ರಂಗಾಯಣಕ್ಕೆ ಈಗ ರಾಜು ತಾಳಿಕೋಟಿ ನಿರ್ದೇಶಕ
ಜಿ.ಪಿ. ಘೋರ್ಪಡೆ
ತಾಳಿಕೋಟೆ:ಆ.೧೪: ನಾಟಕದ ಕಲೆಯ ಮೂಲಕ ಕಲಿಯುಗದ ಕುಡುಕನೆಂಬ ಖ್ಯಾತಿಯನ್ನು ಹೊಂದಿರುವ ತಾಳಿಕೋಟೆಯ ರಾಜು ತಾಳಿಕೋಟಿ ಈಗ ಧಾರವಾಡದ ರಂಗಾಯಣಕ್ಕೆ ನಿರ್ದೇಶಕನನ್ನಾಗಿ ರಾಜ್ಯ ಸರ್ಕಾರವು ನೇಮಕಗೊಳಿಸುವದರೊಂದಿಗೆ ಅಪ್ರತಿಮ ಪ್ರತಿಭಾವಂತ ನಾಟಕಕಾರ ಚಲನಚಿತ್ರನಟನನ್ನು ಗುರುತಿಸಿದೆ.
ಸೋಮವಾರರಂದು ರಾಜು ತಾಳಿಕೋಟಿ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರವು ಕಳೆದ ೨೦೨೩ರ ಮಾರ್ಚ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಸಮಯದಲ್ಲಿ ನಿರ್ದೇಶಕರಾಗಿದ್ದ ರಮೇಶ ಪರವಿ ನಾಯ್ಕರ ಅಧಿಕಾರವಧಿ ಪೂರ್ಣಗೊಂಡಿತ್ತು. ನಂತರ ಅಧಿಕಾರಕ್ಕೆ ಬಂದ ರಾಜ್ಯಸರ್ಕಾರವು ರಂಗಾಯಣಕ್ಕೆ ನಿರ್ದೇಶಕರನ್ನು ನೇಮಕಗೊಳಿಸುವಲ್ಲಿ ವಿಳಂಭತೆ ಅನುಸರಿಸುತ್ತಾ ಬಂದಿತ್ತು ಇದರಿಂದ ಒಂದುವರೇ ವರ್ಷದಿಂದ ಈ ಸ್ಥಾನವು ಹಾಗೆ ಖಾಲಿ ಉಳಿದಿತ್ತು ಕೊನೇಗೂ ರಾಜ್ಯ ಸರ್ಕಾರವು ಆ ಸ್ಥಾನವನ್ನು ತುಂಬುವದರೊAದಿಗೆ ರಂಗಾಯಣಕ್ಕೆ ಮತ್ತೇ ಮೆರಗುಬರುವಂತೆ ಮಾಡಿದೆ.
ಧಾರವಾಡದ ರಂಗಾಯಣ ನಿರ್ದೇಶಕ ಸ್ಥಾನಕ್ಕೆ ನಾಟಕ ಕಲಾವಿಧ ಚಲನಚಿತ್ರ ನಟ ರಾಜು ತಾಳಿಕೋಟಿ, ಜಾನಪದ ಕಲಾವಿದೆ ವಿಶ್ವೇಶ್ವರಿ ಹಿರೇಮಠ, ಮಹಾದೇವ ಹಡಪದ ಒಳಗೊಂಡು ಮೊದಲಾದವರು ಅರ್ಜಿಸಲ್ಲಿಸಿದ್ದರು. ಅದರಲ್ಲಿ ಅತೀ ಕೆಳಹಂತದಿAದ ಬೆಳೆದುಬಂದ ರಾಜು ತಾಳಿಕೋಟಿ ಅವರನ್ನು ರಾಜ್ಯ ಸರ್ಕಾರವು ಗುರುತಿಸಿರುವದು ಹೆಮ್ಮೆಯ ಸಂಗತಿಯಾಗಿದೆ.
