ಕನ್ನಡ ಚಿತ್ರಗೀತೆ ಸ್ಪರ್ಧೆಯಲ್ಲಿ ಮೈಸೂರಿನ ಇಬ್ಬರು ಗಾಯಕರಿಗೆ ಅತ್ಯದ್ಭುತ ಸ್ಥಾನ
ಸಂಜೆವಾಣಿ ನ್ಯೂಸ್
ಮೈಸೂರು, ಆ.14- ರಾಜ್ಯಮಟ್ಟದ ಚಲನ ಚಿತ್ರಗೀತೆ ಸ್ಪರ್ಧೆಯಲ್ಲಿ ಮೈಸೂರಿನ ಇಬ್ಬರು ಗಾಯಕರಿಗೆ ಅತ್ಯಧ್ಬುತ ಸ್ಥಾನ ಲಭಿಸಿದೆ. ಮೈಸೂರಿನ ನವಗಾನ ಮಿಲನ ಟ್ರಸ್ಟ್‍ಗಾಯಕರಾದ ಕಾಳಿಹುಂಡಿ ಶಿವಕುಮಾರ್ ಮತ್ತು ಕುದೇರು.ಎಸ್ ಪರಶಿವಮೂರ್ತಿರವರುಗಳು ಪ್ರಥಮ ಸ್ಥಾನ ಪಡೆದಿದ್ದಾರೆ.
ಬೆಂಗಳೂರಿನ ಝೇಂಕಾರ ಸ್ವರ ಮಧುರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯರವರು 2024 ರ ಸಂಭ್ರಮ ಚಲನ ಚಿತ್ರಗೀತೆಗಳ ಕರೋಕೆಗಾಯನ ಸ್ಪರ್ಧೆಯನ್ನು ಇತ್ತೀಚೆಗೆ ಏರ್ಪಡಿಸಿದ್ದರು.
ಈ ಸ್ಪರ್ಧೆಯಲ್ಲಿ ಪಿ.ಬಿ. ಶ್ರೀನಿವಾಸ್ ಮತ್ತು ಎಸ್ ಜಾನಕಿರವರಧ್ವನಿಯಲ್ಲಿರುವ ಚಿತ್ರಗೀತೆಯನ್ನು ಕಡ್ಡಾಯವಾಗಿ ಹಾಡಬೇಕಾಗಿತ್ತು. ಈ ಒಂದು ಸ್ಪರ್ಧೆಯಲ್ಲಿ ರಾಜ್ಯದ ಅನೇಕ ಜಿಲ್ಲೆ, ತಾಲೂಕಿನಿಂದ ರಾಜ್ಯದ ವಿವಿಧೆಡೆಯಿಂದ 38 ಗಾಯಕ, ಗಾಯಕಿಯರು ಭಾಗವಹಿಸಿದ್ದರು.
ಮೈಸೂರಿನ ನವಗಾನ ಮಿಲನ ಟ್ರಸ್ಟ್ ನ ಗಾಯಕರಾದ ಕಾಳಿಹುಂಡಿ ಶಿವಕುಮಾರ್ ರವರು “ರಾಜ ನನ್ನ ರಾಜ ಚಿತ್ರದ ನಿನದೇ ನೆನಪು ದಿನವೂ ಮನದಲ್ಲಿ ಗೀತೆಯನ್ನು ಮತ್ತು ಕುದೇರುಎಸ್. ಪರಶಿವಮೂರ್ತಿ ರವರು ಬಂಗಾರದ ಮನುಷ್ಯ ಚಿತ್ರದ ನಗು ನಗುತಾ ನಲಿ ನಲಿ ಈ ಚಿತ್ರ ಗೀತೆಯನ್ನು ಹಾಡಿ ಅತ್ಯದ್ಭುತ ಸ್ಥಾನ ಪಡೆದಿದ್ದಾರೆ.
ಇವರು ಈ ಹಿಂದೆಯೂ ಕೂಡ ಮೈಸೂರಿನಿಂದ ಭಾಗವಹಿಸಿ, ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಜೊತೆಗೆ ಮೈಸೂರಿನ ಹಲವು ಉದ್ಯಾನವನಗಳಲ್ಲಿ, ಗಣಪತಿಯ ಕಾರ್ಯಕ್ರಮಗಳಲ್ಲಿ, ಶಿವರಾತ್ರಿ ಹಬ್ಬದಂದು, ಅನೇಕ ಸಭೆ ಸಮಾರಂಭಗಳಲ್ಲಿ ಉಚಿತವಾಗಿ ಹಲವು ಗೀತೆಗಳನ್ನೂ ಸಾದರಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಝೇಂಕಾರ ಸ್ವರ ಮಧುರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯದ ಅಧ್ಯಕ್ಷ ಗೌರಿಶಂಕರ ಚಟ್ಟಿ, ಕಾರ್ಯದರ್ಶಿ ಸಂಜಯಕರಿ ಹುಬ್ಬಳ್ಳಿ, ಉಪಾಧ್ಯಕ್ಷ ಕೆ .ಅಯ್, ಶ್ಯಾವಿ, ಮಲ್ಲಿಕಾರ್ಜುನ ಗೋಸಿ ಮೈಸೂರಿನ ನವ ಗಾನ ಮಿಲನ ಟ್ರಸ್ಟ್‍ನ ಸದಸ್ಯರು ಅಭಿನಂದಿಸಿದ್ದಾರೆ.