್ರಸ್ಥ ಉಪೇಂದ್ರ (೭೨) ಇವರನ್ನು ಯಾರೋ ಅಪರಿಚಿತ ವ್ಯಕ್ತಿಗಳು Whಚಿಣs ಂಠಿಠಿ ನಲ್ಲಿ ಮೋತಿಲಾಲ್ ಒಸ್ವಾಲ್ ಪ್ರವೇಟ್ ವೇಲ್ತ್ ಮ್ಯಾನೇಜ್ಮೆಂಟ್ ಗ್ರೂಪ್ ಸೇರಿಸಿದ್ದು, ಮೋತಿಲಾಲ್ ಒಸ್ವಾಲ್ ಪ್ರಾವಟ್ ವೇಲ್ತ್ ಮ್ಯಾನೇಜ್ಮೆಂಟ್ ಗ್ರೂಪ್ ನ ಗಿIP-೨೦೩-೮೪೫ ಎಂಬ ಅಕೌಂಟ್ ನ್ನು ನೀಡಿರುತ್ತಾರೆ.
Whಚಿಣs ಂಠಿಠಿ ನಲ್ಲಿ ಟ್ರೇಡಿಂಗ್ ಬಗ್ಗೆ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ಪಿರ್ಯಾದಿದಾರರನ್ನು ನಂಬಿಸಿ, ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ, ಹಣವನ್ನು ಹೂಡಿಕೆ ಮಾಡಲು ತಿಳಿಸಿದ್ದು, ಇದನ್ನು ನಂಬಿದ ಪಿರ್ಯಾದಿದಾರರು ಅಪರಿಚಿತರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ದಿನಾಂಕ ೦೪/೦೭/೨೦೨೪ ರಿಂದ ದಿನಾಂಕ ೨೪/೦೭/೨೦೨೪ ರ ತನಕ ಹಂತ ಹಂತವಾಗಿ ಒಟ್ಟು ೩೩,೧೦,೦೦೦/- ಹಣವನ್ನು ಡಿಪಾಸಿಟ್ ಮಾಡಿಸಿಕೊಂಡಿದ್ದು ತದನಂತರ ಪಿರ್ಯಾದಿದಾರರು ಹೂಡಿಕೆ ಮಾಡಿದ ಹಣವನ್ನಾಗಿ ಅಥವಾ ಲಾಭಾಂಶವನ್ನಾಗಲಿ ಈವರೆಗೆ ನೀಡದೇ ನಂಬಿಸಿ, ಮೋಸದಿಂದ ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ ೬೨/೨೦೨೪ ಕಲಂ: ೬೬(ಅ) ೬೬(ಆ) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.