ರಾಜು ತಾಳಿಕೋಟಿ ಬೆಳೆದುಬಂದ ದಾರಿ :- ರಂಗಭೂಮಿಯ ಕಲೆಯನ್ನು ಹೊಂದಿದ್ದ ರಾಜು ತಾಳಿಕೋಟಿ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದ ಪರಮಭಕ್ತರಾಗಿದ್ದರು, ಶ್ರೀಮಠದ ಅಂದಿನ ಶ್ರೀಗಳಾದ ಲಿಂ.ವಿರಕ್ತಶ್ರೀಗಳೊAದಿಗೆ ಉತ್ತಮ ಒಡನಾಟ ಹೊಂದಿದ್ದ ಅವರು ತಮ್ಮ ನಾಟಕ ಕಲೆಯನ್ನು ಪ್ರದರ್ಶಿಸಲು ಶ್ರೀಗಳ ಅಪ್ಪಣೆಯಂತೆ ಶ್ರೀ ಖಾಸ್ಗತೇಶ್ವರ ನಾಟ್ಯ ಸಂಘವನ್ನು ಕಟ್ಟಿಕೊಂಡು ಊರಿಂದ ಊರಿಗೆ ಕಂಪನಿಯ ಮೂಲಕ ನಾಟಕ ಕಲೆಯನ್ನು ಪ್ರದರ್ಶಿಸುತ್ತಾ ಸಾಗಿದರು, ಅಂದು ಶ್ರೀಗಳು ರಾಜು ತಾಳಿಕೋಟಿ ಅವರಿಗೆ ನೀನು ಕಟ್ಟುವ ಶ್ರೀಖಾಸ್ಗತೇಶ್ವರ ನಾಟಕ ಕಂಪನಿ ರಾಜ್ಯದಲ್ಲಿ ಗುರುತಿಸಿಕೊಳ್ಳುತ್ತದೆ ಅದರಿಂದ ನೀನು ರಾಜ್ಯದಲ್ಲಿಯೇ ದೊಡ್ಡ ಹೆಸರು ಮಾಡುತ್ತಿದಿ ನಾಟಕ ಕಲೆಯನ್ನು ಎಂದೂ ಬಿಡಬೇಡ ನೀನಗೆ ಉಜ್ವಲವಾದ ಭವಿಷ್ಯ ದೊರೆಯಲಿದೆ ಎಂದು ಆಶಿರ್ವದಿಸಿದ್ದರು, ಅಂದು ಕಟ್ಟಿದ ಶ್ರೀ ಖಾಸ್ಗತೇಶ್ವರ ನಾಟ್ಯ ಸಂಘ ಇಂದು ಕೂಡಾ ಅವರು ಮುಚ್ಚಿಲ್ಲಾ ಚಿತ್ರರಂಗವನ್ನು ಪ್ರವೇಶಿಸಿದರೂ ಕೂಡಾ ನಾಟಕ ಕಲೆಯನ್ನು ಮರೆಮಾಚದೇ ಸಿನಿಮಾರಂಗದಲ್ಲಿಯೂ ಅಳವಡಿಸುವ ಕಾರ್ಯ ಮಾಡಿ ರಾಜ್ಯದ ಜನರ ಅಚ್ಚುಮೆಚ್ಚಿನ ಮಗನಾಗಿ ಹೊರಹೊಮ್ಮಿದ್ದಾರೆ.
ರಾಜು ತಾಳಿಕೋಟಿ ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕಸಿಂದಿಗಿ ಗ್ರಾಮದವರು. ಇವರ ಮೂಲ ಹೆಸರು ರಾಜೇಸಾಬ ಮುಕ್ತುಮಸಾಬ್ ತಾಳಿಕೋಟಿ. ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಕಲಾವಿದರಾಗಿ ಗುರುತಿಸಿಕೊಳ್ಳುವದರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಪ್ರಸ್ಥುತ ಇವರು ಈಗ ರೈತರೂ ಕೂಡಾ ಆಗಿದ್ದು ಚಿಕ್ಕ ಸಿಂಧಗಿ ಅಲ್ಲದೇ ವಿವಿಧಡೆ ತಮ್ಮ ಕುಟುಂಭದೊAದಿಗೆ ದಾಳಿಂಬೆ, ದ್ರಾಕ್ಷಿ, ಚಿಕ್ಕು, ಅಲ್ಲದೇ ಒಣಬೇಸಾಯದ ಕೃಷಿಯಲ್ಲಿ ತೊಡಗಿದ್ದಾರೆ.
