ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ವೈದ್ಯರಿಂದ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.14- ಕೋಲ್ಕತಾದ ಆರ್‍ಜಿಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಮಂಗಳವಾರ ಚಾಮರಾಜನಗರದಲ್ಲಿ ಜೂನಿಯರ್ ಡಾಕ್ಟರ್ಸ್ ಅಸೋಸಿಯೇಷನ್ ವತಿಯಿಂದ ಮೊಂಬತ್ತಿ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು.
ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನದ ವರೆಗೆ ಮೊಂಬತ್ತಿ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಡಾ.ಮಾರುತಿ ಮಾತನಾಡಿ ಕೋಲ್ಕತಾದ ಆರ್‍ಜಿಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಮಾಡಿರುವುದು ಖಂಡನೀಯ.
ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಎಲ್ಲಾ ವೈದ್ಯರು ಹಾಗೂ ವಿದ್ಯಾರ್ಥಿಗಳು ಈ ಘಟನೆಯನ್ನು ಖಂಡಿಸುತ್ತೇವೆ. ಇಂತಹ ಘಟನೆ ಯಾವ ವೈದ್ಯಕೀಯ ಕಾಲೇಜಿನಲ್ಲೂ ನಡೆಯ ಬಾರದು.
ನಾವು ಯಾವುದೇ ಭಯವಿಲ್ಲದೇ ಚಿಕಿತ್ಸೆ ನೀಡಬೇಕು ಅದಕ್ಕೆಡೀನ್, ಜಿಲ್ಲಾಡಳಿತ, ಜಿಲ್ಲಾ ಪೆÇಲೀಸ್ ಹಾಗೂ ರಾಜ್ಯ ಸರ್ಕಾರ ಎಲ್ಲಾ ರೀತಿಯ ಭದ್ರತೆಯನ್ನು ಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಡೀನ್ ಮಂಜುನಾಥ್, ಪ್ರಾಂಶುಪಾಲರು ಡಾ.ಗಿರೀಶ್ ವಿ.ಪಾಟೀಲ್, ಡಾ.ಕೃಷ್ಣ ಪ್ರಸಾದ್, ಡಾ.ಕಿರಣ್, ಡಾ.ಆರ್.ಮೂರ್ತಿ ಸಿ.ವಿ, ಡಾ. ಪ್ರದೀಪ್.ಎಂ.ಆರ್, ಡಾ.ಮಹೇಶ್ವರ.ಎನ್, ಡಾ.ಶ್ರೀನಿವಾಸ. ಕೆ, ಡಾ.ಅಜಯ್‍ಕೆಟಿ, ಸತೀಶ್.ಜೆ.ವಿ, ಡಾ. ಪುರುμÉೂೀತ್ತಮ. ಕೆ, ಡಾ ಶ್ರೀಧರ್ ಪ್ರಸಾದ್ ವೈ ಪಿ, ಡಾ. ಪವನ್ ಸಿ, ಡಾ ಸ್ನೇಹ ಶ್ರೀ, ಡಾಚೈತನ್ಯಆರ್, ಡಾ. ನಂದಕಿಶೋರ್ ಬಿಆರ್, ಡಾತರುಣ್‍ಎಸ್ ಯರಬಾಳ್, ಡಾ ದೀಪಾಮಿಶ್ರಾ, ಡಾಗೌತಮಿ ಎಂ, ಡಾಚೇತನ್‍ಕುಮಾರ್, ಡಾ.ದಿವ್ಯಾಕಟಿಯಾರ್, ಡಾ.ಸಂಜುಎ.ಎಸ್, ಡಾ. ಸಮೃದ್ಧಿ ರಾಣೆ, ಡಾ. ಹೃದಯ ಪಿ, ಡಾ. ಅತುಲ್ ಪಾಂಡೆ, ಡಾ. ತೇಜಸ್ ಎ, ಡಾ.ನಿಹಾರ್ ಸಿ.ಕೆ, ಡಾಅಭಿμÉೀಕ್‍ಕುಮಾರ್ ಎಂ, ಡಾಅರ್ಚನಾ ಶ್ರೀಧರ್ ಶೇಟ್, ಡಾ ಸೈಯದ್‍ಜೀಶನ್ ಹುಸೇನ್, ಡಾ.ಎಸ್.ಜಾಫರ್ ಸಲ್ಮಾನ್‍ಖಾನ್ ಡಾ.ಆರ್.ಶೆಟ್ಟಿ ರಕ್ಷಿತ್‍ಉಮೇಶ್ ಡಾ.ಕೀರ್ತಿಆರಾಧ್ಯಡಾ.ವಿನುತಾ ಡಾ.ತನ್ಮಯ್ ಇದ್ದರು