ಶಾಲೆ ಕಲೆಯುವಾಗ ಮನೆಯಲ್ಲಿ ಜಗಳವಾಡಿ ನಾಲ್ಕನೇ ತರಗತಿಗೆ ಶಾಲೆಗೆ ವಿದಾಯ ಹೇಳಿದ ರಾಜು ತಾಳಿಕೋಟಿ ಅತ್ಯಂತ ಶ್ರೇಷ್ಠ ಶಿಕ್ಷಣವಿಲ್ಲದಿದ್ದರೂ ತಂದೆ ತಾಯಿಯಿಂದ ಒಳ್ಳೆಯ ಸಂಸ್ಕಾರವನ್ನು ಪಡೆದುಕೊಂಡ ಇವರು ಬಸ್ಟಾö್ಯಂಡನಲ್ಲಿ ಮತ್ತು ರಸ್ತೆಯಲ್ಲಿ ಪಾಪಡಿ, ಚಕ್ಕಲಿ, ಆಯ್‌ಸ್ಕಿçÃಮ್, ಮಾರಾಟ ಮಾಡಿದ್ದಲ್ಲದೇ ಹೋಟೆಲ್‌ದಲ್ಲಿಯೂ ಕೆಲವು ವರ್ಷಗಳ ಕಾಲ ಕ್ಲೀನರ್ ಆಗಿ ದುಡಿಮೆಗೆ ಸೇರಿಕೊಂಡ ಇವರು ಚಲನಚಿತ್ರ ಮಂದಿರಗಳಲ್ಲದೇ ಕೆಲವು ನಾಟಕ ಕಂಪನಿಗಳಲ್ಲಿ ಗೇಟ್ ಕೀಪರ್ ಆಗಿ ಹೊಟ್ಟೆಪಾಡಿಗೆ ಕೆಲಸಗಳನ್ನು ಮಾಡಿ ಎಲ್ಲ ಕೆಲಸಗಳಲ್ಲಿಯೂ ಸೈ ಎನ್ನಿಸಿಕೊಂಡವರು.
ನಂತರ ಶ್ರೀವಿರಕ್ತಶ್ರೀಗಳ ಅಪ್ಪಣೆಯಂತೆ ನಾಟಕ ಕಂಪನಿಯನ್ನು ಕಟ್ಟಿಕೊಂಡ ಅವರು ಹೊಟ್ಟೆ ತುಂಬಿಸುಕೊಳ್ಳಲು ಹರಸಾಹಸ ಪಟ್ಟವರ ಸಾಲಿನಲ್ಲಿ ಸೇರಿದವರೂ ಕೂಡಾ ಹೌದು, ಇಬ್ಬರ ಹೆಂಡಿರ ಮುದ್ದಿನ ಕೃಷ್ಣನಂತೆ ಇಬ್ಬರನ್ನು ಪತ್ನಿಯರನ್ನಾಗಿ ಸ್ವಿಕರಿಸಿದ ಇವರಿಗೆ ಪ್ರತಿ ಹಂತದಲ್ಲಿಯೂ ಯಾವುದೇ ಎಡರು ತೊಡರುಗಳು ಬರದ ಹಾಗೆ ಪ್ರತಿ ಕೆಲಸದಲ್ಲಿಯೂ ಕೈ ಜೋಡಿಸುತ್ತಾ ಸಾಗಿರುವ ಪತ್ನಿಯರು ಅವರ ಬೆಳವಣಿಗೆಯಲ್ಲಿ ಅರ್ದದಷ್ಟು ಪಾಲವನ್ನು ಅಡಗಿಸಿಟ್ಟಿದ್ದಾರೆಂದರೆ ತಪ್ಪಾಗಲಾರದು.